“ಇಂಡಿಯಾ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಸೊಸೈಟಿ” ದೆಹಲಿ ವತಿಯಿಂದ ಬಂದಿರುವ ರಾಷ್ಟ್ರೀಯ ಪ್ರಶಸ್ತಿಯಾದ “ಭಾರತ ರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್”ಅನ್ನು ಗೌರವಯುತವಾಗಿ ತಿರಸ್ಕರಿಸಿದ್ದೇನೆ.

2020-2021ರ ಸಮಾಜ ಸೇವೆಯನ್ನು ಗುರುತಿಸಿ “Economic growth and national integration “Conference ಕಾರ್ಯಕ್ರಮದಲ್ಲಿ “ಭಾರತ ರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್” ನೀಡಲು ಸಂಸ್ಥೆ ನಿರ್ಧರಿಸಿತ್ತು. ಕೇಂದ್ರ ಸಚಿವರು’ ಸಂಸದರು ಒಳಗೊಂಡಂತೆ ದೇಶದ ಅತ್ಯುನ್ನತ ಪದವಿಯನ್ನು ಹೊಂದಿರುವ ಅತಿಥಿಗಳು ಆಗಮಿಸುವ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು ಸಂತಸ ನೀಡಿತ್ತು.

ಆದರೆ ಕರ್ನಾಟಕದ ಹೆಮ್ಮೆಯ ಪುತ್ರ ಪವರ್*ಪುನೀತ್ ರಾಜ್ ಕುಮಾರ್ ನಿಧನದಿಂದ ಇಡೀ ಕರ್ನಾಟಕ ರಾಜ್ಯವೇ ಶೋಕ ವ್ಯಕ್ತಪಡಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪಡೆದು ಸಂಭ್ರಮಿಸುವುದು ಸೂಕ್ತವಲ್ಲ ಹಾಗೂ ಅದು ನನಗೆ ಸಂತಸವನ್ನು ಸಹ ನೀಡುವುದಿಲ್ಲವಾದ್ದರಿಂದ ಗೌರವಯುತವಾಗಿ ಮೇಲ್ಕಂಡ ಪ್ರಶಸ್ತಿಯನ್ನು ವಾಪಸ್ ನೀಡಿದ್ದೇನೆ ಕ್ಷಮಿಸಿ ಎಂದು ಹೇಳಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…