ಶಿವಮೊಗ್ಗ ಜಿಲ್ಲೆಯ ಯುವ ಸಂಸದರು ಜನಪ್ರಿಯ ನೇತಾರರಾದ ಜನಾನುರಾಗಿ ಸನ್ಮಾನ್ಯ ಶ್ರೀ ಬಿವೈ ರಾಘವೇಂದ್ರ ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಬೆಂಗಳೂರು, ಇಲ್ಲಿನ ರಾಜ್ಯಾಧ್ಯಕ್ಷರಾದ ವಿ. ಪ್ರಭಾಕರ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗದ ಪ್ರಧಾನ ಕಾರ್ಯದರ್ಶಿಗಳಾದ ಐ ಪಿ ಶಾಂತರಾಜ್

ಇವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಫಾರ್ಮಸಿ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಕೋವಿಡ್ ಸಾಂಕ್ರಾಮಿಕ ರೋಗ ಹರುಡುತ್ತಿರುವ ಸಂಕಷ್ಟದ ಸಮಯದಲ್ಲಿ ಅತ್ಯಂತ ಜವಾಬ್ದಾರಿಯಿಂದ ತಮ್ಮ ಮತ್ತು ತಮ್ಮ ಕುಟುಂಬದ ಹಿರಿಯರು ಮತ್ತು ಮಕ್ಕಳ ಆರೋಗ್ಯವನ್ನು ಪಣಕ್ಕಿಟ್ಟು ದುಡಿದು ಸೋಂಕಿತ ರೋಗಿಗಳ ಶುಶ್ರೂಷೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಆರೋಗ್ಯ ಇಲಾಖೆಗೆ ಕೀರ್ತಿ ತಂದಿರುತ್ತಾರೆ.

ಕೋವಿಡ್ ಲಸಿಕಾ ಅಭಿಯಾನ ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ಇಡೀ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನ ಲಸಿಕೆ ಪಡೆಯುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಅತ್ಯಂತ ಗಣನೀಯವಾಗಿದೆ ಶೀತಲ ಸರಪಣಿಯಲ್ಲಿ ಲಸಿಕೆಗಳ ಸಂಗ್ರಹಣೆ ಮತ್ತು ವಿತರಣೆಯಂತಹ ಜವಾಬ್ದಾರಿಯುತ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ ಇಂತಹ ಕೊವಿಡ್ ಫಾರ್ಮಸಿ ಅಧಿಕಾರಿಗಳ ಸೇವೆಯನ್ನು ಕಳೆದೆರಡು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನವೀಕರಿಸುತಿದ್ದು , ಇವರು ಸರ್ಕಾರದ ನೇಮಕಾತಿಯ ನಿಯಮಾವಳಿಯಂತೆ ಖಾಲಿ ಹುದ್ದೆಗಳ ಎದುರು ಹುದ್ದೆಯಲ್ಲಿ ಮತ್ತು ಮೀಸಲಾತಿ ಹಾಗೂ ಶೇಕಡವಾರು ಪ್ರತಿಶತ ದಂತೆ ಆಯ್ಕೆಯಾಗಿರುತ್ತಾರೆ ಇಂತಹ ಫಾರ್ಮಸಿ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ ಅವರಿಗೆ ಸರ್ಕಾರದಿಂದ ಸೇವಾ ಭದ್ರತೆಯನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು.

ಪೂರಕವಾಗಿ ಸ್ಪಂದಿಸಿದ ಯುವ ಸಂಸದರು ಸರ್ಕಾರದ ಮಟ್ಟದಲ್ಲಿ ಫಾರ್ಮಸಿ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸೇವಾ ಭದ್ರತೆ ಒದಗಿಸುವ ಕೊಡುವ ಬಗ್ಗೆ ಭರವಸೆ ನೀಡಿದರು.

ವರದಿ ಮಂಜುನಾಥ್ ಶೆಟ್ಟಿ…