13/01/2022 ಗುರುವಾರ ಶಿವಮೊಗ್ಗ ನಗರದ ಅಶೋಕ ನಗರ ಜನತಾ ಕಾಲೋನಿ ಶ್ರೀ ರೇಣುಕಾ ದೇವಿ ನಿಲಯ, ನಿವಾಸದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಶುಭಾಶಯ ಕೋರಲಾಯಿತು.
ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಜಿಲ್ಲಾಧ್ಯಕ್ಷರ ಸ್ವಗೃಹದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನದ ಹಾರ್ದಿಕ ಶುಭಾಷಯಗಳು ಕೋರಿದರು.ಈ ಸಂದರ್ಭದಲ್ಲಿ ಮಣಿ ಗೌಂಡರ್, ರಂಗಮ್ಮ ಹನುಮಂತಪ್ಪ, ನಾಗರಾಜ್, ಬಸವರಾಜು, ಪರಶುರಾಮ, ರವಿ ಹಾಗೂ ಇತರರೂ ಉಪಸ್ಥಿತರಿದ್ದರು.