ಹೊಸನಗರ ಕಸಬಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮಾರುತಿಪುರದಲ್ಲಿ ಪಂಚಾಯಿತಿ ಸದಸ್ಯರ ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಮಾತನಾಡುತ್ತಾ ರಾಜ್ಯದ ಬಿಜೆಪಿ ಸರ್ಕಾರ ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸಿಗೆ ಎಳ್ಳು ನೀರು ಬಿಟ್ಟು ಸದಸ್ಯರ ಅಧಿಕಾರವನ್ನು ಕಿತ್ತುಕೊಂಡು ಗ್ರಾಮ ಪಂಚಾಯಿತಿ ಸದಸ್ಯರನ್ನು ಬೀದಿಗೆ ತಳ್ಳಿದ್ದಾರೆ.
ಮಹಿಳೆಯರಿಗೆ ಶೇಕಡಾ ಐವತ್ತು ರಷ್ಟು ಮೀಸಲಾತಿಯನ್ನು ತಂದು ಸಮಾನತೆಯ ಅವಕಾಶವನ್ನು ಕಲ್ಪಿಸಿದ್ದು ನಮ್ಮ ಸರ್ಕಾರ ರಾಜೀವ್ ಗಾಂಧಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಜಾರಿಗೆ ತಂದು ದೇಶದ ಅಭಿವೃದ್ಧಿ ಗ್ರಾಮದಿಂದ ಮಾತ್ರ ಸಾಧ್ಯವೆಂದು ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದರು ತಾವೇ ಅಭಿವೃದ್ಧಿಯ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಕ್ಕೆ ತರುವ ಹೆಚ್ಚಿನ ಅಧಿಕಾರವನ್ನು ನೀಡಿದ್ದರು ಆದ್ರೆ ಇಂದಿನ ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಯ ಹಣದಲ್ಲಿ ತಾವೇ ಕ್ರಿಯಾಯೋಜನೆಯನ್ನು ತಯಾರಿಸಿ ಅನುಷ್ಠಾನಕ್ಕೆ ತರುವುದರಿಂದ ನಿಮ್ಮ ಅಧಿಕಾರವನ್ನು ಸಂಪೂರ್ಣ ಕಸಿದುಕೊಂಡಿದ್ದಾರೆ ಇದನ್ನು ಪ್ರಶ್ನಿಸಬೇಕಾದ ನಮ್ಮ ಕ್ಷೇತ್ರದ ಶಾಸಕರು ಬೀದಿ ಬೀದಿಯಲ್ಲಿ ಹೆಂಡದ ಅಂಗಡಿಯನ್ನು ತೆರೆದು ಮಿಣಿಮಿಣಿ ದೀಪ ಹಾಕಿ ವ್ಯಾಪಾರ ಮಾಡಿಕೊಂಡಿದ್ದಾರೆ .
ನಾನು ಶಾಸನಸಭೆಯ ಸದಸ್ಯನಾಗಿದ್ದರೆ ಶಾಸನಸಭೆಯಲ್ಲಿ ಪ್ರತಿಭಟಿಸಿ ಗ್ರಾಮ ಪಂಚಾಯಿತಿಯ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ದ್ದಕ್ಕಾಗಿ ನೇಣು ಹಾಕಿಕೊಳ್ಳುತ್ತಿದ್ದೆ ಎಂದರು .ಇದನ್ನು ಪ್ರಶ್ನಿಸಬೇಕಾದ ನಮ್ಮ ಪ್ರತಿನಿಧಿ ಕಮಿಷನ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು . ಕೇಂದ್ರ ಸರ್ಕಾರ ಸ್ಯಾಟಲೈಟ್ ಮೂಲಕ ಮಲೆನಾಡ ಸರ್ವೆ ಮಾಡಿ ಪಶ್ಚಿಮಘಟ್ಟದ ಹೆಸರಿನಲ್ಲಿ ಮಲೆನಾಡ ಜನರ ಬದುಕಿಗೆ ಮಾರಕವಾಗಿದ್ದಾರೆ . ಮಲೆನಾಡ ಪರಿಸ್ಥಿತಿ ಇವರಿಗೇನು ಗೊತ್ತು ಎಲ್ಲೋ ಎಸಿ ರೂಮಿನಲ್ಲಿ ಕುಳಿತು ಸರ್ವೆ ಮಾಡಿ ಕಾನೂನು ಜಾರಿಗೆ ತರುವ ಅಧಿಕಾರಿ ಹಾಗೂ ಸರ್ಕಾರಗಳ ವಿರುದ್ಧ ಹೋರಾಟ ಅನಿವಾರ್ಯ ಎಂದರು .
ಮಧು ಬಂಗಾರಪ್ಪ ಈ ರಾಜ್ಯದ ಭವಿಷ್ಯದ ನಾಯಕ ಅವರಲ್ಲಿ ಹೋರಾಟದ ಕಿಚ್ಚು ಇದೆ ಈ ಭಾಗದ ರೈತರ ಜನಸಾಮಾನ್ಯರ ನೋವಿನ ಅರಿವಿದೆ ನೀವೆಲ್ಲ ಮುಂದಿನ ದಿನಗಳಲ್ಲಿ ಅವರಿಗೆ ಆಶೀರ್ವಾದ ಮಾಡಬೇಕು ಬೇಳೂರು ಗೋಪಾಲಕೃಷ್ಣ ಮತ್ತು ಮಧು ಬಂಗಾರಪ್ಪನವರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಿ ಎಂದು ಅಲ್ಲಿ ಸೇರಿದ್ದ ಪಂಚಾಯ್ತಿ ಸದಸ್ಯರ ಹಾಗೂ ಮುಖಂಡರಲ್ಲಿ ಮನವಿ ಮಾಡಿದರು .
ವಿಧಾನಪರಿಷತ್ ಚುನಾವಣೆಯಲ್ಲಿ ನೇರ ಸ್ಪರ್ಧೆ ಇರುವುದರಿಂದ ಆರ್. ಪ್ರಸನ್ನಕುಮಾರ್ ಹೆಸರಿನ ಮುಂದೆ 1ಗೆರೆ ಎಳೆಯುವ ಮೂಲಕ ಅವರನ್ನು ಗೆಲ್ಲಿಸಿ ಕೊಡುವುದರ ಮೂಲಕ ನಿಮ್ಮ ಅಧಿಕಾರ ಕಿತ್ತುಕೊಂಡ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಮಧು ಬಂಗಾರಪ್ಪನವರು ,ಬೇಳೂರು ಗೋಪಾಲಕೃಷ್ಣರವರು, ವಿಧಾನಪರಿಷತ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ರವರು, ಡಾಕ್ಟರ್. ರಾಜ ನಂದಿನಿ, ಕಲಗೋಡು ರತ್ನಾಕರ್ ,ಎಸ್ .ಪಿ. ದಿನೇಶ್, ಜಿ.ಡಿ. ಮಂಜುನಾಥ್, ಶಾಂತವೀರನಾಯ್ಕ, ಹೋಳಿಯಪ್ಪ, ಲ್ಯಾವಿಗೆರೆ ಸೋಮಶೇಖರ್, ಲೋಕೇಶ್ ಮುಂತಾದ ಮುಖಂಡರು ಉಪಸ್ಥಿತರಿದ್ದರು .