03/12/21ಶಿವಮೊಗ್ಗ ನಗರದ ಕರ್ನಾಟಕ ಸಂಘದ ಬಳಿಯ ಶಾಲಾ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಬೀದಿ ಬದಿ ವ್ಯಾಪಾರಿಗಳ ಮೇಲೆ ದಿನನಿತ್ಯ ಒಂದಲ್ಲಾ ಒಂದು ಇಲಾಖೆಗಳ ಮೂಲಕ ಒಕ್ಕಲೇಸುವಿಕೆ, ವಿರೋಧಿಸಿ. ನಿಜವಾದ ಸ್ಥಳೀಯ ಆರ್ಥಿಕ ದುರ್ಬಲ ವರ್ಗದ ಬೀದಿ ಬದಿ ವ್ಯಾಪಾರಿಗಳಿಗೆ ಸಮೀಕ್ಷೆ ಮಾಡಿ ಗುರುತಿನ ಚೀಟಿ ನೀಡದೆ ಇರುವುದು, ವೆಂಡಿಂಗ್ ಝೂನ್ ನಾನ್ ವೆಂಡಿಂಗ್ ಝೂನ್ ನಿರ್ಮಾಣ ಮಾಡಿದೆ. ವ್ಯಾಪಾರದ ಸ್ಥಳ ಸೂಚಿಸದೆ, ವ್ಯಾಪಾರ ಮಾಡುವ ವ್ಯಾಪಾರಿಗಳ ಸಾಮಾಗ್ರಿಗಳನ್ನು ವಶಪಡಿಸುವಿಕೆ ವಿರೋಧಿಸಿ.
ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಅದರಲ್ಲೂ ಏನೂ ತಿಳಿಯದ ಅನಕ್ಷರಸ್ಥ ನಿಜವಾದ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳನ್ನು ಉಡುಕಿ, 2014ನೇ ಕಾಯ್ದೆ ಅನುಸಾರ ಪಟ್ಟಣ ವ್ಯಾಪಾರ ಸಮಿತಿ (TVC) ಸದಸ್ಯರ ಮೂಲಕ ಗುರುತಿನ ಚೀಟಿ ನೀಡುವಂತೆ ಡಿಸೆಂಬರ್ 10 ರಂದು ಶಿವಮೊಗ್ಗ ಜಿಲ್ಲಾದ್ಯಂತ ಬೀದಿ ಬದಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡುವುದರ ಮೂಲಕ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೋಳಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿವಿಸಿ ಸದಸ್ಯರು ಹಾಗೂ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನಾರಾಯಣ ಎಂಎಸ್. ಕಾರ್ಯದರ್ಶಿಗಳಾದ ಶ್ರೀ ವಿನಯ್ ಕುಮಾರ್, ಖಜಾಂಚಿಯಾದ ಶ್ರೀ ಶೇಷಯ್ಯ, ಪದಾಧಿಕಾರಿಗಳಾದ ಶ್ರೀ ದಿನೇಶ್, ಶ್ರೀ ಅವಿನಾಶ್, ವಾರ್ಡಿನ ಅಧ್ಯಕ್ಷರಾದ ಮಣಿಗೌಂಡರ್, ಶ್ರೀ ಶರತ್ ಸಿಂಗ್, ಶ್ರೀ ಮತಿ ರಂಗಮ್ಮ, ಶ್ರೀ ಮತಿ ರಾಣಿಯಮ್ಮ, ಬೂತ್ ಅಧ್ಯಕ್ಷರುಗಳಾದ ರವಿ, ಮೊಸಿನ್, ಫೈರೋಜ್, ಪುಷ್ಪ, ರೇಷ್ಮ, ಯಶೋಧ, ಬಸವರಾಜು, ನಾಗರಾಜ್, ಹಾಗೂ ಇತರರೂ ಉಪಸ್ಥಿತರಿದ್ದರು.