21/01/2022 ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆ, ಕರ್ನಾಟಕ ಸಂಘದ ಮೈನ್ ಮಿಡ್ಲ್ ಶಾಲೆ ಎದುರು ಡಬ್ಬಲ್ ರಸ್ತೆಯ ಬಳಿ ಮಹಾನಗರ ಪಾಲಿಕೆ ಹಿಂಭಾಗದ ಎದುರು ಫುಟ್ ಪಾತ್ ಆಕ್ರಮಿಸಿಕೊಂಡ ಬೀದಿ ಬದಿ ವ್ಯಾಪಾರಿಗಳನ್ನು, ದೊಡ್ಡ ದೊಡ್ಡ ಅಂಗಡಿಗಳ ಮುಂದೆ ಫುಟ್ ಪಾತ್ ನಲ್ಲಿ ಇಟ್ಟಿರುವ ನಾಮಫಲಕಗಳನ್ನು, ಮಳಿಗೆಯಲ್ಲಿ ಇರುವ ದಿನಸಿ ಸಾಮಾನುಗಳು ಬೀದಿ ಬದಿಯಲ್ಲಿ ಇಟ್ಟು ವ್ಯಾಪಾರ ಮಾಡುತ್ತಿರುವ ಸರಕು ಸಾಮಗ್ರಿಗಳನ್ನು ಫುಟ್ ಪಾತ್ ಆಕ್ರಮಿಸಿಕೊಂಡ ಯಾವ ದೊಡ್ಡ ವ್ಯಕ್ತಿಯನ್ನು ನೋಡಿದೆ, ಮುಲಾಜಿಲ್ಲದೆ ತೆರವು ಗೋಳಿಸಿದರು.

ಈ ಮೂರು ತಿಂಗಳ ಹಿಂದೆ ಸಾರ್ವಜನಿಕ ನಾಗರಿಕರ ದೂರಿನ ಅನ್ವಯ ಫುಟ್ ಪಾತ್ ಆಕ್ರಮಿಸಿಕೊಂಡ ಬೀದಿ ಬದಿ ವ್ಯಾಪಾರಿಗಳಿಗೆ ನಗರದೆಲ್ಲೆಡೆ ಒಕ್ಕಲೆಬಿಸಲಾಗಿತ್ತು, ಬೀದಿ ಬದಿ ವ್ಯಾಪಾರಿಗಳು ನಾವುಗಳು ಸಣ್ಣ ಪುಟ್ಟಿಯಲ್ಲಿ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತೇವೆ, ನಾವುಗಳು ಫುಟ್ ಪಾತ್ ಆಕ್ರಮಿಸುವುದಿಲ್ಲ, ದೊಡ್ಡ ದೊಡ್ಡ ಮಳಿಗೆಯವರು, ದಿನಸಿ ವರ್ತಕರು, ಫುಟ್ ಪಾತ್ ನಲ್ಲಿ ತಮ್ಮ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಾರೆ, ಅವರನ್ನ ಬಿಟ್ಟು ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೇ ಎಂದು ಬೀದಿ ಬದಿ ವ್ಯಾಪಾರಸ್ಥರು ದೂರಿದರು.

ಪೊಲೀಸ್ ಇಲಾಖೆಯು ಯಾವ ದೊಡ್ಡ ವ್ಯಕ್ತಿಯಾದರೂ ಸರಿಯೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಫುಟ್ ಪಾತ್ ಆಕ್ರಮಿಸಿಕೊಂಡವರ ಮೇಲೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

ಆಗ ಪಾಲಿಕೆಯಿಂದ ಗುರುತಿನ ಚೀಟಿ ಪಡೆದ ಫಲಾನುಭವಿಗಳಿಗೆ ಅಳತೆ ಮೀರದಂತೆ ಸ್ವಚ್ಛತೆಯೊಂದಿಗೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದರು, ಆದರೆ ಒಂದು ವಾರ ಕಳೆಯುತ್ತಲೇ, ನಿಯಮಗಳ ಮೀರಿ ಫುಟ್ ಪಾತ್ ಆಕ್ರಮಿಸಿಕೊಂಡ ಎಲ್ಲಾ ವ್ಯಾಪಾರಿಗಳ ಸರಕು ಸಾಮಗ್ರಿಗಳನ್ನು ಮುಲಾಜಿಲ್ಲದೆ ಒಂದು ವಾರದಿಂದ ಹಗಲು ರಾತ್ರಿ ಎನ್ನದೆ ತೆರವುಗೊಳಿಸುತ್ತಿರುವರು.

ಬಿ.ಹೆಚ್.ರಸ್ತೆಯ ಆಲ್ಕೋಳ, ಸರ್ಕಲ್, ಭಾರ್ಗವಿ ಪೆಟ್ರೋಲ್ ಬಂಕ್, ಪ್ರವಾಸಿ ಮಂದಿರ, ಮೆಗ್ಗಾನ್ ಆಸ್ಪತ್ರೆ, ಡಿವೈಎಸ್ಪಿ ಕಛೇರಿ ಮುಂಭಾಗ, ಸಿಮ್ಸ್ ಆಸ್ಪತ್ರೆ, ದೊಡ್ಡಪೇಟೆ ಠಾಣೆ ಎದುರು, ಖಾಸಗಿ ಬಸ್ ನಿಲ್ದಾಣದ ಬಳಿ, ಅಶೋಕ ವೃತ್ತ, ವಿನಾಯಕ ಟ್ಯಾಕೀಸ್ ರಾಯಲ್ ಆರ್ಕೇಡ್ ಎದುರು, ಎಸ್ ಸಿ ಐ, ವಿನೋಬಾ ನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಡಿವಿಎಸ್ ಶಾಲೆ ಬಳಿ, ಫ್ರೀಡಂ ಪಾರ್ಕ್, ಲಕ್ಷ್ಮೀ ಟ್ಯಾಕೀಸ್, ಇನ್ನೂ ಹಲವು ಕಡೆ ನಿಯಮ ಮೀರಿ ಫುಟ್ ಪಾತ್ ಆಕ್ರಮಿಸಿಕೊಂಡ ಎಲ್ಲರಿಗೂ ತೆರವು ಕಾರ್ಯಾಚರಣೆ ಮಾಡುತ್ತಿದ್ದು, ಇಂದು ಕರ್ನಾಟಕ ಸಂಘದ ಎದುರು ಫುಟ್ ಪಾತ್ ನಲ್ಲಿ ಇಟ್ಟಿದ ಬೊರ್ಡ ಸರಕು ಸಾಮಗ್ರಿಗಳನ್ನು ತೆರವು ಮಾಡಿ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಅನುವು ಮಾಡಿಕೊಡುತ್ತಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ನಿಂತಲ್ಲೇ ನೋಡುತ್ತಾ ಪೊಲೀಸ್ ಇಲಾಖೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಇದು ಒಂದು ದಿನಕ್ಕೆ ಅಥವಾ ಒಂದು ವಾರಕ್ಕೆ ಕಾರ್ಯಾಚರಣೆ ಸೀಮಿತ ವಾಗಬಾರದು, ಪೊಲೀಸರು ಅ ಕಡೆ ಹೋದ ಮೇಲೆ ಇವರು ಎಥಾ ಸ್ಥಿತಿಗೆ ಬರುವರು, ಅದಕ್ಕೆ ಕಡಿವಾಣ ಹಾಕಲು ದಿನನಿತ್ಯ ಟ್ರಾಫಿಕ್ ಬಿಟ್ ಪೊಲೀಸರು ನಿಯಮಗಳನ್ನು ಮೀರುವವರ ಗಮನಿಸಿ ಅವರ ಸಾಮಗ್ರಿಗಳನ್ನು ಟೈಗರ್ ಗಾಡಿಯಲ್ಲಿ ಹಾಕಬೇಕು, ಅದನ್ನು ಗಮನಿಸಿದ ಇತರರೂ ರಸ್ತೆ ಅಕ್ರಮಿಸುವುದಿಲ್ಲ, ಎಡ ಎತ್ತಿಗೆ ಬಾರಿಸಿದರೆ ಬಲಗಡೆಯ ಎತ್ತು ಎಚ್ಚೆತ್ತು ಕೋಳ್ಳುವುದು ಈ ಕಾರ್ಯಾಚರಣೆ ಗಮನಿಸಿ ಎಲ್ಲಾರೂ ಸ್ವಯಂ ಪ್ರೇರಣೆಯಿಂದ ಆಕ್ರಮಿಸಿಕೊಂಡ ಫುಟ್ ಪಾತ್ ನಿಂದ ಹಿಂದೆ ಸರಿಯ ಬೇಕು ಎಂದು ನಿಂತಲ್ಲೇ ಜನರು ಹೇಳಿದರು.

ವರದಿ ಮಂಜುನಾಥ್ ಶೆಟ್ಟಿ…