ಓದುಗರೇ ನಿಮ್ಮ ಮುಂದೆ ಮತ್ತೊಂದು ಸಮಾಜಮುಖಿ ಪ್ರಶ್ನೆಯೊಂದಿಗೆ , ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಕೆರೆಯೊಂದರಲ್ಲಿ ಆಂಬ್ಯುಲೆನ್ಸ್ ಗಳನ್ನು ತೊಳೆಯುತ್ತಿರುವುದು ಕಂಡುಬಂದಿದೆ. ಬತ್ತಿ ಹೋಗಿರುವ ಕೆರೆಗಳ ಮಧ್ಯೆ ಇನ್ನೂ ನೀರು ಇರುವ ಕೆಲವು ಕೆರೆಗಳು ಮರುಭೂಮಿಯಲ್ಲಿರುವ ಓಯಸಿಸ್. ಈಗಿನ ಕರೋನಾ ಸಮಯದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಗಳ ಕಾರ್ಯ ಶ್ಲಾಘನೀಯ. ನಮ್ಮ ಈ ಅಭಿನಂದನೆಗಳು ವಿವೇಕವುಳ್ಳ ಹಾಗೂ ಮನುಷ್ಯತ್ವವುಳ್ಳ ಆಂಬ್ಯುಲೆನ್ಸ್ ಡ್ರೈವರ್ ಗಳಿಗೆ ಮಾತ್ರ. ಮನುಷ್ಯತ್ವ ಇಲ್ಲದ ಆಂಬ್ಯುಲೆನ್ಸ್ ಡ್ರೈವರ್ ಗಳು ಜಾಸ್ತಿ ಹಣ ಕೇಳಿ ರೋಗಿಗಳನ್ನು ಪೀಡಿಸುವ ಆಗಾಗ ಚರ್ಚೆಯಲ್ಲಿರುತ್ತಾರೆ. ಈಗ ಈ ಅವಿವೇಕಿಗಳ ವಿಚಾರ ಕರೋನಾ ವೈರಸ್ ನಿಂದಾಗಿ ಪೇಷೆಂಟ್ ಹೋದ ವಾಹನವಷ್ಟೇ ಅಲ್ಲ ಪೇಷೆಂಟ್ ಇದ್ದ ಪ್ರದೇಶವನ್ನೇ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಸಾಲುಸಾಲಾಗಿ ಆಂಬ್ಯುಲೆನ್ಸ್ ಅನ್ನು ಕೆರೆ ಹತ್ತಿರ ನಿಲ್ಲಿಸಿ ತೊಳೆಯುತ್ತಿರುವ ಈ ಅವಿವೇಕಿಗಳಿಗೆ ಏನು ಹೇಳಬೇಕೊ ತಿಳಿಯುತ್ತಿಲ್ಲ. ಇವರು ಮಾಡುವ ದುಬಾರಿ ಚಾರ್ಜ್ ನಲ್ಲಿ ವಾಹನ ತೊಳೆಸಲು ಹಣ ಸಾಲುತ್ತಿಲ್ಲ ವೆನೋ ಪಾಪ. ಇವರು ಕಲುಷಿತಗೊಳಿಸುತ್ತಿರುವ ಕೆರೆಯ ಪಾಡೇನು. ಪೇಷೆಂಟ್ ತಲುಪಿಸಿದ ನಂತರ ಆಂಬ್ಯುಲೆನ್ಸ್ ಗಳಿಗೆ ಶುಚಿ ಮಾಡುವ ಮಾರ್ಗಸೂಚಿ ಇಲ್ಲವೇ ?
ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ . ಆದರೂ ಇಂಥ ಅವಿವೇಕಿಗಳು ಎಚ್ಚೆತ್ತುಕೊಳ್ಳದಿದ್ದರೆ . ಕೋವಿಡ ನಿಯಂತ್ರಣ ಕಷ್ಟಸಾಧ್ಯ. ಇವರಿಂದಾಗಿ ಕರೋನಾ ಇನ್ನಷ್ಟು ಹರಡದಿರಲಿ ಎಂದು ಆಶಿಸುತ್ತಾ ಟೀಮ್ ಪ್ರಜಾಶಕ್ತಿ.