ಶಿವಮೊಗ್ಗ ನ್ಯೂಸ್…
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ನಿಕಟ ಪೂರ್ವ ಅಧ್ಯಕ್ಷ ಡಿ.ಬಿ ಶಂಕರಪ್ಪ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಅವರ ಗೆಳೆಯರ ಬಳಗ ಮನವಿ ಮಾಡಿದೆ.
ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ರಂಜನಿ ದತ್ತಾತ್ರಿ, ರುದ್ರಮುನಿ ಸಜ್ಜನ್, ಗೊಪಜ್ಜಿ ನಾಗಪ್ಪ ಸೇರಿದಂತೆ ಹಲವು ಗೆಳೆಯರು ಡಿ.ಬಿ ಶಂಕರಪ್ಪ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಡೋಜ ಮಹೇಶ ಜೊಷಿಯವರನ್ನು ರಾಜ್ಯಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಡಿ.ಬಿ ಶಂಕರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಪ್ರಾಮಾಣಿಕವಾಗಿ ಮತ್ತು ಜವಬ್ಧಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ, ಸಾಹಿತ್ಯ ಚಟುವಟಿಕೆಗಳ ನಡೆಸುವ ಮೂಲಕ ಸಾಹಿತ್ಯದ ವಿಸ್ತಾರವನ್ನ ಹೆಚ್ಚಿಸಿದ್ದಾರೆ.
ಕೃಷಿ, ದಲಿತ, ವೈದ್ಯ ಸಮ್ಮೇಳನಗಳನ್ನು ನೂರಾರು ಗೊಷ್ಠಿಗಳನ್ನು ನಡೆಸಿದ್ದಾರೆ. ಅನೇಕ ಸಾಹಿತ್ಯ ವೃಧಿಕೆಗಳನ್ನ ನಿರ್ಮಿಸಿ ಸಾಹಿತಗಯದ ಹಿರಿಮೆಗೆ ಪಾತ್ರರಾಗಿದ್ದಾರೆ. ಎಲ್ಲಾ ಜಾತಿಯವರುಗು ಆದ್ಯತೆ ನೀಡಿದ್ದಾರೆ, ಪ್ರತಿಭೆಗಳ ಗುರುತಿಸಿದ್ದಾರೆ, ಮಹಿಳಾ ಲೇಖಕಿಯರಿಗೆ ಆಧ್ಯತೆ ನಡೆಸಿದ್ದಾರೆ ಎಂದರು. ಇವರ ಅವಧಿಯಲ್ಲಿ 300 ಕ್ಕೂ ಹೆಚ್ಚು ಲೇಖಕಿಯರು ಬೆಳಕಿಗೆ ಬಂದಿದ್ದಾರೆ. 660 ಪುಸ್ತಕಗಳು ಬಿಡುಗಡೆಯಾಗಿದೆ, ಶಾಲಾ ಕಾಲೇಜುಗಳಲ್ಲಿ ಸಮ್ಮೇಳನ, ಚರ್ಚೆ ನಡೆಸಿದ್ದಾರೆ. ಇವರ ಕಾಲದಲ್ಲಿ ಸ್ವಚ್ಚ ಆಡಳಿತವಿತ್ತು. ಲೆಕ್ಕ ಪತ್ರಗಳ ಅಚ್ಚು ಹಾಕಿಸಿ ಪಾರದರ್ಶಕ ಆಡಳಿತ ನಡೆಸಿದ್ದಾರೆ. ಡಿ ಮಂಜುನಾಥ್ ಅವರ ಅಧಿಕಾರ ಅವಧಿಯಲ್ಲಿ ಸರಿಯಾಗಿ ಲೆಕ್ಕಪತ್ರ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು ಅದನ್ನು ತನಿಖೆ ಮಾಡುವಂತೆ ಅಂದಿನ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ದೂರು ನೀಡಿದ್ದರು ಎಂದರು.
ಸಾಹಿತ್ಯ ಕ್ರೇತ್ರವನ್ನು ಮತ್ತಷ್ಟು ವಿಸ್ತರಿಸಬೇಕು. ಏಕವ್ಯಕ್ತಿಯನ್ನು ವೈಭವೀಕರಿಸಬಾರದು. ಅಕಸ್ಮಾತ್ ಚುನಾವಣೆಯಲ್ಲಿ ಸೋತರೆ ಇತರರ ಹಾಗೆ ಪರಿಯಾಯ ಸಂಘಕಟ್ಟಿ ಪರಿಷತ್ತಿಗೆ ದ್ರೋಹ ಮಾಡುವುದಿಲ್ಲ, ಗುಂಪುಗಾರಿಕೆ ಮಾಡುವುದಿಲ್ಲ. ಅನುದಾನದ ಹಣವನ್ನು ನುಂಗುವ ಅಭ್ಯಾಸ ನನಗೆ ಮೊದಲೇ ಇಲ್ಲ ಎಂದೆಲ್ಲಾ ಆದೇಶಗಳನ್ನು ಇಟ್ಟುಕೊಂಡಿರುವ ಅದರಂತೆ ನಡೆಯುವ ಡಿ.ಬಿ ಶಂಕರಪ್ಪ ಅವರನ್ನು ಗೆಲ್ಲಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಬೇಕು ಎಂದುಶಂಕರಪ್ಪ ಗೆಳೆಯರ ತಂಡ ಮತದಾರರಲ್ಲಿ ಮನವಿ ಮಾಡಿದೆ.ಈ ಸಂದರ್ಭದಲ್ಲಿ ಈಶ್ವರಪ್ಪ, ರುಕ್ಮಿಣಿ ಆನಂದ್, ಮಮತ ಹೆಗ್ಡೆ, ಸುಮಿತ್ರಮ್ಮ ಸೇರಿದಂತೆ ಹಲವರು ಇದ್ದರು.