ಶಿವಮೊಗ್ಗ ನ್ಯೂಸ್…
ಪೋಷ್ಟಿಕಾಂಶ ಯುಕ್ತ ಆಹಾರ ಉತ್ಪಾದನೆ ಇಂದು ತುಂಬಾ ಅಗತ್ಯವಾಗಿದ್ದು, ಇದನ್ನು ಕೃಷಿ ಪದವೀಧರರು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರ ಬೆಳೆಗಳನ್ನು ಬೆಳೆಯುವ ಕಡೆ ಗಮನ ನೀಡುವಂತೆ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಉಪಮಹಾ ನಿರ್ದೇಶಕ ಡಾ.ಸಿ.ಆರ್. ಅಗ್ರವಾಲ್ ಕರೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದವತಿಯಿಂದ ಗುರುವಾರ ನವುಲೆಯ ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ 6 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದ ಅವರು, ಪೆÇೀಷಕಾಂಶಯುಕ್ತ ಆಹಾರ ಬೆಳೆಗಳ ಕಡೆ ಹೆಚ್ಚಿನ ಒತ್ತು ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ತಂತ್ರಜ್ಞಾನ ಹೊರತುಪಡಿಸಿ ಪೆÇೀಷಕಾಂಶಯುಕ್ತ ಬೆಳೆ ಬೆಳೆಯುವುದು ಸಾಧ್ಯವಿಲ್ಲ.
ತಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಉತ್ಪಾದನೆಗೆ ಆದ್ಯತೆ ನೀಡಬೇಕು. ಇಂದಿನ ಆಧುನಿಕ ಯುಗದಲ್ಲಿ ಜನರ ಆಹಾರ ಕ್ರಮ ಕೂಡ ಬದಲಾಗುತ್ತಿದೆ. ಇದರಿಂದಾಗಿ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಹಣ್ಣು, ದ್ವಿದಳ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತು ನೀಡಬೇಕೆಂದರು ಹೇಳಿದರು.ಇಂದು ಶೇ.75 ರಷ್ಟು ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದ್ದು, ಇದನ್ನು ಸರಿಪಡಿಸಕೊಂಡು ಹೋಗುವಂತಹ ಕೃಷಿ ಪದ್ಧತಿಗೆ ಒತ್ತು ನೀಡಬೇಕಿದೆ.
ಪೌಷ್ಟಿಕಾಂಶಯುಕ್ತ ಹಣ್ಣುಗಳನ್ನು ಬೆಳೆಯುವ ಕಡೆ ಗಮನ ನೀಡಿದರೆ ಕೃಷಿ ಪದವಿಗೂ ಒಂದು ತೂಕ ಬರುತ್ತದೆ. ಪದವಿಗಿಂತ ಬದ್ಧತೆ ಅತೀ ಮುಖ್ಯವಾಗಿದ್ದು, ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡರು ಬದ್ಧತೆ ಇರಬೇಕೆಂದು ತಿಳಿಸಿದರು.ನೂತನ ಶಿಕ್ಷಣ ನೀತಿ ರಾಷ್ಟ್ರದ ಭವಿಷ್ಯಕ್ಕೆ ಹೊಸ ದಿಕ್ಸೂಚಿ ನೀಡುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಓದಿನ ಕ್ರಮವೇ ಬದಲಾಗುತ್ತಿದೆ. ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪದವೀಧರರಿಂದ ನಾವಿನ್ಯತೆಯ ಶೋಧ ಹಾಗೂ ಉದ್ಯಮಗಳ ಸ್ಥಾಪನೆ ನಿರೀಕ್ಷಿಸಲಾಗುತ್ತಿದೆ ಎಂದರು.
ರಾಜ್ಯಪಾಲರೂ ಹಾಗೂ ವಿವಿಯ ಕುಲಾಧಿಪತಿಗಳೂ ಆದ ಥಾವರ್‍ಚಂದ್ ಗೆಹ್ಲೋಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರಧಾನ ಮಾಡಿದರು.ಹೈದರಾಬಾದ್‍ನ ಭಾರತ್ ಬಯೋ ಟೆಕ್ ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಎಲ್ಲಾ ಅವರಿಗೆ ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ವಿವಿ ಉಪಕುಲಪತಿ ಡಾ. ಎಂ.ಕೆ. ನಾಯಕ್ ಎಲ್ಲರನ್ನು ಸ್ವಾಗತಿಸಿ ವಿವಿಯ ಸಾಧನೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ಡಾ. ಆರ್. ಲೋಕೇಶ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.