17/01/2022 ಸೋಮವಾರ ಬೆಳಗ್ಗೆ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಡಿವೈಎಸ್ಪಿ ಕಛೇರಿ ಆವರಣದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಫುಟ್ ಪಾತ್ ಆಕ್ರಮಣ ಪಾದಚಾರಿ ಓಡಾಡಲು ದಾರಿಯಿಲ್ಲ, ಎಲ್ಲೆಂದರಲ್ಲಿ ತಳ್ಳುಗಾಡಿ ನಿಲ್ಲಿಸುವುದು, ಫುಟ್ ಪಾತ್ ಗೆ ಸಾರ್ವಜನಿಕರು ಓಡಾಡದಂತೆ ತಾರಪಾಲ್, ಕಟ್ಟುವುದು, ರಸ್ತೆಗೆ ಚೇರ್ ಇಡುವುದು, ತಿಂಡಿ ತಿನಿಸು ಗಾಡಿಯವರು ತಮ್ಮ ಜಾಗ ಸ್ವಚ್ಛತೆ ಮಾಡದೆ ಎಲ್ಲಾ ಎಂಜಿಲು ದಾರಿಯಲ್ಲಿ ಸುರಿದು ಹೋಗುವುದರಿಂದ, ಅದನ್ನು ತಿನ್ನಲು ಹಂದಿ, ನಾಯಿ, ಬಂದು ಕಿತ್ತಾಡಿ ರಸ್ತೆಗೆ ಬಂದು ಸಂಚಾರಿ ವಾಹನಕ್ಕೆ ಅಡ್ಡ ಬಂದು ಅನಾವುತಗಳು ಆಗುವುದು ಸಾಮಾನ್ಯವಾಗಿದೆ, ಫುಟ್ ಪಾತ್ ಮಾಡಿರುವುದು ಜನರು ಸರಾಗವಾಗಿ ಓಡಾಡಲು ಇರುವುದೇ ಹೊರತು ನಿಮ್ಮ ಗೂಡು ಅಂಗಡಿ, ತಾರಪಾಲು ಕಟ್ಟಲು ಅಂಗಡಿಯ ನಾಮಫಲಕ ಇಡಲು ಅಲ್ಲಾ ಎಂದರು.

ಸಾರ್ವಜನಿಕ ದೂರಿನ ಅನ್ವಯ ಪುಟ್ ಪಾತ್ ತೆರವು ಕಾರ್ಯಾಚರಣೆ ಒಂದು ವಾರದಿಂದ ಆರಂಭ ಮಾಡಿರುವೆವೂ, ಈ ಮೂರು ತಿಂಗಳ ಹಿಂದೆ ಎಲ್ಲಾ ಫುಟ್ ಪಾತ್ ಆಕ್ರಮಿಸಿದವರ ತೆರವು ಮಾಡಲಾಯಿತು, ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ರವರು, ಪಾಲಿಕೆಯಿಂದ ಗುರುತಿನ ಚೀಟಿ ಪಡೆದ ಫಲಾನುಭವಿಗಳಿಗೆ ಅವರ ವ್ಯಾಪಾರದ ಸ್ಥಳದ ಅಳತೆ ಮೀರದಂತೆ ವ್ಯಾಪಾರ ಮಾಡುವರು ಮತ್ತೋಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಇಂದು ಮೆಗ್ಗಾನ್ ಆಸ್ಪತ್ರೆಯ ಆವರಣದ ಒಳಗೆ ತಿಂಡಿ ಗಾಡಿಯವರಿಂದ ಕಸದ ರಾಶಿ ಹಾಕಲಾಗಿದೆ, ಅವರ ಸುತ್ತಲೂ ಪ್ರದೇಶ ಸ್ವಚ್ಚ ಮಾಡರು, ತಿಂಡಿ ತಿನ್ನಲು ಬಂದ ಗ್ರಾಹಕರು ರಸ್ತೆಯಲ್ಲಿ ವಾಹನ ನಿಲ್ಲಿಸುವರು, ಅಶೋಕ ವೃತ್ತದಿಂದ ಆಲ್ಕೋಳ ಸರ್ಕಲ್ ಹೊರಗೆ ನಾನ್ ವೆಂಡಿಂಗ್ ಝೂನ್ ಆಗಿದೆ, ಇಲ್ಲಿ ಯಾರು ವ್ಯಾಪಾರ ಮಾಡಬಾರದು ಹಾಗೂ ನಗರದಲ್ಲಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ನೀಡುವಂತೆ ನಾಮಫಲಕಗಳು, ಇತರೆ ಸಾಮಾಗ್ರಿಗಳು ಫುಟ್ ಪಾತ್ ಆಕ್ರಮಿಸಿಕೊಂಡ ಯಾವ ವ್ಯಕ್ತಿಯಾದರು ಸರಿಯೇ ಅ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆಯ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿ ಪಡೆದ ಫಲಾನುಭವಿಗಳು ಪಿಎಂ ಸ್ವ ನಿಧಿ ಯೋಜನೆಯಡಿ ಸಾಲ ಪಡೆದಿರುವರು, ಈಗಾಗಲೇ ವಿಕೇಂಡ್ ಕರ್ಪೂ ನಿಂದ ವ್ಯಾಪಾರ ವ್ಯಹಿವಾಟುಗಳು ಇಲ್ಲ, ಎರಡು ಕಂತು ಕಟ್ಟದಿದ್ದರೆ ಸಿಬಿಲ್ ಸ್ಕೊರ್ ಇಲ್ಲ ಎಂದು ಮುಂದಿನ ದಿನಗಳಲ್ಲಿ ಬ್ಯಾಂಕ್ ಸಾಲ ನೀಡುವುದಿಲ್ಲ, ಹಾಗಾಗಿ ಅವರಿಗೆ ಪಾಲಿಕೆ ಸ್ಥಳ ನೀಡಿ, ಸ್ಥಳಾಂತರಿಸುವರೆಗೂ ಅವರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು ಮನವಿ ಮಾಡಿಕೊಂಡರು.

ಮೆಗ್ಗಾನ್ ಆಸ್ಪತ್ರೆಯಿಂದ ಲಕ್ಷ್ಮೀ ಮೆಡಿಕಲ್ಸ್ ಹೊರಗೆ ಫುಟ್ ಪಾತ್ ನಲ್ಲಿ ಅಡ್ಡ, ದಿಡ್ಡಿ, ಎಲ್ಲೆಂದರಲ್ಲಿ ನಿಲ್ಲಿಸಿದ ಗಾಡಿಯ ತೆರವು ಮಾಡಿ ಗುರುತಿನ ಚೀಟಿ ಪಡೆದ ಫಲಾನುಭವಿಗಳಿಗೆ ಒಂದೇ ಸಾಲಿನಲ್ಲಿ ನಿಲ್ಲಿಸಿ ಅವರಿಗೆ ಪಾಲಿಕೆ ನೀಡಿದ ಅಳತೆ ಮೀರದಂತೆ ಎಚ್ಚರಿಸಿ ಅವರ ಪಟ್ಟಿಯನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಶ್ರೀ ಸಿದನ ಗೌಡ್ರು, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…