ಶಿವಮೊಗ್ಗ ನ್ಯೂಸ್…
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶಗಳನ್ನು ಕಲ್ಪಿಸಿಕೊಡಿ ಇಂದಿನ ಮಕ್ಕಳೇ ನಾಳೆಯ ಉತ್ತಮ ಪ್ರಜೆಗಳು ಮಂಜುನಾಥ್ ರಾವ್ ಕದಂ ಹೇಳಿದರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು, ಇಂದಿನ ಮಕ್ಕಳೇ ನಾಳೆಯ ಉತ್ತಮ ಪ್ರಜೆಗಳು ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಂಡಿತ್ ಜವಾರಲಾಲ್ ನೆಹರು ಅವರ ಜನ್ಮ ದಿನವನ್ನು ಪ್ರತಿ ವರ್ಷ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಎಂಬ ಮಾತಿದೆ. ಅದೇ ರೀತಿ ಮಕ್ಕಳನ್ನು ರಾಷ್ಟçದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯವೆಂದು ಕಡೆಗಣಿಸಲಾಗುವುದು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷರಾದ ಮಂಜುನಾಥ್ ರಾವ್ ಕದಂರವರು ನುಡಿದರು.
ಅವರು ಇಂದು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಶಿವಮೊಗ್ಗ ಈಸ್ಟ್ ಎಜುಕೇಷನಲ್ ಚಾರಿಟೆಬಲ್ ಟ್ರಸ್ಟ್ವತಿಯಿಂದ ಹಮ್ಮಿಕೊಳ್ಳಲಾದ ಮಕ್ಕಳದಿನಚಾರಣೆ ಹಾಗೂ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಲ್.ರವಿರವರು ಮಾತನಾಡುತ್ತಾ ಭಾರತವು ೧೯೫೬ ರಿಂದ ಮಕ್ಕಳ ದಿನಚಾರಣೆಯನ್ನು ಆಚರಿಸುತ್ತಿದೆ. ಚಾಚಾ ನೆಹರೂರವರ ಮರಣದ ನಂತರ ಅವರ ಬಾಂಧವ್ಯ ಮತ್ತು ಒಲವಿನಿಂದ ನೆಹರೂ ರವರ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ದಿನವೆಂದು ಗುರುತಿಸಲಾಯಿತು. ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು ಎಂದು ನುಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ನೆಹರೂ ಹಾಗೂ ಮಕ್ಕಳ ದಿನಚಾರಣೆಯ ಬಗ್ಗೆ ಭಾಷಣ ಹಾಗೂ ಆಟೋಟಗಳ ಸ್ಫರ್ದೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷರಾದ ಜಯಂತಿವಾಲಿ, ಕಾರ್ಯದರ್ಶಿ ಬಿಂದು ವಿಜಯಕುಮಾರ್, ಕ್ಲಬ್‌ವತಿಯಿಂದ ಎಲ್ಲರಿಗೂ ಬಹುಮಾನ ಹಾಗೂ ಸಹಿ ಹಂಚಿಕೆ ಮಾಡಿದರು.
ವೇಧಿಕೆಯಲ್ಲಿ ಕೆ.ಕುಮಾರ್ ಸ್ವಾಮಿ, ಸೂರ್ಯನಾರಾಯಣ್ ಆರ್, ಜಯಶೀಲಾ ಬಾಯಿ, ಮಾಜಿ ಅಧ್ಯಕ್ಷರಾದ ಜಿ.ವಿಜಯಕುಮಾರ್, ಎಸ್.ಸಿ.ರಾಮಚಂದ್ರ, ರಾಮು, ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ರಾಹುಲ್, ಕಾರ್ಯದರ್ಶಿ ಹರ್ಷಿತ್, ನಾಗರತ್ನ, ಪಾರ್ವತಿ, ಅನಿತಾ, ಹಾಗೂ ಪದಾಧಿಕಾರಿಗಳು ಉಪಸ್ಥೀತರಿದ್ದರು.