ಸ್ವಾತ್ರಂತ್ರ್ಯ ಭಾರತದಲ್ಲಿ ಇದ್ದ ಪ್ರಾಚೀನ ರಾಜವಂಶಗಳ ಆಡಳಿತ ಕೊನೆಗೊಳಿಸಿ, ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ರಚನಾತ್ಮಕ ಸಂವಿದಾನವನ್ನು ಅಳವಡಿಸಿಕೊಂಡ ದಿನದ ನೆನಪಾಗಿ ಈ ಗಣರಾಜ್ಯೋತ್ಸವ ಆಚರಣೆ ವಿಶ್ವಕ್ಕೆ ಮಾದರಿ ಯಾಗಿದೆ ಎಂದು ಕೆ.ಎಸ್.ಎಫ್.ಸಿ. ವ್ಯವಸ್ಥಾಪಕ ಕೆ.ಎನ್.ಲಿಂಗಪ್ಪ ದ್ವಜಾರೋಹಣ ಮಾಡಿ ಮಾತನಾಡಿದರು.
ಪ್ರಾಸ್ತಾವಿಕ ನುಡಿ ನಡಿದ ಲಕ್ಕಣ್ಣರವರು ಬರವಣಿಗೆಯಲ್ಲಿರು ಬೃಹತ್ ಸಂವಿದಾನ ನಮ್ಮ ರಾಷ್ಟ್ರದ್ದು ಅದನ್ನು ಪಾಲಿಸಿ ಕೊಂಡು ಬರುವ ಜವಾಬ್ದಾರಿ ನಮ್ಮೆಲ್ಲರದು, ಅದು ನಮ್ಮ ಬಾಳು ಹಸನ ಮಾಡುತ್ತದೆ ಎಂದರು.
ನಿರೂಪಿಸಿದ ಬಿ.ಕೆ.ರವೀಂದ್ರನಾಥ್ ರವರು ಎಪ್ಪತ್ತು ವರ್ಷಗಳ ಹಿಂದೆ ಅಳವಡಿಸಿಕೊಂಡ ಸಂವಿದಾನವನ್ನು ಇಂದಿಗೂ ಹಲವು ಮಾರ್ಪಾಡಿನೊಂದಿಗೆ ಗೌರವದಿಂದ ಅನುಸರಿಸಿ ಕೊಂಡು ಬರಲು ನಮ್ಮ ರಾಷ್ಟ್ರದ ಬೃಹತ್ ಜನಸಂಖ್ಯೆಯ ಎಲ್ಲಾ ನಾಗರೀಕರು ಕಾರಣಕರ್ತರು ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ವಾಗೇಶ್, ರಾಜಪ್ಪ, ಪ್ರಶಾಂತ್ ಮುಂತಾದವರು ಹಾಜರಿದ್ದರು. ಎಸ್.ಕೆ.ಮಾಲತೇಶ್ ಸ್ವಾಗತಿಸಿದರು ಗಿರಿಯಪ್ಪ ವಂದಿಸಿದರು.