ಶಿವಮೊಗ್ಗ: ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಡಿ. 12 ರಂದು ನಡೆಯಲಿರುವ ಚುನಾವಣೆಗೆ ಶಿವಮೊಗ್ಗ-ಉತ್ತರಕನ್ನಡ ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ತಮಗೆ ಮತ ನೀಡಿ ಗೆಲ್ಲಿಸುವಂತೆ ಅಭ್ಯರ್ಥಿ ಕೆ.ಎಸ್. ರವಿಕುಮಾರ್ ಮನವಿ ಮಾಡಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲಿ ವೃತ್ತಿ ಮಾಡುತ್ತಿರುವ ತಾವು ಕಳೆದ 10 ವರ್ಷಗಳಿಂದ ಜಿಲ್ಲಾ ವಕೀಲರ ಸಂಘದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ಸಮಾಜದ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು.ಗೆಲ್ಲಿಸಿದರೆ ರಾಜ್ಯ ಸಂಘದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಜಿಲ್ಲೆಯ ಸಮಾಜ ಬಾಂಧವರಿಗೆ ತಲುಪಿಸಲು ಪ್ರಾಮಾಣಿಕ ಯತ್ನ ಮಾಡಲಾಗುತ್ತದೆ.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಕನಿಷ್ಠ 50 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುತ್ತದೆ ಎಂದರು.ವೈದ್ಯಕೀಯ, ಇಂಜಿನಿನಿಯರಿಂಗ್ ಹಾಗೂ ಇತರೆ ತಾಂತ್ರಿಕ ಕೋರ್ಸ್ಗತಳಿಗೆ ಪ್ರವೇಶಾತಿ ಮಾಹಿತಿ ಒದಗಿಸುವುದು, ಸಂಘದ ಆಸ್ಪತ್ರೆಯಲ್ಲಿ ಸಂಘದ ಸದಸ್ಯರುಗಳಿಗೆ ವಿನಾಯಿತಿಯಲ್ಲಿ ಚಿಕಿತ್ಸೆ ಕಲ್ಪಿಸುವುದು, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ ಸ್ಥಾಪನೆ, ಉದ್ಯೋಗ ಹಾಗೂ ಆರೋಗ್ಯ ಮೇಳ ನಡೆಸುವುದು ಆದ್ಯತೆಯಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಂಗಾಧರ್, ಮನೋಜ್, ನಾಗರಾಜ್, ಸೋಮಶೇಖರ್, ಜಗದೀಶ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…