ಇಂದು ನಗರದಲ್ಲಿ ಆರ್ ಎಂ ಎಲ್ ನಗರದ ಪಡಿತರ ಅಂಗಡಿಗೆ ಸಹಾಯಕ ನಿರ್ದೇಶಕರು ಅನೌಪಚಾರಿಕ ಪಡಿತರ ಪ್ರದೇಶ ಶಿವಮೊಗ್ಗ ಹಾಗೂ ಆಹಾರ ನಿರೀಕ್ಷಕರು ಭೇಟಿ ನೀಡಿ ಭೌತಿಕ ದಾಸ್ತಾನುಗಳನ್ನು ಪರಿಶೀಲಿಸಿದರು ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಯನ್ನು ಜಪ್ತಿ ಮಾಡಿದರು.
ಕಾರಣಗಳೇನು ?

  1. ನ್ಯಾಯಬೆಲೆ ಅಂಗಡಿಯ ಮುಂದೆ ದಾಸ್ತಾನು ವಿವರ ಪ್ರದರ್ಶಿಸಿರುವುದಿಲ್ಲ
  2. 192 ಚೀಲ ಅಕ್ಕಿ 96.00 ಕ್ವಿಂಟಾಲ್ ಅಕ್ಕಿ ಮತ್ತು 1.00 ಕ್ವಿಂಟಲ್ ಗೋಧಿ ಬೌದ್ಧಿಕ ದಾಸ್ತಾನು ಹೆಚ್ಚು ಇರುವುದು ಕಂಡು ಬಂದಿದ್ದು ಸದರಿ ದಾಸ್ತಾನನ್ನು ಕಾದಿರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಲಾಗುತ್ತದೆ .
  3. ಪ್ರತಿ ತಿಂಗಳು ಎತ್ತುವಳಿ ಮಾಡಿದ ಪಡಿತರ ವಸ್ತುಗಳನ್ನು ನಿಗದಿತ ಅವಧಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವುದಿಲ್ಲ .
  4. ಪಡಿತರ ವಿತರಿಸುವ ಸಮಯದಲ್ಲಿ ಪಡಿತರದಾರರಿಂದ ಬಯೋಮೆಟ್ರಿಕ್ ಗೆ ರೂ 10-00 ನ್ನು ಪಡೆಯುತ್ತಿದ್ದು ಸೋಪು ಮತ್ತು ಉಪ್ಪು ನೀಡಿ ರೂ 20.00 ನ್ನು ಪಡೆಯುತ್ತಿದ್ದು ಬಿಲ್ಲುಗಳನ್ನು ಹಾಜರುಪಡಿಸಿರುವುದಿಲ್ಲ.
  5. ಕೋವಿಡ 19 ಸಂದರ್ಭವಾಗಿದ್ದು ಸ್ಯಾನಿಟೈಸರ್ ಉಪಯೋಗಿಸದೆ ಪಡಿತರ ಚೀಟಿದಾರರು ಗುಂಪುಗುಂಪಾಗಿ ನಿಂತು ಪಡಿತರ ಪಡೆಯುತ್ತಿರುವುದು ಹಾಗೂ ಕೋವಿಡ ನಿಯಮಗಳನ್ನು ಪಾಲಿಸುವುದಿಲ್ಲ.
  6. ನ್ಯಾಯಬೆಲೆ ಅಂಗಡಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದಿಲ್ಲ .
  7. ಪಡಿತರ ಸ್ಯಾಂಪಲ್ ಪ್ರದರ್ಶಿಸುವುದಿಲ್ಲ.
  8. ನ್ಯಾಯಬೆಲೆ ಅಂಗಡಿಯಲ್ಲಿ ನೆಲಹಾಸು ಟಾರ್ಪಾಲು ಆಗಿರುವುದಿಲ್ಲ.
  9. ಪ್ರಾಧಿಕಾರ ಪತ್ರವನ್ನು ಪ್ರದರ್ಶೀಸಿರುವುದಿಲ್ಲ.

ಈ ತಕ್ಷಣದಿಂದ ಜಾರಿಗೆ ಬರುವಂತೆ ಪಡಿತರ ಅಂಗಡಿಯನ್ನು ಅಮಾನತುಪಡಿಸಿ ಆದೇಶಿಸಿದರು .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ