ಬಡತನ ಗೊತ್ತಿದ್ದವರೇ, ಬಡವರ ನೆರವಿಗಾಗೋದು! ಲಾಕ್ಡೌನ್ನಲ್ಲಿ ನೆರವಿಗಾದ ಗೋಕುಲ ಕೃಷ್ಣನ್.
ಹೇಳಿಕೇಳಿ ಕೊರೊನಾ! ಯಾಕೆ ಬೇಕು ನೆಮ್ಮದಿಯಾಗಿ ಮನೇಲಿ ಇರೋಣ ಅನ್ನೋರೇ ಜಾಸ್ತಿ. ಅದರಲ್ಲೂ ಸೋಂಕಿತರು, ನೊಂದವರು, ಲಾಕ್ಡೌನ್ನಿಂಧ ತೊಂದರೆಗೊಳಗಾದವರ ಬದುಕನ್ನ ಯಾರು ಸಹ ನೋಡಲು ಹೋಗುವುದಿಲ್ಲ. ಕೈಲಾದರೂ ಸಹಾಯ ಮಾಡುವ ಮನಸ್ಸು ಇರಬೇಕಲ್ಲವೆ ಎನ್ನುವುದು ಮೊದಲಿನಿಂದಲೂ ಬಂದ ಮಾತಿದೆ. ಆದರೆ ಯಾರಿಗೆ ಬಡತನದ ಬಗ್ಗೆ ಗೊತ್ತಿರುತ್ತದೆಯೋ? ಬಡತವನ್ನ ಅನುಭವಿಸಿ ಮೇಲೆ ಬಂದಿರೋತ್ತಾರೋ ಅವರಷ್ಟೆ ಇಂತಹ ಸಂದರ್ಭದಲ್ಲಿ ನೊಂದವರಿಗೆ ನೆರವಾಗುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸ್ಯಾಂಡಲ್ವುಡ್ ಸ್ಟಾರ್ಗಳು ಲಾಕ್ಡೌನ್ನ ಈ ಸಮಯದಲ್ಲಿ, ಹೇಗೆಲ್ಲಾ ಸಹಾಯ ಮಾಡುತ್ತಿದ್ದಾರೆ ಅನ್ನೋದು ನಿಮಗೆ ತಿಳಿದೆ ಇದೆ.
ಇನ್ನೂ ಇದೇ ರೀತೀಯಲ್ಲಿ ಭದ್ರಾವತಿಯ ಹಿರಿಯೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಗೋಕಲ್ ಕೃಷ್ಣನ್ ಎಂಬವರು ಕಳೆದೊಂದು ತಿಂಗಳಿನಿಂದ, ಸ್ಥಳೀಯರ ಕಷ್ಟ ದುಃಖಕ್ಕೆ ನೆರವಾಗುತ್ತಿದ್ದಾರೆ. ಆಹಾರ ಕಿಟ್ಗಳನ್ನು ವಿತರಿಸುವುದರಿಂದ ಹಿಡಿದು ಮೆಡಿಸಿನ್ ವಿತರಣೆಯುವರೆಗೂ, ಊರು ಕೇರಿಗಳಲ್ಲಿ ಸ್ಯಾನಿಟೈಸ್ ಮಾಡುವುದರಿಂದ ಹಿಡಿದು, ಊರಿನವರ ಆರೋಗ್ಯ ಯೋಗಕ್ಷೇಮಕ್ಕೆ ಸಹಾಯ ಮಾಡುವರೆಗೂ ತಮ್ಮದೆ ಆದ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಅದರಲ್ಲೂ ಪಕ್ಷದ ಬ್ಯಾನರ್ನ ಅಡಿಯಲ್ಲಿ ಇವರು ಮಾಡುತ್ತಿರುವ ಸೇವೆ, ಪಕ್ಷದ ಮುಖಂಡರಿಂದಲೂ ಶ್ಲಾಘನೆ ಪಡೆದುಕೊಂಡಿದೆ.
ಗೋಕುಲ್ ಕೃಷ್ಣನ್ ಬಡತನದಿಂದ ಮೇಲಕ್ಕೆ ಬಂದವರು, ಬುದುಕಿನ ಒಂದೊಂದೆ ಪ್ರಗತಿಯ ಹೆಜ್ಜೆಗಳ ಮೂಲಕ, ಬಡತನವನ್ನು ಸೋಲಿಸಿ, ಬದುಕಿಗೆ ಉತ್ತಮ ಅಡಿಪಾಯವವನ್ನು ಸೃಷ್ಟಿಸಿಕೊಂಡಿದ್ದಾರೆ. ಅದರಲ್ಲಿಯೇ ಕೆರೆ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜ ಕೊಟ್ಟಿದ್ದನ್ನ ಸಮುದಾಯಕ್ಕೆ ಕೊಡುವಕೆಲಸ ಮಾಡುತ್ತಿದ್ದಾರೆ.
ಭದ್ರಾವತಿಯ ಹಿರಿಯೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಗೋಕಲ್ ಕೃಷ್ಣನ್ ಅವರು ಕಳೆದೊಂದು ತಿಂಗಳಿನಿಂದ, ಸ್ಥಳೀಯರ ಕಷ್ಟ ದುಃಖಕ್ಕೆ ನೆರವಾಗುತ್ತಿದ್ದಾರೆ. ಆಹಾರ ಕಿಟ್ಗಳನ್ನು ವಿತರಿಸುವುದರಿಂದ ಹಿಡಿದು ಮೆಡಿಸಿನ್ ವಿತರಣೆಯುವರೆಗೂ, ಊರು ಕೇರಿಗಳಲ್ಲಿ ಸ್ಯಾನಿಟೈಸ್ ಮಾಡುವುದರಿಂದ ಹಿಡಿದು, ಊರಿನವರ ಆರೋಗ್ಯ ಯೋಗಕ್ಷೇಮಕ್ಕೆ ಸಹಾಯ ಮಾಡುವರೆಗೂ ತಮ್ಮದೆ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153