ಚಿಕ್ಕಮಗಳೂರು ಜಿಲ್ಲೆಯ ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿರುವ, ಹಿಂದೂಗಳಿಗೆ ಪವಿತ್ರ ಸ್ಥಳವಾಗಿರುವ, ಮೊದಲ ಗುರು ದತ್ತಾತ್ರೇಯರು ತಮ್ಮ ಶಿಷ್ಯರಿಗೆ ವೇದಗಳನ್ನು ಪಠಿಸಿದ್ದು ಇದೇ ಸ್ಥಳದಲ್ಲಿ ಎಂದು ಹೇಳಲಾಗುವ ಗುರು ದತ್ತಾತ್ರೇಯ ಪೀಠಕ್ಕೆ, ಮೈಸೂರು ಒಡೆಯರು ಮತ್ತು ರಾಣಿ ಕೆಳದಿ ಚನ್ನಮ್ಮ ಅವರು ತ್ರಿಕಾಲ ಪೂಜೆ ನಡೆಸಲು 200 ಎಕರೆ ಜಾಗವನ್ನು ಗುಹಾ ದೇಗುಲಕ್ಕೆ ದಾನ ಮಾಡಿದ್ದಾರೆ ಎಂಬ ಐತಿಹ್ಯವುಳ್ಳ ಪವಿತ್ರ ಕ್ಷೇತ್ರ ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ, ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ತಂಡವು ಭೇಟಿ ನೀಡಿ , ಲೋಕ ಕಲ್ಯಾಣಾರ್ಥಕ್ಕಾಗಿ ಪೂಜೆ ಸಲ್ಲಿಸಿ, ಭಜನೆಯನ್ನು ನೆರವೇರಿಸಿ, ಸಂತೃಪ್ತ ವಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಸುರೇಖಾ ಮುರಳೀಧರ್, ಚಿಕ್ಕಮಗಳೂರು ಜಿಲ್ಲಾ ಪ್ರಭಾರಿ ರೇಣುಕಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿ ಶ್ರೀನಿವಾಸ್ , ಉಪಾಧ್ಯಕ್ಷರುಗಳಾದ ರಾಧ ಗುರುದತ್, ಗೀತ ರಾಮಚಂದ್ರ, ಯಶೋದ, ಕಾರ್ಯದರ್ಶಿಗಳಾದ ವರಲಕ್ಷ್ಮಿ, ಸುನಿತಾ,ಕರಿಬಸಮ್ಮ, ಖಜಾಂಚಿ ರಶ್ಮಿ ಶಿವಕುಮಾರ್, ಮಾಜಿ ಮೇಯರ್ ಸುವರ್ಣ ಶಂಕರ್ ಪಾಲಿಕೆ ಸದಸ್ಯರಾದ ಕಲ್ಪನಾ ರಮೇಶ್, ಸಂಗೀತಾ ನಾಗರಾಜ್ ಹಾಗೂ ಹಲವಾರು ಸದಸ್ಯರು ಭಾಗಿಯಾಗಿದ್ದರು.