ಶಿವಮೊಗ್ಗ: ಛಾಯಾಚಿತ್ರ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ತಿಳಿಸಿದರೆ ಅವುಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ಅವರು ಇಂದು ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಶಿವಮೊಗ್ಗ ತಾಲೂಕು ವಿಡಿಯೋ ಮತ್ತು ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಎಸ್.ವಿ.ಪಿ.ಎ. ಪುನೀತ್ ರಾಜಕುಮಾರ್ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸದಾ ಕೆಲಸದಲ್ಲಿ ಮುಳುಗಿರುವ ಫೋಟೋ ಗ್ರಾಫರ್ಸ್ ಗಳು ತಾವು ಸಾಮಾಜಿಕ ಕ್ಷೇತ್ರದಲ್ಲಿಯೂ ಇದ್ದೇವೆ ಎಂಬುದನ್ನು ಪ್ರತಿಬಿಂಬಿಸುವಂತೆ ಪುನೀತ್ ರಾಜಕುಮಾರ್ ಕ್ರಿಕೆಟ್ ಕಪ್ ಪಂದ್ಯಾವಳಿ ಆಯೋಜಿಸಿರುವುದು ಬಹಳ ಸಂತೋಷದ ವಿಷಯವಾಗಿದೆ.
ಪುನೀತ್ ರಾಜಕುಮಾರ್ ಕೇವಲ ರಾಜ್ಯ, ರಾಷ್ಟ್ರಮಟ್ಟದ ನಟನಲ್ಲ. ಆತನೊಬ್ಬ ಅಂತರಾಷ್ಟ್ರೀಯ ನಟ. ಸಂವೇದನಾಶೀಲ, ಅತ್ಯಂತ ಬಗುಮುಖದ ಆತನನ್ನು ಕಳೆದುಕೊಂಡಾಗ ಇಡೀ ರಾಷ್ಟ್ರವೇ ದುಃಖ ಸಾಗರದಲ್ಲಿ ಮುಳುಗಿತ್ತು. ಫೋಟೋ ಗ್ರಾಫರ್ಸ್ ಗಳು ಇಂತಹ ಒಳ್ಳೆಯ ನಟನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಹೆಚ್.ವಿ. ಮೋಹನ್ ಕುಮಾರ್, ಛಾಯಾಗ್ರಾಹಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ಇ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಭವಾನಿ, ಸತೀಶ್, ಪ್ರಸಾದ್, ಲಿಂಗರಾಜ್ ಮೊದಲಾದವರಿದ್ದರು