ಸಾಗರ ನ್ಯೂಸ್…

ಸಾಗರದಲ್ಲಿ ದ್ವಿಚಕ್ರ ವಾಹನಕ್ಕೆ ಬಚಾವ್ ಮಾಡಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ಯುವತಿಯರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದು ಅಪಘಾತವಾಗಿರುವ ಘಟನೆ ಸಾಗರದಲ್ಲಿ ಸಂಜೆ ನಡೆದಿದೆ.

ಸಾಗರ ನಗರ ಬಿಹೆಚ್ ರಸ್ತೆಯಲ್ಲಿ ಇರುವ ಸುಜುಕಿ ಶೋರೂಮ್ ಎದುರು ಶುಕ್ರವಾರ ಸಂಜೆ ಲಗೇಜ್ ಆಟೋ ಒಂದು ರಸ್ತೆಯ ಮಧ್ಯ ಬಂದ ದ್ವಿಚಕ್ರವಾಹನಕ್ಕೆ ಬಚಾವ್ ಮಾಡಲು ಹೋಗಿ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಸ್ಎನ್ ನಗರದ ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದು ಅಪಘಾತವಾಗಿರುವ ಘಟನೆ ನಡೆದಿದೆ.

ಅಪಘಾತಕ್ಕೀಡಾಗಿರುವ ಯುವತಿಯರು ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ .

ಅಪಘಾತದಲ್ಲಿ ಒಬ್ಬಳು ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತೊಂದು ಯುವತಿಯ ಸ್ಥಿತಿ
ಚಿಂತಾಜನಕವಾಗಿದ್ದು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಸಾಗರ ಉಪ ಪೊಲೀಸ್ ಅಧೀಕ್ಷಕರು ರೋಹನ್ ಜಗದೀಶ್ ರವರ ಅಪಘಾತಕ್ಕೀಡಾದ ಯುವತಿಯರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಅಪಘಾತದ ಮಾಹಿತಿ ಪಡೆದುಕೊಂಡಿದ್ದಾರೆ.

ಹೌದು, ಅಪಘಾತವಾದ ಸಂದರ್ಭದಲ್ಲಿ ಯುವತಿಯರಿಗೆ ಡಿಕ್ಕಿ ಹೊಡೆದ ನಂತರ ಲಗೇಜ್ ಆಟೋ ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ , ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಹೋಗಿದ್ದೆ , ಮೆಸ್ಕಾಂ ಇಲಾಖಾಯ ಇಂಜಿನಿಯರ್ ವಸಿಮ್ ರವರು ತಕ್ಷಣ ಆಟೋ ಚಾಲಕನ ಬಳಿ ಕಂಬ ಮುರಿದಿರುವ ಸಲವಾಗಿ ಅಂದಾಜು 20000 ಹತ್ತಿರದ ಹಣ ದಂಡ ಕಟ್ಟಿಸಿಕೊಂಡಿದ್ದಾರೆ .

ಇಲ್ಲಿ ಅಪಘಾತಕ್ಕೀಡಾದ ಯುವತಿಯರ ಜೀವ ಚಿಂತಾಜನಕವಾಗಿದ್ದರು ಮೊದಲು ಅವರ ಕಂಬಕ್ಕೆ ದಂಡ ಕಟ್ಟಬೇಕು , ನಗರದಲ್ಲಿ ಹಲವು ಭಾಗಗಳಲ್ಲಿ ಆಗೋ ಈಗೋ ಮುರಿದು ಕೆಳಗೆ ಬೀಳುವ ಸ್ಥಿತಿಯಲ್ಲಿ ಕಂಬಗಳು ಇದ್ದರೂ ಸಹ ಸರಿಪಡಿಸುವ ಯೋಚನೆ ಕೂಡ ಮಾಡಲ್ಲ , ಆದ್ರೆ ಜೀವ ಹೋಗುವ ಸಂದರ್ಭದಲ್ಲಿ ದಂಡ ಕಟ್ಟಿಸಿಕೊಳ್ಳುವ ಕೆಲಸ ಮೊದಲು ಅಧಿಕಾರಿಗಳು ಮಾಡುತ್ತಾರೆ , ಅಪಘಾತ ಯಾರು ಕೂಡ ಬೇಕು ಎಂದು ಮಾಡಲ್ಲ ಗ್ರಹಚಾರ ಕೆಟ್ಟಿದ್ದರೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅಪಘಾತ ಅಗಲೇ ಬೇಕು ಅದೇ ರೀತಿ ಇಂದು ಕೂಡ ನಡೆದಿರುವ ಘಟನೆ ಮೆಸ್ಕಾಂ ಇಲಾಖಾ ಅಧಿಕಾರಿಗಳು ಮಾನವೀಯತೆಯಿಂದ ಮೊದಲು ಯುವತಿಯರ ಚಿಕಿತ್ಸೆ ಬಗ್ಗೆ ಗಮನಹರಿಸಿ ನಂತರ ನಮ್ಮ ಇಲಾಖೆಗೆ ದಂಡ ಕಟ್ಟಿ ಎಂದು ಹೇಳಬಹುದಿತ್ತು ಆದರೆ ಆ ರೀತಿ ಅವರು ಮಾಡಿಲ್ಲ ಅವರಿಗೆ ಜೀವಕ್ಕಿಂತ ಹಣ ಮುಖ್ಯ ವಾಗಿದೆ , ಆಟೋ ಚಾಲಕ ದಂಡ ಕಟ್ಟಿರುವ ಹಣ ಏನಾದರೂ ಅವನ ಬಳಿ ಇರುತ್ತಿದ್ದರೆ ಅಪಘಾತಕ್ಕೆ ಸಿಲುಕಿರುವ ಆ ಬಡ ಕುಟುಂಬದ ಯುವತಿಯರ ಚಿಕಿತ್ಸೆಗೆ ನೀಡುತ್ತಿದ್ದ , ಆದರೆ ಏನು ಮಾಡೋದು ಅಧಿಕಾರಿಗಳಿಗೆ ಮಾನವೀಯತೆ ಸತ್ತುಹೋಗಿದೆ.

ಮೆಸ್ಕಾಂ ಇಲಾಖೆಯ ಎಂ ಡಿ ಸಾಹೇಬ್ರೆ ಇದರ ಬಗ್ಗೆ ಗಮನಹರಿಸಿ ಇಲ್ಲಿ ಅಧಿಕಾರಿಗಳಿಗೆ ಮಾನವೀಯತೆ ಸತ್ತುಹೋಗಿದೆ.

ಸಾಗರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

ವರದಿ: ಜಮೀಲ್ ಸಾಗರ್…