ಶಿವಮೊಗ್ಗ: ಎನ್.ಡಿ. ಸುಂದರೇಶ್ ಕಟ್ಟುವ ಕಾಲಘಟ್ಟದಲ್ಲಿದ್ದವರು ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರಗೌಡ ಹೇಳಿದರು.ಅವರು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಎನ್.ಡಿ. ಸುಂದರೇಶ್ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಸುಂದರೇಶ್ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎನ್.ಡಿ. ಸುಂದರೇಶ್ ಒಬ್ಬ ಸಾತ್ವಿಕ ಮನುಷ್ಯ. ಯಾರನ್ನೂ ದ್ವೇಷ ಮಾಡಿದವರಲ್ಲ ಆದರೆ, ಅನ್ಯಾಯಗಳನ್ನು ನೋಡಿ ಸುಮ್ಮನಿರುತಿರಲಿಲ್ಲ. ರೈತಸಂಘದ ಸ್ಥಾಪಕ ಸದಸ್ಯರು ಅವರಾಗಿದ್ದಾರೆ. ಬಹುಶಃ ಸುಂದರೇಶ್ ಅವರಂತಹ ನಾಯಕರಿಂದ ಇಂದು ರೈತ ಸಂಘ ಉಳಿದುಕೊಂಡು ಬಂದಿದೆ ಎಂದರು.ಸುಂದರೇಶ್ ಅವರ ಕಾಲ ಕಟ್ಟುವ ಕಾಲವಾಗಿತ್ತು. ಅದು 20 ನೇ ಶತಮಾನ. ಆದರೆ, ಈಗ 21 ನೇ ಶತಮಾನದಲ್ಲಿ ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವದೇ ಬಹುದೊಡ್ಡ ಸಂಘಟನೆಗಳನ್ನು ನಮ್ಮ ಹಿರಿಯರು ಕಷ್ಟಪಟ್ಟು ಕಟ್ಟಿದ್ದಾರೆ.

ಆದರೆ, ಇಂದು ಅದನ್ನು ಉಳಿಸಿಕೊಳ್ಳಲು ಇಷ್ಟಪಡದ ಕಾಲವಾಗಿದೆ. ಹಣದ ಮೌಲ್ಯ ಕಡಿಮೆಯಾಗಿದೆ. ವಿಶೇವಾಗಿ ಕಾರ್ಪೋರೇಟ್ ವ್ಯಕ್ತಿಗಳಿಗೆ ಕಟ್ಟಿದ ಕಾಲದ ಅವಶ್ಯಕತೆ ಇಲ್ಲವಾಗಿದೆ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಎನ್.ಡಿ. ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ್, ಪ್ರಾಚಾರ್ಯ ಡಾ. ಚಿದಾನಂದ್ ಸೇರಿದಂತೆ ಹಲವರಿದ್ದರು. ಕಾರ್ಯಕ್ರಮದಲ್ಲಿ ಎನ್.ಡಿ. ಸುಂದರೇಶ್ ಅವರ ವ್ಯಕ್ತಿತ್ವ ಕುರಿತಂತೆ ಕವನಗಳ ವಾಚನ ಮಾಡಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…