ಹೆಚ್ ಸಿ ಯೋಗೇಶ್ ಅವರು ಮಾತನಾಡಿ ಚನ್ನಬಸಪ್ಪನವರು ಹೇಳಿದಂತೆ ನಾವು ಮಾಡಿದ ಧರಣಿ ರಾಜಕೀಯ ಪ್ರೇರಿತ ವಾಗಿರಲಿಲ್ಲ ನಿಮ್ಮ ಇಚ್ಛಾಶಕ್ತಿಯ ಕೊರತೆಯ ವಿರುದ್ಧವಾಗಿತ್ತು. ಮೇ 20 ರಂದು ಸಭೆ ನಡೆಸಿದ್ದೀರಿ ಜೂನ್ 9 ರಂದು ಪ್ರಕ್ರಿಯೆ ಮುಗಿಯುತ್ತದೆ ಅಲ್ಲಿಂದ ಹದಿನೈದು ದಿನಗಳ ಒಳಗೆ ಫುಡ್ ಕಿಟ್ ಬರುತ್ತದೆ ಎಂದು ಹೇಳಿದ್ದೀರಾ ಸರಕಾರದ ಪ್ರಕಾರ ಜೂನ್ 14 ಕೆ ಲಾಕ್ ಡೌನ್ ಕೊನೆಯಾಗುತ್ತದೆ. ಅಂದರೆ ಲ್ಯಾಂಗ್ಡೊನ್ ಮುಗಿದ ನಂತರ ಫುಡ್ ಕಿಟ್ ಕೊಡ್ತೀರಾ ???

ನಾವು ನಿಮಗೆ ಫುಡ್ ಕಿಟ್ ಕೊಟ್ಟು ನಂತರ ಲಾಕ್ ಡೌನ್ ಮಾಡಿ ಎಂದು ಒತ್ತಾಯಿಸಿದ್ದೆವು . ಜನರ ಕಷ್ಟ ನಿಮಗೆ ಅರಿವಾಗುತ್ತಿಲ್ಲ ಎಂದು ಆರೋಪಿಸಿದರು. ಖಾಸಗಿ ಆಸ್ಪತ್ರೆಗಳು ಹಣ ಕೊಟ್ಟು ಲಸಿಕೆ ಕಂಡುಕೊಂಡಿವೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿದೆ. ಹಾಗೆಯೇ ಮೇಯರ್ ಅವರು ಅನಿಲ ಶವಾಗಾರದಲ್ಲಿ ಉಚಿತ ಎಂದು ಘೋಷಿಸಿದ್ದೀರಿ ಸೌದೆ ಚಿತಾಗಾರದಲ್ಲಿ 2500 ಕೊಡಬೇಕು. ಅದನ್ನು ಉಚಿತ ಮಾಡಿ ಎಂದು ಆಗ್ರಹಿಸಿದರು.


ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ