ರಿಪ್ಪನಪೇಟೆ ನ್ಯೂಸ್…

ರಿಪ್ಪನ್ ಪೇಟೆ : ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನೊಬ್ಬನು ಧ್ವಜಾರೋಹಣ ದಿನದಂದೇ ರಾಷ್ಟ್ರಧ್ವಜಕ್ಕೆ ಶೂ ಧರಿಸಿ ಅವಮಾನ ಮಾಡಿದ್ದಾರೆ.

ಬೆಳ್ಳೂರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಾದ ಅಪ್ಪಾಸಾಹೇಬ್ ದರಿ ಗೌಡಾ ಎಂಬುವವರು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಸಮಾರಂಭದಲ್ಲಿ ಶೂ ಧರಿಸಿ ಧ್ವಜಾರೋಹಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರೊಬ್ಬರು ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡುವ ಅತಿಥಿಗಳಿಗೆ ಧ್ವಜರೋಹಣ ಕಂಬದ ಬಳಿ ಕರೆದುಕೊಂಡು ಬಂದು ಧ್ವಜರೋಹಣ ಮಾಡುವಂತಹ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಅಪ್ಪಾ ಸಾಹೇಬ್ ಧರಿ ಗೌಡ ಎಂಬುವವರು ಶೂ ಧರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಮಾಡಿ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವರದಿ ರಫಿ ರಿಪ್ಪನಪೇಟೆ…