ತಮಿಳುನಾಡಿನ ಕೊನೂರ್ ಬಳಿ ಘಟಿಸಿದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ, ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ ಹಿರಿಯ ಸೇನಾಧಿಕಾರಿಗಳು ಮೃತರಾಗಿರುವುದು ಅತ್ಯಂತ ಆಘಾತಕಾರಿ ಹಾಗೂ ಬಹಳ ದುರದೃಷ್ಟಕರ….

ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತಮೊದಲ ಮುಖ್ಯಸ್ಥ (ಸಿಡಿಎಸ್‌) ಜ| ಬಿಪಿನ್‌ ರಾವತ್‌ ಇನ್ನಿಲ್ಲ ಎಂಬುದು ತೀವ್ರ ದುಃಖದ ಸಂಗತಿ. 2019ರ ಜನವರಿಯಲ್ಲಿ ಸಿಡಿಎಸ್‌ ಆಗಿ ನೇಮಕವಾಗಿದ್ದ ಜ| ರಾವತ್‌ ಸೇನೆಯ ಸುಧಾರಣೆಯ ಕನಸು ಕಂಡಿದ್ದರಲ್ಲದೆ ಇಲ್ಲೂ ಆತ್ಮನಿರ್ಭರ ಭಾರತ ಮೂಲಕ ದೇಶೀಯವಾಗಿ ಶಸ್ತ್ರಾಸ್ತ್ರ ಉತ್ಪಾದಿಸಲು ಮುಂದಡಿ ಇರಿಸಿದ್ದರು. ಜತೆಗೆ ಹೊರಗಿನ ಎಂಥದ್ದೇ ಸವಾಲುಗಳನ್ನಾಗಲಿ ಎದುರಿಸುವ ನಿಟ್ಟಿನಲ್ಲಿ ಮೂರು ಪಡೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ಕಮಾಂಡ್‌ಗಳ ರಚನೆಗೂ ಮುಂದಾಗಿದ್ದರು. ದುರದೃಷ್ಟವಶಾತ್‌ ಬುಧವಾರ ನಡೆದ ಹೆಲಿಕಾಪ್ಟರ್‌ ಅಪಘಾತದಲ್ಲಿ ಜ| ರಾವತ್‌ ಅವರು ಇನ್ನಿಲ್ಲವಾಗಿದ್ದಾರೆ. ಅವರ ಸಾವು ವಿಷಾದ ತಂದಿದೆ…

ಜನರಲ್ ಬಿಪಿನ್ ರಾವತ್ ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರ ತಂದೆಯ ಆಜ್ಞೆಯಂತೆ ಬಿಪಿನ್ ರಾವತ್ 16 ಡಿಸೆಂಬರ್ 1978 ರಂದು ಪದಾತಿದಳದ ಇಲವಂತ ಗೂರ್ಕ ರೈಫಲ್ಸ್ನ ಐದನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು. ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದಾಗ, ಅವರು ಗೌರವಾನ್ವಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ಪಡೆದರು. ಜನರಲ್ ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ದೀರ್ಘ ಸೇವಾ ಅನುಭವ ಅವರಿಗೆ ಇದೆ…

ಅವರ ವಿವಿಧ ವಲಯಗಳಲ್ಲಿನ ಸೇವೆ ನೋಡಿದರೆ :
ಪೂರ್ವ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಬೆಟಾಲಿಯನ್ ಮತ್ತು ಕಾಶ್ಮೀರ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಸೆಕ್ಟರ್‌ಗೆ ಕಮಾಂಡರ್ ಆಗಿದ್ದರು. ಬಳಿಕ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಅಧ್ಯಾಯ ಗಿಖಖ ಮಿಷನ್‌ನಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್‌ ಕಮಾಂಡ್ ಆದರು. ಅವರನ್ನು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ವಿಭಾಗದ ಕಮಾಂಡ್ ಆಗಿ ನಿಯೋಜಿಸಲಾಯಿತು. ಈಶಾನ್ಯದಲ್ಲಿ ಕಾರ್ಪ್ಸ್ ಕಮಾಂಡರ್ ಆಗಿದ್ದರು. ಆರ್ಮಿ ಕಮಾಂಡರ್ ಆಗಿ, ಅವರು ವೆಸ್ಟರ್ನ್ ಫ್ರೆಂಟ್ ಮೇಲ್ವಿಚಾರಕರಾಗಿ ಕಾರ್ಯಾಚರಣೆ ನಿರ್ವಹಿಸಿದರು…

ಹೀಗೆ ದೇಶ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟುಕೊಂಡು ತಾಯಿ ಭಾರತೀಯ ಮಡಿಲಿಗೆ ನಿನ್ನೆ ತಮ್ಮ ಪ್ರಾಣ ತ್ಯಾಗ ಮಾಡಿದ ಅವರಿಗೆ ಹಾಗೂ ಎಲ್ಲಾ ದೇಶ ಸೇವಕರಿಗೆ ಈ ಮೂಲಕ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತ
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ ವರ್ಗಕ್ಕೆ ಈ ನೋವು ಸಹಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾಥಿಸುತ್ತೇನೆ…

ಎಸ್ ದತ್ತಾತ್ರಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷರು…