ಬಸವನ ಗದ್ದೆ ನ್ಯೂಸ್…

ಇಂದು 73ನೇ ಗಣರಾಜ್ಯೋತ್ಸವ ಆಚರಣೆಯನ್ನು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಸವನಗದ್ದೆಯಲ್ಲಿ ಆಚರಿಸಲಾಯಿತು.ಶಾಲಾ ಮುಖ್ಯಶಿಕ್ಷಕಿ ಅನಿತಕೃಷ್ಣ ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ.ಸರೋಜ ಈಶ್ವರ್ .ರವರು ನೆರವೇರಿಸಿದರು.

ಶಾಲಾ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ.ಚಂದ್ರ.ಕೆ.ಬಿ.ರವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.ಗ್ರಾಮಸ್ಥರಾದ..ಶ್ರೀ ರುಕ್ಮಿಣಿಯಮ್ಮ ಅನಂತಯ್ಯಗೌಡರು..ಮಕ್ಕಳಾದ ಶ್ರೀ.ಕನಕರಾಜ್ ರವರು ನಮ್ಮ ಶಾಲೆಗೆ 30 ಸಾವಿರ ವೆಚ್ಚದ ನಲಿ ಕಲಿ ಟೇಬಲ್..ಕುರ್ಚಿಗಳು ಹಾಗೂ ಬೆಂಚ್ ಡೆಸ್ಕ್ ಅನ್ನು ಕೊಡುಗೆಯಾಗಿ ನೀಡಿದರು.ಕಾರ್ಯಕ್ರಮ ದಲ್ಲಿ ಮಕ್ಕಳಿಂದ ದೇಶಭಕ್ತಿಗೀತೆ ಹಾಡಿಸಲಾಯಿತು.ರಾಷ್ಟ್ರೀಯ ದಿನಾಚಾರಣೆಗಳನ್ನು ಗ್ರಾಮದ ಸಮುದಾಯದವರನ್ನು ಸೇರಿಸಿಕೊಂಡು ಶಾಲೆಯಲ್ಲಿ ಆಚರಿಸುವುದರಿಂದ ಊರಿನಲ್ಲಿ ಒಗ್ಗಟ್ಟು, ಸೌಹಾರ್ದತೆ ಮೂಡುತ್ತದೆ..ಈ ನಿಟ್ಟಿನಲ್ಲಿ ಕಳೆದ 3 ವರ್ಷಗಳಲ್ಲಿ ಬಸವನಗದ್ದೆ ಶಾಲೆಯು ಅಭಿವೃದ್ಧಿ ಯತ್ತ ಸಾಗುತ್ತಿದೆ.

ಮಕ್ಕಳ ಕಲಿಕೆ ಉತ್ತಮವಾಗಿದೆ.ಕ್ರಿಯಾಶೀಲ ಶಿಕ್ಷಕಿ ಶ್ರೀಮತಿ.ಅನಿತಕೃಷ್ಣ ರವರ ಪರಿಶ್ರಮ ಬಹಳ ಷ್ಟಿದೆ ಎಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಕೊಂಡಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ.ಹೂವಪ್ಪ ರವರು ಎಲ್ಲರನ್ನು ಸ್ವಾಗತಿಸಿದರು.ಮುಖ್ಯಶಿಕ್ಷಕಿ, ಅನಿತರವರು ಗಣರಾಜ್ಯ ದಿನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮ ದಲ್ಲಿ ಎಸ್ ಡಿ ಎಂ.ಸಿ.ಸದಸ್ಯರಾದ ಕಾವ್ಯ , ಪ್ರವೀಣ್, ಅರವಿಂದ, ರಶ್ಮಿ,ರವೀಶ್ ಹೆಬ್ಬಾರ್, ಚಂದ್ರ.ಕೆ.ಆರ್.ಈಶ್ವರ್..ಇನ್ನು ಮುಂತಾದವರು ಉಪಸ್ಥಿತರಿದ್ದರು.ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಸ್ ಡಿ ಎಂ ಸಿ ರವರ ಪಾತ್ರ ಬಹುಮುಖ್ಯ ವಾಗಿದೆ ಎಂದು ಎಲ್ಲರ ಅಭಿಪ್ರಾಯವಾಗಿತ್ತು.ಒಟ್ಟಾರೆ.ವಿವಿಧತೆಯಲ್ಲಿ ಏಕತೆ ಇರುವ ನಮ್ಮ ದೇಶದಲ್ಲಿ ಇಂದಿನ ಕಾರ್ಯಕ್ರಮವು ನಾವೆಲ್ಲಾ ಒಂದೇ ಎಂದು ಐಕ್ಯತೆಯನ್ನು ಸಾರುವಲ್ಲಿ ಸಾಕ್ಷಿಭೂ ತವಾಗಿತ್ತು.ಮುಖ್ಯಶಿಕ್ಷಕಿ ಸರ್ವರನ್ನು ವಂದಿಸಿದರು.

ಶ್ರೀಕನಕರಾಜ್ ಎಲ್.ಜಿ.ಕೆಟರರ್ಸ್ ಮಾಲೀಕರು.ಬೆಂಗಳೂರು ಇವರು.ಬಸವನಗದ್ದೆ ಯ ಕಳ್ಳಿಗದ್ದೆಯ ಗ್ರಾಮಸ್ಥರು ಬಸವನಗದ್ದೆ ಶಾಲೆಗೆ 30 ಸಾವಿರ ವೆಚ್ಚದ ನಲಿಕಲಿ ಟೇಬಲ್.ಚೇರ್ ಡೆಸ್ಕ್ ಬೆಂಚ್ ಅನ್ನು ಕೊಡುಗೆಯಾಗಿ ನೀಡಿದವರು.
ಶಾಲಾಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು. ತಾನು ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗಾಗಿ, ನಾನು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ನೀಡಿದೆ.ಇದು ನನ್ನ ಕರ್ತವ್ಯವೂ ಆಗಿದೆ ಎಂದು ತಿಳಿಸಿದರು.

ವರದಿ ಮಂಜುನಾಥ್ ಶೆಟ್ಟಿ…