ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯಲು ಸ್ಮಾರ್ಟ್ ಸಿಟಿ ಯೋಜನೆ ಯ ಅವ್ಯವಹಾರದ ಬಗ್ಗೆ ತನಿಖೆ ಯಾಗುವಂತೆ ಮನವಿ ಮಾಡಿದರು.
ಶಿವಮೊಗ್ಗ ನಗರವನ್ನು ಸುಂದರ ನಗರವನ್ನಾಗಿ ಮಾಡುತ್ತೇವೆ ಎಂದು ಎಂದು ಜನರ ಹಣವನ್ನು ಲೂಟಿ ಹೊಡೆಯುತ್ತಿರುವ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಧಿಕ್ಕಾರ ಶಿವಮೊಗ್ಗ ನಗರದ ಮೂಲಭೂತ ಸೌಕರ್ಯ ಮಾಡುವ ಮೊದಲು ಯಾವುದೇ ಮುಂದಾಲೋಚನೆಯಿಲ್ಲದೆ ಅವೈಜ್ಞಾನಿಕವಾಗಿದೆ ತೇಪೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದರೂ ಸಹ ನಾವುಗಳೆಲ್ಲ ಗೊತ್ತಿದ್ದರೂ ಗೊತ್ತಿಲ್ಲದಂತೆ ಅದೇ ಹಹೋಂಡಾ ಡ ಗುಂಡಿಗಳಲ್ಲಿ ಬಿದ್ದು ಎದ್ದು ಪಕ್ಷ ಧರ್ಮ ಎಂಬ ಅಮಲಿನಲ್ಲಿ ತೇಲುತ್ತಿದ್ದ ರಿಂದ ಲಂಚ ತಿನ್ನುವ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಈ ಸ್ಮಾರ್ಟ್ ಸಿಟಿ ಎಂಬುವುದು ಕೋಟ್ಯಾಂತರ ರೂಪಾಯಿಗಳನ್ನು ಹೊಡೆಯುವ ಯೋಜನೆಯಾಗಿದೆ ಈ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಬೊಕ್ಕಸ ತುಂಬುತ್ತಿದೆ ಹೊರತು ಯಾವುದೇ ಕಾಮಗಾರಿಗಳ ಗುಣಮಟ್ಟ ಆಗದೆ ಇರುವುದು ವಿಷಾದನೀಯವಾಗಿದೆ ಇದಕ್ಕೆ ಉದಾಹರಣೆ ಎಂದರೆ ರಸ್ತೆ ಚರಂಡಿ ಫುಟ್ಪಾತ್ ಹಾಗೂ ಸೈಕ್ಲಿಂಗ್ ಟ್ರ್ಯಾಕ್ ಮಾಡದೆ ಗೋಡೆಗಳ ಮೇಲಿನ ಕೆಡಿಸಿದ ಬಣ್ಣದ ಚಿತ್ತಾರ ಹೆಸರಿನಲ್ಲಿ ಮುಳುಗಿ ಹೋಗಿದೆ ಅಲ್ಲದೆ ಪ್ರತಿ ಮನೆಗೆ ನೀರು ಸರಬರಾಜು 24 × 7 ಯೋಜನೆ ಅಡಿಯಲ್ಲಿ ಮನೆಮನೆಗೆ ಅಸಹ್ಯ ರೀತಿಯಲ್ಲಿ ಪೈಪುಗಳನ್ನು ಎಳೆದು ಮನೆಯ ಮುಂಭಾಗದಲ್ಲಿ ಸಿಮೆಂಟಿನ ಗುಡ್ಡೆಗಳನ್ನು ಮಾಡಿ ಹೋಗಿರುವುದು ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತೊಂದು ಮುಖ ಅಲ್ಲದೆ ಇದುವರೆಗೆ.
ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿಯ ಭಾಷೆಯನ್ನಾಗಲಿ ಹಾಗೂ ಕಾಮಗಾರಿಗಳಿಗೆ ಬಳಸುವ ಸಾಮಗ್ರಿಗಳ ಗುಣಮಟ್ಟದ ಬಗ್ಗೆಯಾಗಲಿ ಯಾವ ಕಂಪನಿಯ ಸಾಮಗ್ರಿಗಳನ್ನು ಬಳಸಿದ್ದಾರೆ ಇದರ ಖರ್ಚು-ವೆಚ್ಚದ ಬಗ್ಗೆ ಆಗಲಿ ಇಲ್ಲಿಯವರೆಗೆ ಜನರಿಗೆ ತಿಳಿಸಲು ಇರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ ರಾಜಕಾರಣಿಗಳು ಅಧಿಕಾರಿಗಳು ತಮ್ಮ ಕುಲಬಾಂಧವರು ಇದ್ದಂತಹ ಮನೆ ಮುಂಭಾಗದ ರಸ್ತೆ ಕಾಮಗಾರಿಗೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿದ್ದು ಉಳಿದ ಬೀದಿಗಳ ಕಾಮಗಾರಿಗಳು ಅತ್ಯಂತ ಕಳಪೆ ದಾಯಕ ವಾಗಿರುತ್ತದೆ ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಹೃದಯಭಾಗವಾದ ಕುವೆಂಪು ರಸ್ತೆ ಅಗಲೀಕರಣ ಮಾಡದೆ ಫುಟ್ಪಾತ್ ಆಗುವ ಸೈಕ್ಲಿಂಗ್ ಟ್ರ್ಯಾಕ್ ವಾಕಿಂಗ್ ಟ್ರ್ಯಾಕ್ ಯಾವುದೇ ಕಾಮಗಾರಿ ಇಲ್ಲದೆ ಶ್ರೀಮಂತರ ಕಾಂಪೌಂಡ್ ಮತ್ತು ಮನೆಯನ್ನು ಉಳಿಸಲು ಇರುವ ರಸ್ತೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಇದು ಇವರ ಭ್ರಷ್ಟಾಚಾರಕ್ಕೆ ಎದ್ದುಕಾಣುವ ಸಂಗತಿಯಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ…
ಶಿವಮೊಗ್ಗ ನಗರದ ಜನರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದ ನಿಷ್ಟಾವಂತ ಅಧಿಕಾರಿ ಗಳನ್ನು ಕೆಲಸ ಮಾಡಲು ಬಿಡದೆ ಅವರನ್ನು ಬೇರೆಡೆ ವರ್ಗಾವಣೆ ಮಾಡಲು ಇಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ಧುರೀಣರು ಅಣ್ಣ-ತಮ್ಮಂದಿರ ಹಾಗೆ ಒಗ್ಗಟ್ಟಿನಿಂದ ಪ್ರಾಮಾಣಿಕ ಅಧಿಕಾರಿಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಪ್ರಶ್ನೆ ಮಾಡುವ ಜನರು ರಾಜಕೀಯ ಪಕ್ಷಕ್ಕೆ ಮಾರಾಟವಾಗಿದ್ದು ಧರ್ಮಗಳ ಅಮಲಿನಲ್ಲಿ ಮುಳುಗಿದ್ದು ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹೇಸಿಗೆ ತಿನ್ನಲು ಸುವರ್ಣ ಅವಕಾಶವಾಗಿದೆ ಇನ್ನಾದರೂ ನಾವೆಲ್ಲರೂ ಎಚ್ಚೆದ್ದು ಪ್ರಶ್ನೆ ಮಾಡದಿದ್ದರೆ ನಾವು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮನೆ ತುಂಬುತ್ತದೆ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುತ್ತತಿ ರಾಜಕಾರಣಿಗಳಿಗೆ ಸಂಘಟನೆಯ ವತಿಯಿಂದ ಎಚ್ಚರಿಸುವುದೇನೆಂದರೆ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸುತ್ತದೆ ಇದೇ ರೀತಿ ಮುಂದುವರೆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಸಂಘಟನೆಯ ಸ್ಮಾರ್ಟ್ ಸಿಟಿ ಕಚೇರಿಗೆ ಬೀಗ ನಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘಟನೆ ಎಚ್ಚರಿಸುತ್ತದೆ.
ಈ ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ ಎಸ್ ಜಿಲ್ಲಾ ಕಾರ್ಯಧ್ಯಕ್ಷರ ಶಿವಕುಮಾರ್ ಎಸ್ ಬಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜೈ ಕೃಷ್ಣ ಸತೀಶ್ ಗೌಡ ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ನಗರ ಕಾರ್ಯದರ್ಶಿಯಾದ ಪ್ರಜ್ವಲ್ ಗಣೇಶ್ ಶಿವಕುಮಾರ್ ರಾಘವೇಂದ್ರ ಗುರುಮೂರ್ತಿ ರಾಮಣ್ಣ ನಾಗರಾಜ್ ಕಿರಣ್ ಗುರು ಪುರ ಕಾಂತ ಆಫೀಸ್ ವಿಶ್ವನಾಥ್ ಸಾಧಿಕ್ ಮುಂತಾದವರು ಭಾಗವಹಿಸಿದ್ದರು