ಶಿವಮೊಗ್ಗದ ಸಿದ್ಲಿಪುರದಲ್ಲಿ ಗ್ರಾಮದಲ್ಲಿ ನಿನ್ನೆ ದಿನ ಬೆಳಿಗ್ಗೆ 9 ಗಂಟೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಶಬರಿಮಲೈ ಯಾತ್ರೆ ಕೈಗೊಂಡಿರುವ ಸಿದ್ಲಿಪುರ ಗ್ರಾಮದ ಮತ್ತು ಸುತ್ತಮುತ್ತಲ ಗ್ರಾಮಗಳ ಯಾತ್ರಿಗಳಿಗೆ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಸ್ಯಾನಿಟೈಜರಗಳು ಸೇರಿದಂತೆ ಆರೋಗ್ಯದ ಕಿಟ್ ಗಳನ್ನು ಟ್ರಸ್ಟ್ ನಿರ್ದೇಶಕರಾದ ಶ್ರೀ ಕೆ ಸಿ ಬಸವರಾಜ್ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಶೀಲಾಬಾಯಿ, ಯಾತ್ರೆ ಕೈಗೊಂಡ ಗುಂಪುಗಳ ಪ್ರತಿನಿಧಿಗಳಾದ ಹನುಮಂತ ಭೋವಿ, ಪರಮೇಶ್ವರಪ್ಪ, ಹರೀಶ ಮುಂತಾದವರು ಪಾಲ್ಗೊಂಡಿದ್ದರು.