ಶಿವಮೊಗ್ಗ ನ್ಯೂಸ್…
ಶಿವಮೊಗ್ಗ ಗಾಂಧಿಬಸಪ್ಪ ಕುಟುಂಬದವರು ಜಿಲ್ಲಾ ಗಂಗಾಮತ ಸಂಘಕ್ಕೆ ಶ್ರೀಮತಿ ಹಳದಮ್ಮ ಗಾಂಧಿ ಬಸಪ್ಪ ಪ್ರತಿಷ್ಠಾನದಿಂದ ಒಟ್ಟಾರೆಯಾಗಿ 1,01,000 ರೂ. ಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ.
ಬಾಪೂಜಿ ನಗರದಲ್ಲಿರುವ ಜಿಲ್ಲಾ ಗಂಗಾಮತ ಸಂಘದ ವಿದ್ಯಾರ್ಥಿ ನಿಲಯದ 3ನೇ ಮಹಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕಾಗಿ ಇನ್ನೂ 5 ಲಕ್ಷಕ್ಕೂ ಹೆಚ್ಚು ಹಣ ದೇಣಿಗೆಯ ಅಗತ್ಯವಿದೆ. ಇದಕ್ಕಾಗಿ ಜಿಲ್ಲಾ ಗಂಗಾಮತ ಸಂಘವು ಸಮಾಜದ ಬಾಂಧವರಲ್ಲಿ ನೆರವಿಗಾಗಿ ಮನವಿ ಮಾಡಿದೆ. ಈ ಮನವಿ ಸ್ಪಂದಿಸಿರುವ ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇದರಲ್ಲಿ ಗಾಂಧಿ ಬಸಪ್ಪ ಕುಟುಂಬ ಹರೀಶ್ ಕುಮಾರ್, ಎನ್. ಮಾಲತೇಶ್, ದೇವೇಂದ್ರಪ್ಪ, ಓಂಕಾರ್, ಜೈಕುಮಾರ್, ಆರ್.ಜನಾರ್ಧನ್, ಎ. ಹಾಲೇಶಪ್ಪ, ಜಿ. ಶೇಖರಪ್ಪ, ಜಿ.ನಾಗಪ್ಪ, ಸತ್ಯಣ್ಣ, ಹೆಚ್.ಎಂ.ರಂಗನಾಥ್, ಪ್ರಕಾಶ್ ಆರ್, ಜಿ.ಕೆಂಚಪ್ಪ, ಮುರುಘೆಶ್, ಸಿದ್ದಪ್ಪ ಬಾರ್ಕಿ, ಜಿ.ಕುಬೇರಪ್ಪ ಸೇರಿದಂತೆ ಇನ್ನೂ ಅನೇಕರು ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ ಎಲ್ಲರಿಗೂ ಸಂಘದ ಪರವಾಗಿ ಜಿಲ್ಲಾದ್ಯಕ್ಷ ಡಿ.ಬಿ. ಕೆಂಚಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಮುಖ್ಯವಾಗಿ ಗಾಂಧಿಬಸಪ್ಪ ಕುಟುಂಬದ ಎಸ್.ಬಿ ವಾಸುದೇವ್, ಎಸ್.ಬಿ. ಅಶೋಕ್ ಕುಮಾರ್, ಎಸ್.ಟಿ. ಸತೀಶ್ ಸೇರಿದಂತೆ ಅವರ ಕುಟುಂಬದವರು 1,01,000 ರೂ. ದೇಣಿಗೆಯನ್ನು ಒಟ್ಟಾರೆಯಾಗಿ ನೀಡಿದಕ್ಕೆ ಡಿ.ಬಿ. ಕೆಂಚಪ್ಪ ಮತ್ತು ಜಿಲ್ಲಾ ಗಂಗಾಮತ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎ. ಹಾಲೇಶಪ್ಪ ಮನವಿ ಮಾಡಿ ಸಮಾಜದ ಬಾಂಧವರು ಇನ್ನಷ್ಟು ಹಾಸ್ಟೇಲ್ ನಿರ್ಮಾಣಕ್ಕಾಗಿ ದೇಣಿಗೆ ನೀಡಬೇಕು ಎಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದ್ದಾರೆ.