ಶಿವಮೊಗ್ಗ ನ್ಯೂಸ್…
ಪ್ರಸ್ತುತ ಸಮಾಜದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಹಾಗೂ ಮುಂದಿನ ಪೀಳಿಗೆಗೆ ಶ್ರೇಷ್ಠ ಸಂಸ್ಕೃತಿಯ ಪರಂಪರೆಯನ್ನು ಉಳಿಸಬೇಕಿದೆ ಎಂದು ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಬಾಳೆಹೊನ್ನೂರು ರೋಟರಿ ಕ್ಲಬ್‌ನ ಬಿ.ಸಿ.ಗೀತಾ ಹೇಳಿದರು.
ಕೋಣಂದೂರಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ರೋಟರಿ ಕ್ಲಬ್ ಕೋಣಂದೂರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜೋನ್ 10 ಮತ್ತು 11ರ ಸಾಂಸ್ಕೃತಿಕ ಸರ್ಧೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ
ಮಾತನಾಡಿದರು.
ಅಂತರಾಷ್ಟಿçÃಯ ರೋಟರಿ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯಗಳ ಜತೆಯಲ್ಲಿ ಅಳಿವಿನ ಅಂಚಿನಲ್ಲಿರುವ ಜಾನಪದ ಸಾಹಿತ್ಯಗಳನ್ನು ರಕ್ಷಿಸುವ ಉತ್ತಮ ಕಾರ್ಯ ನಡೆಸುತ್ತಿದೆ. ಯುವ ಸಮುದಾಯಕ್ಕೆ ಸಂಸ್ಕೃತಿ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನ ಮಾಡುತ್ತ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಸಾಂಸ್ಕೃತಿಕ ಕ್ಷೇತ್ರಕ್ಕೂ ಪ್ರಾಮುಖ್ಯತೆ ನೀಡಲು ಗಮನ ವಹಿಸಲಾಗುತ್ತಿದೆ. ಸಾಂಸ್ಕೃತಿಕ ಕಲಾ ವೈಭವದಲ್ಲಿ ಜಾನಪದ ಕಲಾ ಪ್ರಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆ ಚೀಲಗಳನ್ನು ಬಳಸುವಂತೆ ಕರೆ ನೀಡಿ ಸಾಂಕೇತಿಕವಾಗಿ ಬಟ್ಟೆ ಚೀಲಗಳನ್ನು ಹಸ್ತಾಂತರಿಸಲಾಯಿತು.
ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಜೆ.ಪಿ.ಕಿರಣ್ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಸಾಗರ ರೋಟರಿ ಕ್ಲಬ್‌ನ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ, ಶಿವಮೊಗ್ಗ ರೋಟರಿ ಕ್ಲಬ್‌ನ ಎಂ.ಪಿ.ಆನAದಮೂರ್ತಿ, ಜಿ.ವಿಜಯ್‌ಕುಮಾರ್, ವಸಂತ ಹೋಬಳಿದಾರ್, ರಿಪ್ಪನ್ ಪೇಟೆ ಕ್ಲಬ್‌ನ ಗಣೇಶ ಎನ್.ಕಾಮತ್, ಶಿವಮೊಗ್ಗ ಸೆಂಟ್ರಲ್ ಕ್ಲಬ್‌ನ ಎ.ಎಸ್.ಗುರುರಾಜ್, ಶಿವಮೊಗ್ಗ ಜ್ಯೂಜಿಲಿ ಕ್ಲಬ್‌ನ ಪಿ.ಎನ್.ರಾಜಶೇಖರ್, ಶಿವಮೊಗ್ಗ ರೀವರ್ ಸೈಡ್ ಕ್ಲಬ್‌ನ ಕೆ.ಪಿ.ಶೆಟ್ಟಿ, ಕೋಣಂದೂರು ಸಾಂಸ್ಕೃತಿಕ ಕ್ಲಬ್‌ನ ಕೆ.ಆರ್.ಸದಾಶಿವ ಭದ್ರಾವತಿ ಕ್ಲಬ್‌ನ ಕೆ.ಎಚ್.ತೀರ್ಥಯ್ಯ, ಕೋಣಂದೂರು ಕ್ಲಬ್ ಕಾರ್ಯದರ್ಶಿ ಡಿ.ಆರ್.ಗಿರೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.