1.ಸರ್ಕಾರದ ಸೂಚನೆಯಂತೆ ಕೊರೊನಾ 3 ಅಲೆ ತಡೆಯಲು ಶಿವಮೊಗ್ಗ ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಗಳು.

2.ಟೆಸ್ಟಿಂಗ್ ಕೆಪಾಸಿಟಿಯನ್ನು ಜಾಸ್ತಿ ಮಾಡಿರುವ ಜಿಲ್ಲಾಡಳಿತ.

3.ಪಾಸಿಟಿವಿಟಿ ರೇಟ್ ಸಮತೋಲನದಲ್ಲಿ ಇದೆ.
ಆದರೆ ದಿನದಿಂದ ದಿನಕ್ಕೆ ಕರೊನಾ ಪಾಸಿಟಿವ್ ಸಂಖ್ಯೆ ಉಲ್ಬಣಿಸುತ್ತಿದೆ.

4.ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ.ವೀಕೆಂಡ್ ಕರ್ಫ್ಯೂನಲ್ಲಿ ಅನವಶ್ಯಕ ಓಡಾಟಕ್ಕೆ ಆಸ್ಪದವಿಲ್ಲ.

5.ತಾಲ್ಲೂಕು ಮಟ್ಟದಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

6.ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ. ಕೈಗಾರಿಕೆಗಳಿಗೆ ವಿಶೇಷ ಸೂಚನೆ ನೀಡಲಾಗಿದೆ.

7.ಹೊರ ರಾಜ್ಯದಿಂದ ಬಂದವರ ಕರೊನ ಟೆಸ್ಟ್ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ.

8.ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಭದ್ರಾವತಿ ಹಾಗೂ ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹೊರರಾಜ್ಯದಿಂದ ಬಂದವರಿಗೆ  ಆರ್ ಟಿಪಿಸಿಆರ್ ರಾ೦ಡಮ್ ಚೆಕ್ ಮಾಡಲಾಗುತ್ತದೆ.

ವರದಿ ಮಂಜುನಾಥ್ ಶೆಟ್ಟಿ…