ಪಂಜಾಬ್ ರಾಜ್ಯದಲ್ಲಿ ಪ್ರಧಾನಮಂತ್ರಿಗಳಿಗೆ ಸೂಕ್ತ ಭದ್ರತೆ ಕೊಡದೆ, ಭದ್ರತೆಯ ನಿಯಮಗಳನ್ನು ಗಾಳಿಗೆ ತೂರಿ ದೇಶದ ಪ್ರಧಾನಿ ಒಬ್ಬರನ್ನು ಹಲವು ನಿಮಿಷಗಳ ಕಾಲ ನಡುರಸ್ತೆಯಲ್ಲಿ ನಿಲ್ಲುವಂತೆ ಮಾಡಿರುವ ಪಂಜಾಬ್‌ ಸರ್ಕಾರದ ಈ ನಡೆ ಖಂಡನೀಯ…

ಓರ್ವ ದೇಶದ ಪ್ರಧಾನಮಂತ್ರಿಯ ಕಾರ್ಯಕ್ರಮವನ್ನು ಸರಿಯಾಗಿ ನಡೆಸಲಾಗದ ಒಂದು ರಾಜ್ಯ ಸರ್ಕಾರ ಜನಸಾಮಾನ್ಯರ ಭದ್ರತೆಯನ್ನು ಹೇಗೆ ಮಾಡಬಹುದು. ಶತ್ರು ರಾಷ್ಟ್ರ ಪಾಕಿಸ್ತಾನದ ಗಡಿಯಲ್ಲಿ ಇರುವ ರಾಜ್ಯವಾದ ಪಂಜಾಬ್ ‌ನಲ್ಲಿ ಇಂತಹ ಅಪಚಾರ ಎಸಗಿರುವುದು ದೇಶದ ಭದ್ರತಾ ವ್ಯವಸ್ಥೆಗೆ ಸವಾಲೆಸೆದಂತಿದೆ…

ರಾಜಕೀಯ ಬಿನ್ನಾಭಿಪ್ರಾಯ ಏನೇ ಇರಬಹುದು ಒಬ್ಬ ದೇಶದ ಪ್ರಧಾನಿಗೆ ರಕ್ಷಣೆ ಒದಗಿಸಬೇಕಾದದ್ದು ಪಂಜಾಬ್ ಸರಕಾರದ ಕರ್ತವ್ಯ. ಪಂಜಾಬ್ ಸರಕಾರದ ಉದ್ದೇಶ ಏನಾಗಿತ್ತು ?? ರೈತರ ವೇಷದಲ್ಲಿದ್ದ ಯಾರನ್ನೋ ಚೂ ಬಿಟ್ಟು ರಸ್ತೆ ತಡೆ ನಡೆಸಿ ಪ್ರಧಾನಿಯನ್ನು 20 ನಿಮಿಷ ರಸ್ತೆಯಲ್ಲಿ ನಿಲ್ಲುವಂತೆ ಮಾಡಿ ವಾಪಾಸ್ ಹೋಗುವ ಹಾಗೆ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆಯುವ ಉದ್ದೇಶದಿಂದಲೇ ??

ಇದು ಕೇವಲ ರಸ್ತೆ ತಡೆಯೋ ಅಥವಾ ರಸ್ತೆ ತಡೆಯ ನೆಪದಲ್ಲಿ ಪ್ರಧಾನಿಯವರ ಹತ್ಯೆಗೆ ಸಂಚೋ… ಎಂಬ ಅನುಮಾನ ಕಾಡುತ್ತಿದೆ ಏಕೆಂದರೆ,

ಪ್ರಧಾನಿಯವರನ್ನು ಸ್ವಾಗತಿಸಲು ಪಂಜಾಬ್‌ ಮುಖ್ಯಮಂತ್ರಿ ಚನ್ನಿ ವಿಮಾನ ನಿಲ್ದಾಣಕ್ಕೆ ಹೋಗಿರಲಿಲ್ಲ.
ಸಿಎಂ ಮತ್ತು ಡಿಜಿಪಿ ಫೋನ್‌ ಕರೆಗಳನ್ನು ಸ್ವೀಕರಿಸಲಿಲ್ಲ.
ಘಟನೆ ನೆಡೆದ ಸ್ಥಳ ಪಾಕಿಸ್ತಾನ ಗಡಿಯಿಂದ ಫಿರೋಜ್‌ಪುರ ತೀರಾ ಸನಿಹದಲ್ಲಿದೆ.

ಅಲ್ಲದೆ ಪ್ರತಿಭಟನಾಕಾರರು ಫ್ಲೈಓವರ್ ಮೇಲೆ ಪ್ರಧಾನಿ ಬೆಂಗಾವಲು ಪಡೆಯನ್ನು ತಡೆದರು. ಅದಕ್ಕೂ ಮುನ್ನ ಪ್ರತಿಭಟನಾಕಾರರು
ಪ್ರಧಾನಿಯವರ ಕಾರಿನ 2-3 ಮೀಟರ್‌ ಅಂತರದಲ್ಲಿ ಸುಮಾರು 500 ಮೀಟರ್‌ಗಳಷ್ಟು ಓಡಿದರು. ಇದು ಕಾಂಗ್ರೆಸ್ ಮತ್ತು ಪಂಜಾಬ್ ಸಿಎಂ ಚನ್ನಿ ಮಾರ್ಗದರ್ಶನದ ಅಡಿಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಭದ್ರತಾ ಉಲ್ಲಂಘನೆಯಾಗಿದೆ. ಹಾಗೂ
ಘಟನೆಯ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್‌ ನಾಯಕರು ಸಂಭ್ರಮಿಸಿ ಟ್ವೀಟ್‌ ಮಾಡಿದ್ದಾರೆ…

ಇವೆಲ್ಲವನ್ನು ಗಮನಿಸಿದರೆ ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರ ಪಾಕಿಸ್ಥಾನದಿಂದ ಸುಫಾರಿ ಪಡೆದಿತ್ತೇ, ಎನ್ನುವ ಶಂಕೆ ನಮ್ಮಲ್ಲಿ ಮೂಡುತ್ತಿದೆ….

ಮೋದಿಯನ್ನು ರಾಜಕೀಯದಲ್ಲಿ ಎದುರಿಸಲಾಗದವರು ಇಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಂದು ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದಹಾಗೆ “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನಕ್ಕಿನ್ನ ಅಧಿಕಾರ ಇಲ್ಲದಿರುವಾಗಲೇ ಹೆಚ್ಚು ಅಪಾಯಕಾರಿ” ಅನ್ನೋ ಮಾತು ಇಂದು ಅಕ್ಷರಶಃ ಸತ್ಯವಾಗಿದೆ.
ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪಂಜಾಬ್ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸುತ್ತೇನೆ….

ಎಸ್ ದತ್ತಾತ್ರಿ…