ಶಿವಮೊಗ್ಗ: ಪ್ರಸ್ತುತ ಯುವಪೀಳಿಗೆ ಹಾಗೂ ಎಲ್ಲ ಮಹಿಳೆಯರು, ಮಕ್ಕಳಿಗೂ ಕಾನೂನಿನ ಅರಿವು ಹಾಗೂ ಜಾಗೃತಿ ಅವಶ್ಯಕ ಎಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ನೀರಿಕ್ಷಕ ಆರ್.ವೀರೇಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದಲ್ಲಿರುವ ಕೇಶವ ಚಿಕಿತ್ಸಾಲಯದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಬಿ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಲೈಂಗಿಕ ಕಿರುಕುಳ, ಸಾಂಸಾರಿಕ ತೊಂದರೆ, ದಿನನಿತ್ಯ ಕಿರುಕುಳ ಸೇರಿದಂತೆ ಅನೇಕ ರೀತಿ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇತ್ತೀಚೆಗೆ ಮಹಿಳೆಯರಿಗೆ ವಂಚಿಸಿರುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಆದ್ದರಿಂದ ಮಹಿಳೆಯರು ಕಾನೂನಿನ ಅರಿವು ಮೂಡಿಸಿಕೊಳ್ಳುವ ಜತೆಯಲ್ಲಿ ಅನ್ಯಾಯ ಆದ ಸಂದರ್ಭದಲ್ಲಿ ಕಾನೂನಿನ ಮುಖಾಂತರ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ಪ್ರೇಮದ ಬಲೆಯಲ್ಲಿ ಸಿಲುಕಿಸುವುದು. ಹಣಕಾಸಿನ ಆಮಿಷ ನೀಡಿ ವಂಚಿಸುವುದು, ಕೆಲಸ ಕೊಡಿಸುವುದಾಗಿ ಮೋಸ ಮಾಡುವುದು ನಡೆಯುತ್ತಿದೆ. ಮಕ್ಕಳಿಗೆ ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್ ಕೊಡಿಸಿದ ಸಂದರ್ಭದಲ್ಲಿ ಅನಾಮಿಕ ಸಂಖ್ಯೆಗಳಿಗೆ ಕರೆ, ಸಂದೇಶ ಮಾಡುವುದರಿಂದಲೂ ಮೋಸಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಬಳಸುವಾಗ ಹೆಚ್ಚಿನ ಜಾಗೃತಿ ಅವಶ್ಯಕ ಎಂದು ಹೇಳಿದರು.
ಪೊಲೀಸ್ ಇಲಾಖೆಯು ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಯಾರೇ ಆಗಲಿ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸ್ ಇಲಾಖೆ ಸಿಬ್ಬಂದಿ ನೆರವಾಗುತ್ತಾರೆ. ಅದೇ ಹೆಣ್ಣು ಮಕ್ಕಳು ಧೈರ್ಯದಿಂದ ಏನೇ ಅನ್ಯಾಯ ನಡೆದರೂ ಮೋಸ ನಡೆದರೂ ವಂಚನೆ ನಡೆದರೂ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸುವುದು ತಮ್ಮೆಲ್ಲರ ಸುರಕ್ಷತೆಗೆ ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳಾಗಲಿ, ನಿಮ್ಮ ಅಕ್ಕಪಕ್ಕದಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ತೊಂದರೆ ಒಳಗಾಗಿದ್ದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿಗೆ ವಿಷಯ ತಿಳಿಸಬೇಕು. ವಿಷಯ ತಿಳಿಸಿದರ ವಿವರವನ್ನು ಗುಪ್ತವಾಗಿ ಇಡಲಾಗುವುದು.
ಸಾಂಸಾರಿಕವಾಗಿ ಕುಟುಂಬಗಳಲ್ಲಿ ಹೊಂದಿಕೊಳ್ಳಲು ಹಾಗೂ ಅತ್ತೆ ಮಾವಂದಿರ ಕಾಟದಿಂದ ನನಗೆ ತೊಂದರೆ ಆಗುತ್ತಿದೆ. ಗಂಡ-ಹೆAಡತಿಯ ಜಗಳಗಳು ಇತ್ಯಾದಿ ಕಾರಣಗಳಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌನ್ಸಿಲಿಂಗ್ ಮುಖಾಂತರ ಸರಿ ಮಾಡಲು ಪ್ರಯತ್ನಿಸಿದ ನಂತರ ಸರಿ ಹೋಗದಿದ್ದಲ್ಲಿ ಪ್ರಕರಣ ದಾಖಲಿಸುವುದು ಎಂದರು.
ಎಎಸ್‌ಐ ಜಾನಕಿ ಮಾತನಾಡಿ, ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮಾಹಿತಿ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಹೊಸಮನೆ ಬಡಾವಣೆಯ ಮಹಿಳೆಯರು ಹಾಗೂ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾಕಷ್ಟು ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿರುವುದು ಸಂತೋಷ ಎಂದರು.
ಮುAದಿನ ದಿನಗಳಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ
ಸಂಸ್ಥೆಯ ವತಿಯಿಂದ ಅನೇಕ ಹಳ್ಳಿಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮ ಹಾಗೂ ಸುರಕ್ಷಿತ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ಸುಮತಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಮಾಡಲು ತೀರ್ಮಾನಿಸಲಾಗಿದೆ. ಅರಿವಿನ ಜೊತೆಯಲ್ಲಿ ಕಾನೂನು ಸಲಹೆಗಳು ಹಾಗೂ ಅವರಿಗೆ ಸ್ಥೆöÊರ್ಯ ತುಂಬುವ ಕೆಲಸಗಳು ಮಾಡುತ್ತಿದ್ದೇವೆ ಎಂದರು.
ಜೆಸಿಐ ಅಧ್ಯಕ್ಷರು ಹಾಗೂ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ರೋಟರಿ ಕಮ್ಯುನಿಟಿ ನಿರ್ದೇಶಕ ಜಿ.ವಿಜಯ್ ಕುಮಾರ್, ಸದಸ್ಯರಾದ ಕುಮಾರಸ್ವಾಮಿ ಎನ್, ಕಿಶೋರ್ ಕುಮಾರ್, ಸಂತೋಷ್ ಕುಮಾರ್ , ಶಿಕ್ಷಕಿಯರಾದ ಕನ್ಯಾಕುಮಾರಿ, ವಿಜಯ ಉಪಸ್ಥಿತರಿದ್ದರು.