ರಾಷ್ಟ್ರೀಯ ಹೆದ್ದಾರಿ (206)ರ ಅನುಪಾಸಿನ ಎಲ್ಲಾ ಶಾಲಾ ಕಾಲೇಜುಗಳ ಎದುರು ಸ್ಪೀಡ್ ಬ್ರೇಕರ್ (Roadhumps) ಅಳವಡಿಸುವಂತೆ ವಿದ್ಯಾರ್ಥಿ ಒಕ್ಕೂಟದಿಂದ ಆಗ್ರಹಿಸಲಾಯಿತು.

ಬಹುದಿನಗಳಿಂದ ಸಾಗರ ನಗರ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ,ಆದರಲ್ಲೂ ಮುಖ್ಯವಾಗಿ ಹೆದ್ದಾರಿಯ ಪಕ್ಕದಲ್ಲಿ ಇರುವ ಶಾಲೆ ಕಾಲೇಜುಗಳಿಗೆ ಹೋಗಲು (ರಸ್ತೆ ದಾಟಲು) ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ವಾಹನ ಚಾಲಕರು ಮಿತಿ ಇಲ್ಲದೆ ವಾಹನ ಚಲಾಯಿಸುವುದರಿಂದ ವಿದ್ಯಾರ್ಥಿಗಳು ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ಆದ್ದರಿಂದ ಈ ಕೂಡಲೇ ಶಾಲಾ ಕಾಲೇಜುಗಳ ಎದುರು ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಮಾನ್ಯ ಉಪವಿಭಾಗಿ ಅಧಿಕಾರಿಗಳ ಬಳಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್, ತಾಲೂಕ್ ಅಧ್ಯಕ್ಷರಾದ ಅಜಿತ್ ಕೇಶವ್,
ಸೈಯದ್ ಜೀಶನ್, ಆದಿತ್ಯ ,ವಿನಾಯಕ್,ರೋಷನ್, ವರ್ನೇಶ್ ಮತ್ತು ಹಲವು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…