ಶಿವಮೊಗ್ಗ: ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆತ್ಮಸ್ಥೆöÊರ್ಯ ವೃದ್ಧಿ ಜತೆಯಲ್ಲಿ ದೈಹಿಕ ಆರೋಗ್ಯವು ಉತ್ತಮವಾಗುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಎಲ್.ರವಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದದ ಜೆಎನ್‌ಎನ್ ಕ್ರೀಡಾಂಗಣದಲ್ಲಿ ರೋಟರಿ ವಲಯ 10,11ರ ಕ್ರಿಕೆಟ್, ವಾಲಿಬಾಲ್, ಟಗ್ ಆಫ್ ವಾರ್, ಥ್ರೋಬಾಲ್ ಹಾಗೂ ಹೊರಾಂಗಗಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ,
ದಿನನಿತ್ಯದ ಕೆಲಸ ಕಾರ್ಯಗಳ ಜತೆಯಲ್ಲಿ ಆರೋಗ್ಯ ವೃದ್ಧಿಗೆ ಸಹಕಾರಿ ಆಗುವ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಜೀವನಶೈಲಿಯಲ್ಲಿ ಪ್ರತಿಯೊಬ್ಬರು ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಕೆಲಸಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವ ಜತೆಯಲ್ಲಿ ಸದೃಢ ಮನಸ್ಥಿತಿಯಿಂದ ಕೆಲಸ ಮಾಡಲು ಕ್ರೀಡಾಮನೋಭಾವ ತುಂಬಾ ಮುಖ್ಯ ಎಂದರು.
ರೋಟರಿ ವಲಯ 10,11ರ ಕ್ರಿಕೆಟ್, ವಾಲಿಬಾಲ್, ಟಗ್ ಆಫ್ ವಾರ್, ಥ್ರೋಬಾಲ್ ಹಾಗೂ ಹೊರಾಂಗಗಣ ಕ್ರೀಡಾಕೂಟದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಕೋಣಂದೂರು, ರಿಪ್ಪನ್‌ಪೇಟೆ, ಸೊರಬ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ಕ್ರೀಡಾಕೂಟದ ನೇತೃತ್ವದ ವಹಿಸಲಾಗಿತ್ತು. ಮಾಜಿ ಸಹಾಯಕ ಗವರ್ನರ್ ಮುರಳಿ, ಜಿ.ವಿಜಯ್‌ಕುಮಾರ್, ಕಡಿದಾಳ್ ಗೋಪಾಲ್, ಕಾರ್ಯದರ್ಶಿ ಅನಿಲ್, ಶಿವಶಂಕರ್, ಶರತ್, ಉಮೇಶ್, ಆನಂದ್, ವಲಯ 10ರ ಸಹಾಯಕ ಗವರ್ನರ್ ಎಂ.ಪಿ.ಆನAದಮೂರ್ತಿ ಹಾಗೂ ರೋಟರಿ ಉತ್ತರ, ಮಿಡ್‌ಟೌನ್ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…