ದಿನಾಂಕಃ-16-12-2021 ರಂದು ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪುನಗರದ ಡಿವಿಎಸ್ ಬಡಾವಣೆಯ ಹತ್ತಿರ ಯಾರೋ 03 ಜನ ವ್ಯಕ್ತಿಗಳು ಬೈಕ್ ಗಳನ್ನು ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಾಳಿ ನಡೆಸಿದ್ದಾರೆ.

ಆರೋಪಿತರಾದ 1)ಕೌಶಿಕ್, 21 ವರ್ಷ, ಬೀರನಕೆರೆ ತಾಂಡಾ, ಶಿವಮೊಗ್ಗ, 2)ಯುವರಾಜ, 23 ವರ್ಷ, ಬೀರನಕೆರೆ ತಾಂಡಾ, ಶಿವಮೊಗ್ಗ, 3)ವಿನೋದ 24 ವರ್ಷ, ಬೀರನಕೆರೆ ತಾಂಡಾ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಒಟ್ಟು 435 ಗ್ರಾಂ ತೂಕದ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ದ ಗುನ್ನೆ ಸಂಖ್ಯೆ 0473/2021 ಕಲಂ 20(b) NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…