ರಾಜ್ಯವ್ಯಾಪಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಒದಗಿಸಿ ಕೊಡುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ ನಿಶ್ಚಿತ ಆದಾಯ ಉದ್ಯೋಗ ಭದ್ರತೆಯಿಲ್ಲದೆ ಯಾತನಾಮಯ ಜೀವನ ನಡೆಸುತ್ತಿದ್ದಾರೆ ಇಷ್ಟಾದರೂ ಸರ್ಕಾರ ಅತಿಥಿ ಉಪನ್ಯಾಸಕರ ಗೋಳು ಕೇಳುತ್ತಿಲ್ಲ ಇದನ್ನು ಶಿವಮೊಗ್ಗ ನಗರ NSUI ತೀವ್ರವಾಗಿ ಖಂಡಿಸುತ್ತದೆ.
ಸ್ನಾತಕೋತ್ತರ NET ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು,ಡಾಕ್ಟರೇಟ್ ಮಾಡಿದವರು 10-15ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಗೌರವ ಯುತವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.ಅದರಲ್ಲೂ ಕಳೆದೆರಡು ವರ್ಷಗಳಿಂದ ಎಷ್ಟೋ ತಿಂಗಳುಗಳ ಕಾಲ ವೇತನವಿಲ್ಲದೆ ಜೀವನ ನಡೆಸುತ್ತಿದ್ದಾರೆ ಉನ್ನತ ಶಿಕ್ಷಣ ಪಡೆದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಅತಿಥಿ ಉಪನ್ಯಾಸಕರು ತಮಗೆ ಭವಿಷ್ಯವಿಲ್ಲ ಎನ್ನುವಂತೆ ಜೀವನ ನಡೆಸುತ್ತಿದ್ದಾರೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ ಆದರೆ ಸರ್ಕಾರ ಇವರ ಗೋಳು ಕೇಳುತ್ತಿಲ್ಲ.
ಉದ್ಯೋಗ ಭದ್ರತೆಯಿಲ್ಲದೆ ಯಾತನಾಮಯ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಜೀವನ ನಿರ್ವಹಣೆಯೂ ಕಷ್ಟವಾಗಿರುವುದರಿಂದ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ .ಈಗಾಗಲೇ ಹಲವಾರು ಆತ್ಮಹತ್ಯೆ ಮಾಡಿಕೊಂಡಿದ್ದು ಇತ್ತೀಚೆಗೆ ತೀರ್ಥಹಳ್ಳಿ ಸರಕಾರಿ ಪದವಿ ಕಾಲೇಜು ಉಪನ್ಯಾಸಕ ಶ್ರೀಹರ್ಷ ಶ್ಯಾನುಭೋಗ ಅವರು ಸಹ ಆತ್ಮಹತ್ಯೆಗೆ ಶರಣಾಗಿರುವುದು ಅತಿಥಿ ಉಪನ್ಯಾಸಕರ ಸಮೂಹವೇ ಆತಂಕಪಡುವಂತಾಗಿದೆ .ಭವಿಷ್ಯದ ವಿದ್ಯಾರ್ಥಿಗಳ ಜೀವನ ರೂಪಿಸುವ ಉಪನ್ಯಾಸಕರ ಭವಿಷ್ಯಕ್ಕೆ ಮಂಕು ಕವಿದಂತಾಗಿದೆ.ಇಷ್ಟಾದರೂ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸದೆ ಇರುವುದು ಅತ್ಯಂತ ಖಂಡನೀಯ .ಅತಿಥಿ ಉಪನ್ಯಾಸಕರು ತಮ್ಮ ಸಮಸ್ಯೆಗಳಿಗೆ ಆಗ್ರಹಿಸಿ ಕಳೆದ 25ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.
ಇದೀಗ ತೀರ್ಥಹಳ್ಳಿಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದು ಅವರ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಾರೆ ಇತ್ತ ಕಾಲೇಜುಗಳಲ್ಲಿ ಬಹುತೇಕ ಪಾಠ ಪ್ರವಚನಗಳನ್ನು ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಲ್ಲದೆ ಯಾವುದೇ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ .ಇದರಿಂದಾಗಿ ವಿದ್ಯಾರ್ಥಿಗಳ ಓದಿಗೆ ತೀವ್ರ ಹಿನ್ನಡೆ ಯಾಗುತ್ತಿದೆ ಈಗಾಗಲೇ ಕಳೆದೆರಡು ವರ್ಷಗಳಿಂದ ಸಮರ್ಪಕ ಪಾಠ ಪ್ರವಚನಗಳು ನಡೆಯದೆ ಕಂಗಾಲಾಗಿರುವ ವಿದ್ಯಾರ್ಥಿಗಳಿಗೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಗಜ ಪಠ್ಯಕ್ರಮಗಳು ಅರ್ಥವಾಗುತ್ತಿಲ್ಲ .ಇನ್ನೂ ತರಗತಿಗಳೇ ನಡೆಯದಿದ್ದರೆ ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ ?
ಇದು ಕೇವಲ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಯಾಗದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಬೇಕು .ಹತ್ತಾರು ವರ್ಷಗಳಿಂದ ಉದ್ಯೋಗ ಭದ್ರತೆ ಸಿಗುವದೆಂಬ ಭರವಸೆಯಲ್ಲೇ ಬದುಕು ಸವೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು .ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಎಲ್ಲ ಸರ್ಕಾರಿ ನೌಕರರಿಗೆ ಆಗುವಂತೆ ಸಕಾಲದಲ್ಲಿ ವೇತನ ಪಾವತಿಸಬೇಕು ಮತ್ತೊಮ್ಮೆ ಉಪನ್ಯಾಸಕರು ಆತ್ಮಹತ್ಯೆಯಂತಹ ಘಟನೆಗಳು ಮರುಕಳಿಸಬಾರದು .ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ತರಗತಿಗಳಲ್ಲಿ ಪಾಠ ಪ್ರವಚನಗಳು ನಡೆಸುವಂತೆ ನೋಡಿಕೊಳ್ಳಬೇಕು ಎಂದು ನಗರ NSUI ಆಗ್ರಹಿಸುತ್ತಿದ್ದ.
ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದಿದ್ದಲ್ಲಿ NSUIವತಿಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸುತ್ತಿದ್ದೇವೆ ಈ ಸಂದರ್ಭದಲ್ಲಿ NSUIನ ನಗರ ಅಧ್ಯಕ್ಷ ವಿಜಯ್ ,ಜಿಲ್ಲಾ ಕಾರ್ಯಾಧ್ಯಕ್ಷ ರವಿ ಕಾಟಿಕೆರೆ ,ಚಂದ್ರೋಜಿ ರಾವ್, ರವಿ, ಕಿರಣ್, ಸಂಜು,ಸುಹಾಸ್, ಅಭಿ,ದೀಕ್ಷಿತ್ , ಸುಶ್ಮಿತಾ ಯಶೋದಾ ಸಾಕಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು