ದೇಶದಾದ್ಯಂತ ಸಿಬಿಎಸ್‌ಇ ಶಾಲೆಗಳ ವೀರ್‌ಗಾಥಾ ಸ್ಪರ್ಧೆಯ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಒಬ್ಬರಾಗಿ ಶಿವಮೊಗ್ಗ ಜಿಲ್ಲೆಯ ಜಾವಳ್ಳಿಯ ಜ್ಞಾನದೀಪ ಶಾಲೆಯ ಎಸ್.ಅಮೃತಾ ಆಯ್ಕೆಯಾಗಿರುವುದು ನಮ್ಮ ಶಿವಮೊಗ್ಗಕ್ಕೆ ಅತ್ಯಂತ ಹೆಮ್ಮೆ ಹಾಗೂ ಸಂತಸದ ವಿಷಯ.

ರಕ್ಷಣಾ ಇಲಾಖೆಯು ಪ್ರತಿ ವರ್ಷ ಗ್ಯಾಲೆಂಟಿ ಅವಾರ್ಡ್ ಪ್ರಶಸ್ತಿಯ ಕುರಿತು ತಿಳಿವಳಿಕೆಯನ್ನು ದೇಶದ ಮಕ್ಕಳಿಗೆ ಮೂಡಿಸುವ ಉದ್ದೇಶದಿಂದ ವೀರರ ಸಾಧನೆಗಳನ್ನು ಕುರಿತ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ.

ಅಮೃತ 9-10ನೇ ತರಗತಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ 25 ಮಕ್ಕಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ರಕ್ಷಣಾ ಇಲಾಖೆಯು ನೀಡುವ 10 ಸಾವಿರ ನಗದು ಬಹುಮಾನ ಮತ್ತು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಭಾಗವಹಿಸುವ ಗೌರವವನ್ನು ಪಡೆದುಕೊಂಡಿದ್ದಾರೆ.

ನಗರದ ಶ್ರೀ ಶಿವಕುಮಾರ್ ಹಾಗೂ ಶ್ರೀಮತಿ ವಿಜಯರವರ ಪುತ್ರಿಯಾದ
ಕುಮಾರಿ ಅಮೃತಾಳಿಗೆ ಅವರ ಸ್ವಗೃಹದಲ್ಲಿ ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಛಾದ ವತಿಯಿಂದ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಛಾ ಅಧ್ಯಕ್ಷೆ ಶ್ರೀಮತಿ ಸುರೇಖ ಮುರಳೀಧರ್, ನಗರ ಪಾಲಿಕೆ ಸದಸ್ಯರಾದ ರಾಹುಲ್‌ಬಿದರೆ, ಅನಿತಾ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರೇಣುಕಾ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಸುಮಾ ಭೂಪಾಳಂ, ಸಾಮಾಜಿಕ ಜಾಲತಾಣ ಪ್ರಮುಖರಾದ ಉಷಾ, ಸದಸ್ಯರಾದ ಅನಿಲಾ, ರಾಧಾ ಗುರುದತ್ತ್ ಸುರೇಖ ಪಾಲಾಕ್ಷಪ್ಪ,18 ನೇ ವಾರ್ಡ್ ನ ಅಧ್ಯಕ್ಷರಾದ ಶಿವಕುಮಾರ್ ಹಾಗೂ ಹಿರಿಯ ಕಾರ್ಯಕರ್ತರಾದ ಆನಂದ್ ರವರು, ಅಮೂಲ್ಯ ಪೋಷಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…