ರಮಣರ ಸಂದೇಶ ಅತಿ ಸರಳವಾದುದು. ನಾನು ಯಾರು ಎಂಬುದನ್ನು ಯಾರು ತಿಳಿಯಲು ಪ್ರಯತ್ನಿಸುತ್ತಾರೋ ಅವರು ಆತ್ಮ ಸಾಕ್ಷಾತ್ಕಾರಕ್ಕೆ ಅರ್ಹರಾಗಿರುತ್ತಾರೆ. ಸಾವಿನ ಬಗ್ಗೆ ಅನುಭವ ಹೊಂದಿದ ರಮಣರು ಸಾವು ಅನಿವಾರ್ಯವಾದರೂ, ಅಧರ್ಮವನ್ನು ಬಿಟ್ಟು ಯಾರು ಬದುಕುತ್ತಾರೊ ಅವರಿಗೆ ಸಾವಿನ ಭಯ ಬರುವುದಿಲ್ಲ ಎಂದು ತಿಳಿಸಿದರು.
ಎಂ.ಎನ್.ಸುಂದರ ರಾಜ್ ಅವರು ರಚಿಸಿದ “ಮಹರ್ಷಿದ್ವಯರು” ಕೃತಿಯನ್ನು ಬಿಡುಗಡೆ ಮಾಡಿದ ಕುವೆಂಪು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಸದಾನಂದ್ ಅವರು, ಮಾತನಾಡಿ, ಅರವಿಂದರು ತಮ್ಮ ಜೀವನವನ್ನು ರಾಜಕೀಯದಿಂದ ಪ್ರಾರಂಭಿಸಿ, ಅಧ್ಯಾತ್ಕಕ್ಕೆ ಬಂದವರು. ಅಂದರೆ, ಎಲ್ಲರಿಗೂ ಅಧ್ಯಾತ್ಮ ಕೊನೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಅದೇರೀತಿ ರಮಣರು ಒಂದೇ ಕಡೆ ನೆಲಸಿ, ಅತಿ ಸರಳ ಜೀವನ ನಡೆಸಿ ಜ್ಞಾನ ಪಿಪಾಸುಗಳಿಗೆ ಯೋಗ್ಯ ಮಾರ್ಗದರ್ಶನ ಮಾಡಿದವರು ನಮ್ಮ ರಮಣರು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಲೇಖಕರ ಕೃತಿ ಸಮಯೋಚಿತವಾಗಿದೆ ಎಂದು ತಿಳಿಸಿದರು.
ಸಮಾರಂಭದ ಅದ್ಯಕ್ಷತೆಯನ್ನು ಶಾಸಕರಾದ ಎಸ್.ರುದ್ರೇಗೌಡರು ವಹಿಸಿದ್ದರು.
ರಾಮಾಯಣ ಸಾರ ಮತ್ತು ಮಹಾಭಾರತ ಸಾರ ಕೃತಿಯನ್ನು ರಚಿಸಿದ ಡಾ.ಎ.ಎನ್. ಮಧುಸೂದನರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವಕೇಂದ್ರದ ಡಾ.ಬಸವ ಮರುಳ ಸಿದ್ಧ ಸ್ವಾಮೀಜಿಯವರು ದಿವ್ಯ ಸಾನ್ನಿದ್ಯ ವಹಿಸಿದ್ದರು.
ನ್ಯಾಮತಿ ಚನ್ನಬಸಪ್ಪ ನವರು ಕಾರ್ಯಕ್ರಮ ನಿರೂಪಿಸಿದರು.ಪ್ರಾರಂಭದಲ್ಲಿ ರುಕ್ಮಿಣಿ ಅನಂದ್ ಅವರಿಂದ ಪ್ರಾರ್ಥನೆ, ವಿನಾಯಕ ಅವರಿಂದ ಸ್ವಾಗತ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಾಗ್ಯ ಬಾಲಚಂದ್ರ ಅವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮವನ್ನು ಏರಗಪಡಿಸಲಾಗಿತ್ತು.