ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿತ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಇಂದು ಹೊಸನಗರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಮಾತನಾಡಿ ಆಡಳಿತ ನಡೆಸುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಪಲವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ ಅತಿ ಕಡಿಮೆ ದರದಲ್ಲಿ ನೀಡುತ್ತೆವೆ ಎಂದು ಪ್ರಣಾಳಿಕೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೂರು ರೂಪಾಯಿ ಗಡಿ ದಾಟಿಸಿದೆ ಇಂದು ಖಂಡನೀಯ. ರೈತರ ವ್ಯವಸಾಯಕ್ಕೆ ಟ್ರಾಕ್ಟರ್ ಟೀಲರ್ ಮುಂತಾದ ಇಂಧನ ಉಪಕರಣ ಅದುನಿಕವಾಗಿ ಬಳಸುತ್ತಿದ್ದರು ಇದೆ ರೀತಿ ಪೆಟ್ರೋಲ್ ಡಿಸೇಲ್ ಧರ ಹೇಚ್ಚಾದರೆ ಮುಂದಿನ ದಿನಗಳಲ್ಲಿ ಹಳೆ ಪದ್ದತಿಯಲ್ಲಿರುವ ಎತ್ತುಗಳನ್ನ ರೈತರು ಉಳುಮೆಗೆ ಹುಡುಕಿಕೋಳ್ಳಬೇಕಾಗುತ್ತದೆ ಇದೆ ಮೋದಿಯವರ ಆಚ್ಚೆ ದಿನ್ ಇರಬೇಕು ಎಂದು ದೂರಿದರು. ತಕ್ಷಣ ಪೆಟ್ರೋಲ್ ಡಿಸೇಲ್ ದರ ಇಳಿಸದ್ದಿದರೆ ಕೊರೊನಾ ನಡುವೆಯೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದರು.. ಸಾಗರ ವಿಧಾನ ಸಭಾ ಕ್ಷೇತ್ರದ NSUI ಅಧ್ಯಕ್ಷ ಪ್ರವೀಣ್ ಕುಮಾರ್ ರವರು , ಹಾಗೂ ಯುವ ಕಾಂಗ್ರೆಸ್ ನಾಯಕ ರಾಘು ದಣಂದೂರು ಹಾಗೂ ಕುಮಾರ್ ರವರು ಮುಂತಾದವರು ಇದ್ದರು…..

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153