ಶಿವಮೊಗ್ಗ: ಪದವೀಧರರ ಸಹಕಾರ ಸಂಘ 2020-21ನೇ ಸಾಲಿನಲ್ಲಿ 127.36 ಕೋ.ರೂ. ವ್ಯವಹಾರ ನಡೆಸಿ 1.59 ಕೋ.ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಇಂದು 2022 ನೇ ಸಾಲಿನ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಸಂಘದಲ್ಲಿ 6468 ಸದಸ್ಯರಿದ್ದು, 3.01 ಕೋ.ರೂ.ನಿವ್ವಳ ಷೇರು ಬಂಡವಾಳ ಹೊಂದಿದ್ದು, ಆಪದ್ದನ ನಿಧಿಯಲ್ಲಿ 2.16 ಕೋ.ರೂ. ಹಾಗೂ ಕಟ್ಟಡ ನಿಧಿಯಲ್ಲಿ 2.66 ಕೋ.ರೂ. ಮತ್ತು ಇತರೆ ನಿಧಿಗಳಲ್ಲಿ 2.42 ಕೋ.ರೂ, ಇದ್ದು, ಸದಸ್ಯರಿಂದ 52.23 ಕೋ.ರೂ.ಠೇವಣಿ ಸಂಗ್ರಹಿಸಿದ್ದು, 44.88 ಕೋ.ರೂ.ಸಾಲ ನೀಡಲಾಗಿದೆ. ಸಾಲ ವಸೂಲಾತಿಯೂ ಶೇ.0.76ರಷ್ಟಿದೆ ಎಂದರು.ಸಂಘವು ಲಾಭಗಳಿಸುವುದಷ್ಟೆ ಅಲ್ಲದೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ಕಳೆದ ವರ್ಷ ಕೋವಿಡ್ನದಲ್ಲಿ ಲಾಕ್ಡೌತನ್ನಿಂದದ ಸಂಕಷ್ಟಕ್ಕೆ ಒಳಗಾದವರಿಗೆ ಸಂಘದಿಂದ ಮತ್ತು ಸದಸ್ಯರು ನೀಡಿದ ದೇಣಿಗೆಯಿಂದ ಸುಮಾರು 3ಲಕ್ಷ ರೂ.ಗಳ ಆಹಾರ ಕಿಟ್ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50,000 ರೂ. ದೇಣಿಗೆ ನೀಡಲಾಗಿದೆ.
ಈ ವರ್ಷ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ನಿಂರದ ಬಳಲುತ್ತಿರುವವರಿಗಾಗಿ 11ಟನ್ ತೂಕದ 1ಆಕ್ಸಿಜನ್ ಟ್ಯಾಂಕರ್ ಖರೀದಿಗೆ 2.10 ಲಕ್ಷ ರೂ. ಚೆಕ್ನ್ನು ಸಿಮ್ಸ್ ನಿರ್ದೇಶಕರಿಗೆ ನೀಡಲಾಗಿದೆ ಎಂದರು.ಸಂಘದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಬಿಎ, ಎಂಕಾಂ ಮತ್ತು ಎಂಎಸ್ಸಿ (ಗಣಿತ ವಿಭಾಗ) ಈ ಮೂರು ವಿಭಾಗಗಳಲ್ಲಿ ತಲಾ 1 ಲಕ್ಷ ರೂ. ನಂತೆ ಒಟ್ಟು 3ಲಕ್ಷ ರೂ.ವನ್ನು ಸಂಘದ ಹೆಸರಿನಲ್ಲಿ ಒಟ್ಟು 3 ದತ್ತಿನಿಧಿ ಸ್ಥಾಪಿಸಿ ಈ ವಿಷಯಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಘಟಿಕೋತ್ಸವ ಸಮಾರಂಭದಲ್ಲಿ ಸ್ವರ್ಣ ಪದಕ ನೀಡುವಂತೆ ಮಾಡಲಾಗಿದೆ ಎಂದರು.
ಸರ್ವ ಸದಸ್ಯರ ಸಭೆ: ಸಂಘದ 46ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಡಿ.19ರ ನಾಳೆ ಬೆಳಿಗ್ಗೆ 9.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಸದಸ್ಯರಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಸಂಘದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂಘದ ಶಾಖಾ ಕಚೇರಿ ಹಾಗೂ ಉದ್ದೇಶಿತ ಶಿಕ್ಷಣ ಸಂಸ್ಥೆ ಆಡಳಿತ ಕಚೇರಿಗಾಗಿ ಕಟ್ಟಡ ನಿರ್ಮಿಸಲು ಕೃಷಿನಗರದಲ್ಲಿ 40×60 ಅಳತೆಯ ನಿವೇಶನ ಖರೀದಿಸಿ ಸಂಘದ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ನಾಳೆ ನಡೆಯುವ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಪಡೆದು ಕಟ್ಟಡ ನಿರ್ಮಾಣ ಹಾಗೂ ಶಾಖಾ ಕಚೇರಿ ತೆರೆಯುವ ಆಲೋಚನೆ ಹೊಂದಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಹೆಚ್.ಸಿ.ಸುರೇಶ್, ಎಸ್.ರಾಜಶೇಖರ್, ಎಸ್.ಕೆ.ಕೃಷ್ಣಮೂರ್ತಿ, ಯು.ರಮ್ಯಾ, ಗೋಪಾಕಕೃಷ್ಣ, ಕವಿತಾ ಇನ್ನಿತರರು ಉಪಸ್ಥಿತರಿದ್ದರು.