ಶಿವಮೊಗ್ಗ: ಪಂಜಾಬ್ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಜ. 5 ರಂದು ಪ್ರಧಾನಿ ಮೋದಿ ಪಂಜಾಬ್ ನ ಭಟಿಂಡಾದಲ್ಲಿ 46 ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶದಿಂದ ತೆರಳಬೇಕಿರುವ ಮಾರ್ಗಮಧ್ಯೆ ಯಾವುದೇ ರೀತಿಯ ಭದ್ರತೆ ಇರದ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡದೇ ಪ್ರಧಾನಿ ಆ ಮಾರ್ಗದಿಂದ ದೆಹಲಿಗೆ ಹಿಂದಿರುಗಬೇಕಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರ ಪ್ರಧಾನಿಯವರ ಹತ್ಯೆ ಮಾಡುವ ಉದ್ದೇಶಪೂರ್ವಕವಾದ ಸಂಚು ಎಂದು ಪರಿಗಣಿಸಿ ಕೂಡಲೇ ಪಂಜಾಬ್ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ವಿಚಾರ ಮಂಚ್ ನ ರಾಜ್ಯಾಧ್ಯಕ್ಷ ಬಳ್ಳೆಕೆರೆ ಸಂತೋಷ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಕೆ. ದಿವಾಕರಶೆಟ್ಟಿ, ರಾಜೇಶ್ ಕಾಮತ್, ವಿಜಯಕುಮಾರ್ ಜಿ.ಟಿ., ರಾಮಲಿಂಗಪ್ಪ ಹೆಚ್., ಆದರ್ಶ್ ಬಿ.ಎಸ್., ಧೃವಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…