08/01/2022ರ ಶನಿವಾರ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆ ಖಾಸಗಿ ಬಸ್ ನಿಲ್ದಾಣ, ವಿಕೇಂಡ್ ಕರ್ಪೂನಿಂದ ಬೀದಿ ಬದಿ ವ್ಯಾಪಾರಸ್ಥರ ವ್ಯಾಪಾರಗಳಿಲ್ಲದೆ ಕಂಗೆಟ್ಟು ಕುಳಿತ ದೃಶ್ಯ ಸಾಮಾನ್ಯವಾಗಿತ್ತು. ಸರ್ಕಾರದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಮಾದ್ಯಮದ ಮೂಲಕ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಮನವಿ ಮಾಡಿಕೋಳ್ಳಲಾಗಿತ್ತು. ಸರ್ಕಾರದ ನಿಯಮಗಳು ಪಾಲನೆ ಮಾಡಲು ನಾವುಗಳು ಸಿದ್ದ.
ಬಹಳಷ್ಟು ಬೀದಿ ಬದಿಯ ವ್ಯಾಪಾರಿಗಳು ಇಂದೆ ದುಡಿದು ತಿನ್ನುವರು ಅವರಿಗೆ ಓದು ಬರಹ ಬರದು ನಿಮ್ಮ ಆದೇಶವನ್ನು ಪಾಲನೆ ಮಾಡಲು ನಾವು ಸಿದ್ಧ. ಆದರೆ ವಿಕೇಂಡ್ ಕರ್ಪೂ ಬೇಡವೆಂದು, ರಾತ್ರಿ ಹತ್ತರ ವರೆಗೂ ಅವಕಾಶ ನೀಡಿ ಎಂದು ಆದರೆ ಸರ್ಕಾರ ಸರ್ಕಾರಿ ಕೆಲಸಕ್ಕೆ ಹೋಗುವರು, ಫ್ಯಾಕ್ಟರಿ ಕೆಲಸಕ್ಕೆ ಹೋಗುವರು, ಔಷಧಿ ಅಂಗಡಿ, ದಿನಸಿ ಅಂಗಡಿ, ಮೀನು, ಮಟನ್ ಅಂಗಡಿ ತೆರೆದಿರುತ್ತದೆ ಹಾಗೆ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ ಎಂಬ ಮಾಧ್ಯಮ ಮೂಲಕ ತಿಳಿದ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ಮಾಡಲು ಹೋದರೆ ಪೊಲೀಸ್ ಇಲಾಖೆಯು ಎಲ್ಲರಿಗೂ ಬಂದ್ ಮಾಡಿಸಿವೆ.
ಬೆಳಗ್ಗೆ ತಿಂಡಿ ಗಾಡಿಯ ವ್ಯಾಪಾರಿ ಪಾರ್ಸಲ್ ನೀಡಲು ಅವಕಾಶವಿದೆ ಎಂದು ವಿಧ ವಿಧವಾದ ತಿಂಡಿಗಳ ಮಾಡಿ ಪಾರ್ಸಲ್ ನೀಡಲು ಅಂಗಡಿ ತೆರೆದರೆ ಯಾವ ಗ್ರಾಹಕರು ಇಲ್ಲದೆ ಮಾಡಿದ ಅಷ್ಟು ತಿಂಡಿಗಳ ಚಲ್ಲಬೇಕಾಗಿದೆ. ಹಣ್ಣು ಹಂಪಲು, ತರಕಾರಿ, ಸೊಪ್ಪು, ಮಾರುವ ವ್ಯಾಪಾರಿಗಳು ನಮ್ಮ ಹಣ್ಣುಗಳು ಹಾಳಾಗುತ್ತಿವೆ ಹಾಗೆ ಕೊಳೆತ ಹೋಗುತ್ತದೆ, ಯಾವ ಗಿರಾಕಿಯು ಇಲ್ಲ ಎಂದು ಕಣ್ಣಿರು ಹಾಕುತ್ತಿರುವರು. ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿರುವರು, ಹೂವುಗಳ ಮಾರುವ ಮಹಿಳೆಯರು ಬೆಳಗ್ಗೆಯಿಂದ ಹೂವನ್ನು ತಂದು ಯಾವ ಗ್ರಾಹಕರು ಇಲ್ಲದೆ ಹೂಗಳು ಬಾಡುತ್ತಿದೆ, ಚಲ್ಲಬೇಕಾಗಿದೆ ಎನ್ನುತ್ತಿರುವರು.
ನಿನ್ನೆಯ ದಿನ ರಾಜ್ಯ ಸರ್ಕಾರ ಬೀದಿ ಬದಿ ಸಂಘಟನೆಯ ರಾಜ್ಯಾಧ್ಯಕ್ಷರಿಗೆ ವಿಕೇಂಡ್ ಕರ್ಪೂ ಬೀದಿ ಬದಿ ವ್ಯಾಪಾರಿಗಳಿಗೆ ಅನ್ವಸುವುದಿಲ್ಲ ಎಂಬ ಮಾಧ್ಯಮದ ಸಂದೇಶದಂತೆ ಎಲ್ಲರೂ ಸರ್ಕಾರದ ನಿಯಮದಂತೆ ಬೀದಿ ಬದಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳು ತೆರೆಯಲು ಹೇಳಿರುತ್ತಾರೆ, ಆದರೆ ಯಾವ ಗ್ರಾಹಕರು ಇಲ್ಲದೆ ಅಷ್ಟು ಬಂಡವಾಳ ಹಾಕಿ ವ್ಯಾಪಾರ ಇಲ್ಲದೆ ನಷ್ಟ ಸಂಭವಿಸಿದೆ, ಅದರ ಪರಿಹಾರವನ್ನು ಸರ್ಕಾರ ಸಹಾಯ ಧನದ ಮೂಲಕ ಬರಿಸಬೇಕು ಹಾಗೂ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಸ್ಪಷ್ಟವಾದ ಸಂದೇಶ, ಆದೇಶವಾಗಲಿ ನೀಡಬೇಕು ಸಾರ್ವಜನಿಕ ನಾಗರಿಕರಿಗೆ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಬೀದಿ ಬದಿಯ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.