14/11/21 ಶಿವಮೊಗ್ಗ ನಗರದ ಗೋಪಾಳ ಗೌಡ ಬಡಾವಣೆಯ ಆಲ್ಕೋಳ ಸರ್ಕಲ್ ನಲ್ಲಿ ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದು, ದಿನಾಂಕ 25/10/21 ರಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ಒಕ್ಕಲೇಬ್ಬಿಸುತ್ತಿರುವರು ಹಾಗೆ ನಗರದ ಎಲ್ಲೆಡೆ ನಾನ್ ವೆಂಡಿಂಗ್ ಝೂನ್ ಎಂದು ಘೋಷಣೆ ಮಾಡುತ್ತಿರುವರು.

ದಿನಾಂಕ 28/10/21ರ ಬುಧವಾರ ರಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರ ನೇತೃತ್ವದಲ್ಲಿ ಸನ್ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪ ರವರಿಗೆ, ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಸುನೀತಾ ಅಣ್ಣಪ್ಪ ನವರು, ಉಪ ಪೌರರಾದ ಶ್ರೀ ಶಂಕರ್ ಗನ್ನಿ ರವರಿಗೂ, ವಿರೋಧ ಪಕ್ಷದ ನಾಯಕಿ ಶ್ರೀಮತಿ ಯಮುನಾ ರಂಗೇಗೌಡ ರವರಿಗೂ, ಆಡಳಿತ ಪಕ್ಷದ ನಾಯಕರಾದ ಶ್ರೀ ಚನ್ನಬಸಪ್ಪ ರವರಿಗೂ, ಪಾಲಿಕೆ ಸದಸ್ಯರಾದ ಶ್ರೀ ರಮೇಶ್ ಹೆಗ್ಡೆ, HC ಯೊಗೀಶ್, ಶ್ರೀ ಮತಿ ರೇಖಾ ರಂಗನಾಥ್, ಶ್ರೀ ಮತಿ ಮೆಹಕ್ ಶರೀಫ್, ಶ್ರೀ ಮತಿ ಆರತಿ ಹಾಗೂ ಹಲವು ಸದಸ್ಯರ ಗಮನಕ್ಕೆ ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೂನ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೋರಲಾಯಿತು. ಇದಕ್ಕೆ ಅವರುಗಳು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದ್ದರು.

ಹಾಗೇಯೇ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಕೆಬಿ ಶಿವಕುಮಾರ್ ರವರಿಗೆ, ಮಹಾ ನಗರ ಪಾಲಿಕೆಯ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಎಂ.ಬಿ ಲಕ್ಷ್ಮೀಪ್ರಸಾದ್ ರವರಿಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಒಕ್ಕಲೇಬಿಸಬಾರದು ಬೇಗನೆ TVC ಸದಸ್ಯರ ಸಭೆ ಕರೆದು ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೂನ್ ಘೋಷಣೆ ಮಾಡಿ ಎಂದು ಮನವಿ ಮಾಡಲಾಯಿತು.

ಇಂದು ಆಲ್ಕೋಳ ವೃತ್ತದ ಬೀದಿ ಬದಿ ವ್ಯಾಪಾರಿಗಳು ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ನಮ್ಮನ್ನ ಒಕ್ಕಲೆಬಿಸುತ್ತಿದ್ದು ಪಾಳುಬಿದ್ದ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ. ಈ ಜಾಗದಲ್ಲಿ ನಡೆಯುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಎಂದು ಜಿಲ್ಲಾಧ್ಯಕ್ಷರು ಹಾಗೂ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಮನವಿ ಮಾಡಿದರು.

ನಂತರ ಮಾಧ್ಯಮದ ಮೂಲಕ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…