ಶಿವಮೊಗ್ಗ ನಗರದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲು ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು, ಸದರಿ ತಂಡವು ದಿನಾಂಕಃ- 07-01-2022 ರಂದು ಗಸ್ತಿನಲ್ಲಿದ್ದಾಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೇಕಲ್ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿತರಾದ
1)ದಾದಾಫೀರ್@ಬಚ್ಚಾ, 24 ವರ್ಷ, ಸೂಳೇಬೈಲು, ಶಿವಮೊಗ್ಗ 2)ಮೊಹಮ್ಮದ್ ಹುಸ್ಮಾನ್ @ ರೊಡ್ಡ, 24 ವರ್ಷ, ಸೂಳೇಬೈಲು, ಶಿವಮೊಗ್ಗ 3)ಸಲೀಂ, 25 ವರ್ಷ, ಸೂಳೇಬೈಲು, ಶಿವಮೊಗ್ಗ 4)ಸಮೀರ್ ಎ, 22 ವರ್ಷ, ಸೂಳೇಬೈಲು, ಶಿವಮೊಗ್ಗ 5)ಮೆಹಬೂಬ್ ಪಾಷಾ, 25 ವರ್ಷ, ಸೂಳೇಬೈಲು, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ, ಆರೋಪಿತರ ವಶದಿಂದ ಅಂದಾಜು ಮೌಲ್ಯ 45,000/- ರೂಗಳ ಒಟ್ಟು 1 ಕೆಜಿ 120 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಹಾಗೂ 04 ಮಚ್ಚುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 09/2022 ಕಲಂ 20(b) NDPS ಕಾಯ್ದೆ ಮತ್ತು 25(1) (b) Arms Act ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ.