20/01/2022 ಗುರುವಾರ ಶಿವಮೊಗ್ಗ ನಗರದ ಛೇಂಬರ್ ಆಫ್ ಕಾಮರ್ಸ್ ಶಾಂತಲಾ ಸ್ಪೆರೋಕ್ಯಾಸ್ಟ ಸಭಾಂಗಣದಲ್ಲಿ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು, ಚಿಗುರುವ ಸಸಿಗೆ ನೀರು ಎರೆಯುವುದರ ಮೂಲಕ ಮಹಾತ್ಮ ಗಾಂಧೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆಯ ಅಧಿಕಾರಿಗಳಾದ ಶ್ರೀ ಸುರೇಶ್ ಹೆಚ್.ಎಂ.ರವರು, ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಬದುಕಲು ದುಡಿಮೆ ಮುಖ್ಯ, ಅಂತಹ ದುಡಿಮೆಗಾಗಿ ವೃತ್ತಿ ತರಬೇತಿ ಅವಶ್ಯಕ ಅಂತವರಿಗೆ ತರಬೇತಿ ನೀಡಿ, ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಕೋಟೆ ಸರ್ಕಲ್ ಇನ್ಸ್ಪೆಕ್ಟರ್ ರಾದ ಶ್ರೀ ಚಂದ್ರಶೇಖರ ರವರು, ನಾವುಗಳು ಯಾವಾಗಲೂ ಮೃದುವಾಗಿ ಇರಲು ಸಾಧ್ಯವಿಲ್ಲ, ನಾವು ಮೃದುವಾದರೆ ಎಲ್ಲಾ ಕಡೆ ಕ್ರೌರ್ಯ ಹೆಚ್ಚಾಗುವುದು, ಕಾನೂನು ನಿಯಮಗಳನ್ನು ಉಲ್ಲಂಘಿಸುವ ಯಾವ ವ್ಯಕ್ತಿಯಾಗದರು ಸರಿಯೇ ಅವರ ವಿರುದ್ಧ ಕಠಿಣ ಕ್ರಮ ಕೈಗೋಳ್ಳಲು ನಾವು ನಿಷ್ಟುರವಾಗಿ ಇರಬೇಕಾಗುತ್ತದೆ, ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ ಗುರುತಿನ ಚೀಟಿ ಧರಿಸಿ ನಿಮಗೆ ನೀಡಿದ ಅಳತೆ ಮೀರದಂತೆ ಪಾಲಿಕೆ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಿ, ಅದನ್ನು ಬಿಟ್ಟು ರಸ್ತೆ ತುಂಬಾ ನಿವೇ ಇದ್ದರೆ ಪಾದಚಾರಿಗಳ ದೂರಿನ ಅನ್ವಯ ಕಾನೂನು ಪಾಲನೆಗಾಗಿ ಪುಟ್ ಪಾತ್ ತೆರವಿಗೆ ಮುಂದದಾಗ ನಾವು ನಿಮಗೆ ನಿಷ್ಟುರಂತೆ ಕಾಣುವೆವೂ ನಿವುಗಳು ಕಾನೂನು ಉಲ್ಲಂಘಿನೆ ಮಾಡಬೇಡಿ ಎಂದು ಹೇಳಿದರು.

ಕೆನರಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಯತೀಶ್ ರವರು, ಬ್ಯಾಂಕ್ ಎಲ್ಲಾ ರೀತಿಯ ಸಾಲ ನೀಡುತ್ತದೆ, ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವ ನಿಧಿಯ ಹತ್ತು ಸಾವಿರ ಹಾಗೂ ಸಂಕಲ್ಪ ಸಿದ್ದಿ ಸಾಲ, ಅಟಲ್, ಜೀವನ್ ಜ್ಯೋತಿ‌, 330 ರೂ. ಇನ್ಸೂರೆನ್ಸ್, 12 ರೂ. ಅಪಘಾತ ವಿಮೆ, ಇನ್ನೂ ಹಲವು ಯೋಜನೆಗಳ ಸಾಲ ಬ್ಯಾಂಕ್ ನೀಡುತ್ತದೆ ಎಂದು ಮಾಹಿತಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು, ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಎಷ್ಟೆ ಕೋಟಿಯಿಂದ ಮಳಿಗೆಗಳ ಕಟ್ಟಿಕೊಂಡು ವ್ಯಾಪಾರ ಮಾಡಿದರು, ಬೀದಿ ಬದಿಯ ಮೇಲೆ ಬಂದು ವ್ಯಾಪಾರ ಮಾಡಿದರೆ ಅವರನ್ನು ಬೀದಿ ಬದಿ ವ್ಯಾಪಾರಿಗಳು ಎಂದು ಗುರುತಿಸುವರು, ಸರ್ಕಾರವೂ ಬಂಡವಾಳ ಶಾಯಿಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ನೀಡಿ ನೋಡಿತು, ಅವರು ದೇಶವೇ ಬಿಟ್ಟು ಹೋದರು, ದೇಶದ ಜಿಡಿಪಿ ಮೇಲೆರಲಿಲ್ಲ, ದೇಶದ ಬೆನ್ನೆಲುಬು ರೈತರು ಎಷ್ಟು ಮುಖ್ಯವೋ, ಹಾಗೆ ಜಿಡಿಪಿ ಮೇಲೆರಲು ಬೀದಿ ಬದಿ ವ್ಯಾಪಾರಿಗಳು ಅಷ್ಟೇ ಮುಖ್ಯ, ವ್ಯಾಪಾರಿಗಳಿಗೆ ಸಾಲ ನೀಡಿದರೆ, ನೂರಕ್ಕೆ ತೊಂಬತ್ತು ರಷ್ಷು ಮರುಪಾವತಿ ಎಂದು ಮನಗೊಂಡು ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ, ಇಪ್ಪತ್ತು ಸಾವಿರ, ಐವತ್ತು ಸಾವಿರ ಸಾಲ ನೀಡಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗೆ ಮುಂದಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಇದ್ದು, ಶಿವಮೊಗ್ಗ ನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿರುವರು, ಬಹಳಷ್ಟು ಜನರಿಗೆ ಓದು ಬರಹ ಬರದು, ಯಾವುದೇ ಸರ್ಕಾರದ ಮಾಹಿತಿ ಬಗ್ಗೆ ಅವರಿಗೆ ತಿಳಿಯದು, ಸಂಬಂಧಪಟ್ಟ ಇಲಾಖೆಗಳು ಅವರಿಗೆ ಮೊದಲು ಇಶ್ರಮ್ ಪೊರ್ಟ್ ನಡಿ ಗುರುತಿಸುವ ಕೆಲಸ ಆಗಬೇಕಾಗಿದೆ ಹಾಗೆ ಪ್ರತಿ ನಾಗರಿಕರು ಸ್ವಯಂ ಪ್ರೇರಿತರಾಗಿ ಮುಂದೆ ಇಶ್ರಮ್ ಪೋರ್ಟ ನಡಿ ಕಾರ್ಡ್ ಪಡೆಯಿರಿ.

ಸರ್ಕಾರದ ಸೌಲಭ್ಯಗಳ ಪಡೆಯಲು ಎಲ್ಲರೂ ಗುರುತಿನ ಚೀಟಿ ಪಡೆದಿರುವರು, ಆದರೆ ನಿಜವಾದ ಬೀದಿ ಬದಿ ವ್ಯಾಪಾರಿಗಳ ಕೈಯಲ್ಲಿ ಗುರುತಿನ ಚೀಟಿ ಇಲ್ಲ, ಇವರ ಬಿಟ್ಟು ಉಳಿದವರ ಕೈಯಲ್ಲಿ ಬೀದಿ ಬದಿ ಗುರುತಿನ ಚೀಟಿ ಇದೆ. ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿರುವೇವೂ ರಿ ಸಮೀಕ್ಷೆ ಮಾಡಿ, ನಿಜವಾದ ಫಲಾನುಭವಿಗಳ ಹುಡುಕಿ ಜಿಪಿಎಸ್ ಅಳವಡಿಸಿಕೊಂಡು ಬೈಯೋ ಮೆಟ್ರಿಕ್ ನೊಂದಿಗೆ ಅವರುಗಳು ವ್ಯಾಪಾರ ಮಾಡುವ ಸ್ಥಳಗಳಿಗೆ, ಹೋಗಿ ಠಾಣೆಯ ಬಿಟ್ ಪೊಲೀಸ್, ಹಾಗೂ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್, ಆರೋಗ್ಯ ಇಲಾಖೆ ಹೆಲ್ತ್ ಇನ್ಸ್ಪೆಕ್ಟರ್ ಅವರುಗಳೊಂದಿಗೆ ಎಲ್ಲರನ್ನೂ ಗುರುತಿಸಿ, ಬಾರ್ ಕೊಡ್ ನೊಂದಿಗೆ ಗುರುತಿನ ಚೀಟಿ ನೀಡಿ, ಇದೆ ಊರಿನಲ್ಲಿ ಹುಟ್ಟಿ ಬೆಳೆದ ಫಲಾನುಭವಿಗಳಿಗೆ ಗುರುತಿನ ಚೀಟಿ ಇಲ್ಲಾ, ಬೇರೆ ರಾಜ್ಯದ ವ್ಯಕ್ತಿಯ ಬಳಿ ಗುರುತಿನ ಚೀಟಿ ಇದೆ. ಮೊದಲು ಸ್ಥಳೀಯ, ನಂತರ ತಾಲ್ಲೂಕು, ಜಿಲ್ಲೆ ಅನಂತರ ಬೇರೆ ರಾಜ್ಯದವರನ್ನು ಗುರುತಿಸಿ, ಮೊದಲು ಆದ್ಯತೆ ಅಂಗವಿಕಲರು, ವಿಧವೆಯರು, ಮಹಿಳೆಯರು, ಆರ್ಥಿಕ ದುರ್ಬಲರಿಗೆ ನೀಡಬೇಕು.
ಅವರು ಸರ್ಕಾರಿ ನೌಕರರು ಅಥವಾ ಐಟಿ ರಿಟನ್ ಕಟ್ಟವವರೊ ಎಂದು ಆವರ ಆದಾಯ ಪ್ರಮಾಣ ಪತ್ರವನ್ನು, ಒಂದು ವೆಬ್ ಸೈಟ್ ಮೂಲಕ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಒಂದು ಕುಟುಂಬಕ್ಕೆ ಒಂದು ಗುರುತಿನ ಚೀಟಿ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಶಾಲನ್ನು ಹೊದಿಸಿ,ಪುಷ್ಪಗುಚವ ನೀಡಿ ಗೌರವ ಸಮರ್ಪಣೆ ಮಾಡಲಾಯಿತು. ಜಿಲ್ಲಾಧ್ಯಕ್ಷರಿಗೆ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಸನ್ಮಾನ್ಯ ಮಾಡಿದರು. ಈ ಸಮಯದಲ್ಲಿ ಜಿಲ್ಲಾಧ್ಯಕ್ಷರು, ಜಿಲ್ಲೆಯ ತಾಲ್ಲೂಕುಗಳಿಂದ ಬಂದಂತಹ ತಾಲ್ಲೂಕು ಅಧ್ಯಕ್ಷರಿಗೆ, ವಲಯ, ವಾರ್ಡ್, ಅಧ್ಯಕ್ಷರಿಗೆ ಸನ್ಮಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಟಿವಿಸಿ ಸದಸ್ಯರಾದ ನಾರಾಯಣ ಎಂಎಸ್, ಸಂಘಟನೆಯ ಪದಾಧಿಕಾರಿಗಳಾದ ಶ್ರೀಮಣಿ ಗೌಂಡರ್, ಶ್ರೀ ಅವಿನಾಶ್, ಶ್ರೀ ದಿನೇಶ್, ಶ್ರೀ ಗೋಪಾಲ್, ಶ್ರೀ ಶರತ್ ಶ್ರೀ ಮತಿ ರಂಗಮ್ಮ, ಶ್ರೀ ಮತಿ ಸವಿತಾ, ವಲಯ, ವಾರ್ಡ್, ಬೂತ್ ಅಧ್ಯಕ್ಷರು, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…