ಕುವೆಂಪು ವಿ .ವಿ. ಯ ಎಸ್. ಆರ್. ಎನ್. ಎಂ. ನ್ಯಾಷನಲ್ ಕಾಲೇಜ್, ಶಿವಮೊಗ್ಗ ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮದಿನದ ಅಂಗವಾಗಿ ಕಾಲೇಜಿನ ಎನ್ಎಸ್ಎಸ್ ಹಾಗೂ ಯುವ ರೆಡ್ ಕ್ರಾಸ್ ವತಿಯಿಂದ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಚಾರ್ಯರಾದ ಡಾ. ಅರವಿಂದ ಕೆ. ಎಲ್ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಇಂದಿನ ಕರೋನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು ಅವಶ್ಯಕತೆಯ 50% ಮಾತ್ರವೇ ಪೂರೈಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಮುಂದೆ ಬಂದು ರಕ್ತದಾನ ಮಾಡುವುದರ ಮೂಲಕ ನೆರವಾಗಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುವೆಂಪು ವಿ.ವಿ.ಯ ರಾ.ಸೇ.ಯೋ. ಕಾರ್ಯಕ್ರಮ ಸಂಯೋಜನೆ ಅಧಿಕಾರಿಗಳಾದ ಡಾ. ನಾಗರಾಜ ಪರಿಸರ ಮಾತನಾಡಿ ಎಲ್ಲ ಕಾಲೇಜುಗಳಲ್ಲಿ ಇಂತಹ ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ರಕ್ತದ ಅವಶ್ಯಕತೆಯನ್ನು ಪೂರೈಸಬಹುದು ಮತ್ತು ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿ ರಕ್ತದಾನ ಮಾಡುವುದರಿಂದ ಆರೋಗ್ಯವು ವೃದ್ಧಿಯಾಗುವುದು ಎಂದು ತಿಳಿಸಿ ರಕ್ತದಾನಿಗಳಿಗೆ ಶುಭ ಹಾರೈಸಿದರು.

ಸಲಹಾ ಸಮಿತಿ ಸದಸ್ಯರಾದ ಶ್ರೀ ರೋಟೇರಿಯನ್ ವಿಜಯ ಕುಮಾರ್ ಮಾತನಾಡಿ ಎನ್.ಎಸ್.ಎಸ್ ಮತ್ತು ರೆಡ್ ಕ್ರಾಸ್ ಸಂಸ್ಥೆ ಗಳು ಇಂತಹ ಸೇವಾಕಾರ್ಯಗಳಲ್ಲಿ ತೊಡಗಿರುವುದರಿಂದ ಎಷ್ಟೋ ಜನರ ಜೀವ ಉಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿಯಾದ ಡಾ. ಮುಕುಂದ. ಎಸ್ ಮಾತನಾಡಿ ನೇತಾಜಿಯವರು ಭಾರತೀಯರಿಗೆ ನೀವು ರಕ್ತ ನೀಡಿ ನಾನು ಸ್ವತಂತ್ರ ಕೊಡಿಸುತ್ತೇನೆ ಎಂದು ಕರೆನೀಡಿದ್ದರು. ಅದರಂತೆ ನಾವು ಪ್ರತಿವರ್ಷವೂ ರಕ್ತದಾನ ಶಿಬಿರ ಮಾಡುತ್ತಿದ್ದೇವೆ. ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೃಪತುಂಗ, ರೆಡ್ ಕ್ರಾಸ್ ಅಧಿಕಾರಿಗಳಾದ ಡಾ. ಪ್ರಶೀತ್ ಕೇಕುಡ, ಇನ್ನಿತರ ಸಿಬ್ಬಂದಿಗಳು ಸ್ವಯಂಸೇವಕರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…