ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಟೀಮ್ ಪ್ರಜಾಶಕ್ತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಬಸವರಾಜ ಬೊಮ್ಮಾಯಿಯವರು ತಮ್ಮ ವೃತ್ತಿ ಜೀವನವನ್ನು ಪುಣೆಯ ಟಾಟಾ ಮೋಟರ್ಸ್ ನಲ್ಲಿ ಆರಂಭಿಸಿದರು. ಸ್ವತಃ ಕೈಗಾರಿಕೋದ್ಯಮಿಯಾಗಿರುವ ಬೊಮ್ಮಾಯಿಯವರು ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇನ್ ಫೈನೈಟ್ ಅಪರ್ಚುನಿಟೀಸ್ ಎಂಬ ಎಲ್ಲಾ ಸಿಇಒ ಗಳ ಚರ್ಚೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಗಮನ ಸೆಳೆದ ಅಂಶವೆಂದರೆ ವೇದಿಕೆಯಲ್ಲಿ ಆಸೀನರಾಗಿದ್ದ ಬೊಮ್ಮಾಯಿಯವರ ಸುತ್ತಮುತ್ತ ಯಾವುದೇ ಸಹಾಯಕರು ಇರಲಿಲ್ಲ. ಸಿಇಒಗಳ ಜತೆ ಚರ್ಚೆ ಎಂದಾಗ ಅದು ಸ್ವಲ್ಪ ಕಷ್ಟದಾಯಕವಾಗಿದ್ದು ಉತ್ತರಿಸಲು ಅಗಾಧವಾದ ಜ್ಞಾನ ಬೇಕಾಗುತ್ತದೆ. ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬಸವರಾಜ ಬೊಮ್ಮಾಯಿಯವರು ಎಲ್ಲ ಪ್ರಶ್ನೆಗಳಿಗೆ ಸುಲಲಿತವಾಗಿ ಅಷ್ಟೇ ನಿಖರವಾಗಿ ಉತ್ತರಗಳನ್ನು ನೀಡಿದರು. ಸಭೆಯಲ್ಲಿದ್ದ ಎಲ್ಲರೂ ಮುಖ್ಯಮಂತ್ರಿಗಳ ಜಾಣ್ಮೆಗೆ ತಲೆದೂಗಿದರು. ಈ ಚರ್ಚೆ ಎಷ್ಟು ಉಪಯುಕ್ತ ವಾಯಿತೆಂದರೆ 3ಗಂಟೆಯ ಅವಧಿಯಲ್ಲಿ ಬೊಮ್ಮಾಯಿಯವರು ಕೈಗೊಂಡ ಹಾಗೂ ಕೈಗೊಳ್ಳಲಿರುವ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಕೈಗಾರಿಕೆಗಳಿಗಾಗಿ ತೆಗೆದಿದ್ದ ಸಿಂಗಲ್ ವಿಂಡೋ ಬಗ್ಗೆ ಇದ್ದ ಕೆಲವು ಆರೋಪಗಳಿಗೆ ಸಮಂಜಸ ಉತ್ತರವನ್ನು ನೀಡಿ ಸೈ ಎನಿಸಿಕೊಂಡರು. ಬಸವರಾಜ ಬೊಮ್ಮಾಯಿ ಅವರ ಹುಟ್ಟಿದ ದಿನವಾದ ಇಂದು ಭವಿಷ್ಯ ಕರ್ನಾಟಕದ ಬಗ್ಗೆ ಬೊಮ್ಮಾಯಿಯವರ ಹೊಂದಿರುವ ನೋಟಗಳು ಸಾಕಾರವಾಗಲಿ ಕರ್ನಾಟಕ ಯಶಸ್ಸಿನತ್ತ ಸಾಗಲಿ ಎಂದು ಆಶಿಸುತ್ತಾ…