ಶಿವಮೊಗ್ಗ ನ್ಯೂಸ್…

ಶಿವಮೊಗ್ಗದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನೂತನವಾಗಿ ನಿರ್ಮಿಸಿರುವ ದೈವಜ್ಞ ಸಹಕಾರ ಸದನ’ದ ಉದ್ಘಾಟನಾ ಸಮಾರಂಭವನ್ನು ನ.24ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಬಿಳಿಕಿ ಕೃಷ್ಣಮೂರ್ತಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2007ರಲ್ಲಿ ಸ್ಥಾಪನೆಗೊಂಡ ಸೊಸೈಟಿಯಲ್ಲಿ ಒಟ್ಟು 1299 ಸದಸ್ಯರಿದ್ದು,`ಎ’ ದರ್ಜೆಯ ಶ್ರೇಣಿಯಲ್ಲಿರುವ ನಮ್ಮ ಸೊಸೈಟಿಯು ಶಿವಮೊಗ್ಗ ಜಿಲ್ಲಾ ಉತ್ತಮ ಸಹಕಾರ ಸಂಘ ಹಾಗೂ ತಾಲ್ಲೂಕು ಉತ್ತಮ ಸಹಕಾರ ಸಂಘ ಪ್ರಶಸ್ತಿಗಳು ಲಭಿಸಿದೆ. ಸೊಸೈಟಿಯು ಆರಂಭವಾಗಿ ಕೇವಲ 15 ವರ್ಷದಲ್ಲಿ ಗಾಂಧಿ ಬಜಾರ್ ಹತ್ತಿರದ ತಿರುಪಳಯ್ಯನ ರಸ್ತೆಯಲ್ಲಿ 1 ಕೋಟಿ 50 ಲಕ್ಷ ಖರ್ಚು ಮಾಡಿ ಸ್ವಂತ ನಿವೇಶನ ಹೊಂದಿ, ವಿಶಾಲವಾದ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.ಸಭಾ ಕಾರ್ಯಕ್ರಮವು ಜೈಲ್ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಡೆಯಲಿದ್ದು, ಶ್ರೀ ಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ವಾಣಿಜ್ಯ ಸಂಕೀರ್ಣ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ಕಟ್ಟಡವನ್ನು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಚೇರಿಯನ್ನು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗೇಶ ಡೋಂಗ್ರೆ ಉಪಸ್ಥಿತರಿರುವರು ಎಂದರು.ಸಂಜೆ 4ಗಂಟೆಗೆ 25 ಸಾವಿರಕ್ಕೂ ಮೇಲ್ಪಟ್ಟು ಕಟ್ಟಡ ನಿಧಿಗೆ ದೇಣಿಗೆ ನೀಡಿದ ಸದಸ್ಯರಿಗೆ ಶ್ರೀಗಳಿಂದ ವಿಶೇಷ ಸನ್ಮಾನ, 10 ಸಾವಿರಕ್ಕೂ ಮೇಲ್ಪಟ್ಟು ದೇಣಿಗೆ ನೀಡಿದವರಿಗೆ ಸನ್ಮಾನ ಹಾಗೂ 5ಸಾವಿ ನೀಡಿದವರಿಗೆ ನೆನಪಿನ ಕಾಣಿಕೆ ನೀಡಲಾಗುವುದು ಎಂದರು.

ಸೊಸೈಟಿಯೂ 1,09 ಕೋ.ರೂ.ಗಳ ಷೇರು ಬಂಡವಾಳ ಹಾಗೂ 13,54 ಕೋ.ರೂ. ಠೇವಣಿ ಹೊಂದಿದ್ದು, 13,42 ಕೋ.ರೂ. ಸಾಲ ನೀಡಲಾಗಿದೆ. 2020-21 ನೇ ಸಾಲಿನಲ್ಲಿ ಒಟ್ಟಾರೆ 51,25 ಕೋ.ರೂ.ಗಳ ವಹಿವಾಟು ನಡೆಸಿ 34,70 ಲಕ್ಷÀ ರೂ,. ನಿವ್ವಳ ಲಾಭ ಗಳಿಸಿದೆ. ಸೊಸೈಟಿಯ ಸದಸ್ಯರುಗಳಿಗೆ ಚಿನ್ನಾಭರಣ ಸಾಲ, ಸ್ಥಿರಾಸ್ತಿ ಆಧಾರ ಸಾಲ, ಮೀಸೆಳೆತ ಸಾಲ, ಗೃಹ ನಿರ್ಮಾಣ ಸಾಲ, ಜಾಮೀನು ಸಾಲ, ವಾಹನ ಖರೀದಿ ಸಾಲ ಹಾಗೂ ಠೇವಣಿಗಳ ಆಧಾರ ಸಾಲಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಲಿನ ಡಿಸೆಂಬರ್-2021 ಅಂತ್ಯದವರೆಗೆ ವಿಶೇಷ ಠೇವಣಿ ಯೋಜನೆಯನ್ನು (1 ವರ್ಷದ ಠೇವಣಿಗಳಿಗೆ ಶೇ.8 ರಂತೆ ಬಡ್ಡಿ) ಜಾರಿಗೆ ತರಲಾಗಿದೆ ಎಂದರು. ಸೊಸೈಟಿಯು ಪ್ರತೀ ವರ್ಷ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಮೂಲಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಸೊಸೈಟಿಯಲ್ಲಿ ಸದಸ್ಯರುಗಳು ನಿಧನ ಹೊಂದಿದ ಸಂದರ್ಭದಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಗರಿಷ್ಟ 10 ಸಾವಿರ ರೂ. ನೀಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ವಿ. ಶೇಟ್, ಚಂದ್ರಹಾಸ ಪಿ. ರಾಯ್ಕರ್, ಕಮಲಾಕ್ಷ ಎಸ್.ಡಿ, ಗುರುರಾಜ ಎಂ. ಶೇಟ್, ಎಸ್.ಪಾಂಡುರಂಗ ಶೇಟ್, ವಿಜಯೇಂದ್ರ ಜಿ. ವೆರ್ಣೇಕರ್, ಪ್ರಭಾವತಿ ವೆಂಕಟೇಶ ಭಟ್, ಪ್ರತಿಮಾ ದಿನೇಶ ಶೇಟ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…