ರಿಪ್ಪನ್ ಪೇಟೆ ನ್ಯೂಸ್…

ರಿಪ್ಪನ್ ಪೇಟೆ : ಪಟ್ಟಣದಲ್ಲಿ 4.85 ಲಕ್ಷ ರೂಪಾಯಿ ವೆಚ್ಚದ ಬಾಲಕರ ವಸತಿ ನಿಲಯದ ಶಂಕುಸ್ಥಾಪನೆ ಹಾಗೂ 1.65 ಲಕ್ಷ ವೆಚ್ಚದ ಸರ್ಕಾರಿ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆ ಯನ್ನು ಉನ್ನತಮಟ್ಟದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸದುಪಯೋಗ ಪಡೆದು ಉನ್ನತ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಶಾಲಾ-ಕಾಲೇಜುಗಳ ಕೊಠಡಿಗಳು ಹೆಚ್ಚಾಗಬೇಕಾಗುತ್ತದೆ.ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಯತ್ತ ಅವಿರತ‌ ಪ್ರಯತ್ನ ಮಾಡುತ್ತೇನೆ ಎಂದರು.

ಕರೋನ ಮಹಾಮಾರಿ ಬದುಕನ್ನು ಕಸಿದುಕೊಂಡಿದೆ ವಿದ್ಯಾರ್ಥಿಗಳ ಓದಿನಲ್ಲಿ ತುಂಬಾ ತೊಂದರೆಯಾಗಿ ಆಶಾದಾಯಕ ದಿನಗಳು ಕಳೆದುಹೋಗಿವೆ ಕರೋನಾ ಮೂರನೇ ಅಲೆಯನ್ನು ಎದುರಿಸೋಣ ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ.ವಿದ್ಯಾರ್ಥಿಗಳು ಆತ್ಮಸ್ಥರ್ಯ ಹೆಚ್ಚಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು.ಸಂಕುಚಿತ ಭಾವನೆ ಬಿಟ್ಟು ಹೊರಬರಬೇಕು.ಶಾಲೆಗಳು ಬದುಕು ಕಲಿಸುವ ವಿದ್ಯಾ ದೇಗುಲವಾಗಬೇಕು,ಹುಟ್ಟುವಾಗ ಎಲ್ಲರೂ ಒಂದೇ ಕೀಳರಿಮೆ ಇಲ್ಲದೆ ಎಲ್ಲಾ ಮಕ್ಕಳುಗಳನ್ನು ಶೈಕ್ಷಣಿಕ ಪ್ರಗತಿಗೆ ಪ್ರೇರೇಪಿಸಬೇಕು, ಬಡವ ಎಂಬ ಕೀಳರಿಮೆ ಹೋಗಲಾಡಿಸಬೇಕು ,ಯಾರು ಸಹ ದಡ್ಡರಲ್ಲ ಎಂದು ಸಲಹೆ ನೀಡಿದರು.

ಈ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೇ ಮಂಜುಳಾ ಕೆ..ರಾವ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಡಿ. ರೇವಣ್ಣ ಕರ್, ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್. ಟಿ. ಆನಂದ್ ಮೆಣಸೇ ಎಂ.ಬಿ.ಮಂಜುನಾಥ್, ಆರ್. ಟಿ .ಗೋಪಾಲ್, ಗಣಪತಿ ಬೆಳಗೋಡು, ಗ್ರಾ.ಪಂ.ಸದಸ್ಯರಾದ ಪಿ. ರಮೇಶ್ ,ಆಸಿಫ್ ಭಾಷಾ ಸಾಬ್ ,ಪಿಡಿಓ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗ್ರಾ. ಪಂ. ಸದಸ್ಯರುಗಳು ಹಾಜರಿದ್ದರು.

ವರದಿ : ರಫ಼ಿ ರಿಪ್ಪನ್ ಪೇಟೆ…