ಉದ್ಯಮಿಯಾಗು ಉದ್ಯೋಗ ನೀಡು : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ಕರೆ…
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯದ ವಿವಿಧ ವ್ಯಾಪ್ತಿಯಲ್ಲಿ ಬರುವ ಸುಮಾರು 73 ಕೈಗಾರಿಕಾ ವಸಾಹತುವಿನಲ್ಲಿ 1500 ಕ್ಕೂ ಹೆಚ್ಚು “ಕೈಗಾರಿಕಾ ಮಳಿಗೆ/ನಿವೇಶನ/ಸಂಕೀರ್ಣ ಹಾಗೂ ಗೋದಾಮುಗಳ ಹಂಚಿಕೆಗೆ ಆಸಕ್ತ ಉದ್ದಿಮೆದಾರರುಗಳಿಂದ ಅರ್ಜಿ ಕರೆಯಲಾಗಿದೆ”….
ಹಂಚಿಕೆ ನಿಯಮ ಮತ್ತು ನಿಬಂಧನೆಗಳ ವಿವರಗಳನ್ನು ಮತ್ತು ಅರ್ಜಿ ನಮೂನೆಗಳನ್ನು ನಿಗಮದ ಕೇಂದ್ರ ಕಛೇರಿ ಹಾಗೂ ನಿಗಮದ ವಿಭಾಗೀಯ / ಶಾಖಾ ಕಛೇರಿಗಳಲ್ಲಿ ಪಡೆಯಬಹುದಾಗಿದೆ ಹಾಗೂ ನಿಗಮದ ವೆಬ್‌ಸೈಟ್ www.kssidc.co.in ನಿಂದಲೂ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಸಂಬಂಧಪಟ್ಟ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿಯೂ ಸಹ ವಿವರಗಳನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 31-01-2022ರ ಸಂಜೆ 5:00 ಗಂಟೆಯ ಒಳಗೆ ನಿಗಮದ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ…
ಆಸಕ್ತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಉದ್ಯಮವನ್ನು ಪ್ರಾರಂಭಿಸಬೇಕು ಎಂಬುದು ನನ್ನ ಅಭಿಲಾಷೆ ಎಂದು ಎಸ್ ದತ್ತಾತ್ರಿ ತಿಳಿಸಿದ್ದಾರೆ….