ಶಂಕರಘಟ್ಟ ಜ.30: ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಅವರಿಂದ ಮೊದಲ್ಗೊಂಡು ಬಹಳಷ್ಟು ಮಹನೀಯರು ಬಲಿದಾನ ನೀಡಿದ್ದಾರೆ. ಆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳು ಸದಾ ನಮ್ಮನ್ನು ಜಾಗೃತ ಸ್ಥಿತಿಯಲ್ಲಿಡಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶಕ್ಕಾಗಿ ನಾವು ಇಂದು ಪ್ರಾಣವನ್ನೇನು ಕೊಡಬೇಕಾಗಿಲ್ಲ, ಸಚ್ಚರಿತ್ರೆ ಮತ್ತು‌ ಸನ್ನಡತೆಯಿಂದ ತಂತಮ್ಮ‌ ಕ್ಷೇತ್ರಗಳಲ್ಲಿ ನಿಷ್ಢೆಯಿಂದ ದುಡಿದು ಸಧೃಡ ದೇಶ ಕಟ್ಟುವ ಮೂಲಕ ಹುತಾತ್ಮರ ಪ್ರಾಣ, ಬಲಿದಾನಕ್ಕೆ ಗೌರವ ಸಲ್ಲಿಸೋಣ ಎಂದು ಸಲಹೆ ನೀಡಿದರು.

ಭಾರತದ ಸರ್ವ ಜನಾಂಗಗಳ ಕಲ್ಯಾಣದ ಬಗ್ಗೆ ಸದಾ ಚಿಂತಿಸುತ್ತಿದ್ದ ಗಾಂಧೀಜಿ, ಜಾತಿ‌ಮತದಿಂದಾಚೆಗೆ ಎಲ್ಲರಿಗೂ ಸಮಪಾಲು ಮತ್ತು ಸಮಾನ ಅವಕಾಶ ನೀಡುವಂತೆ ಬಲವಾಗಿ ಪ್ರತಿಪಾದಿಸಿದವರು ಎಂದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್ ಡಿ ವಿರೂಪಾಕ್ಷ, ಡಾ.ಗಜಾನನ ಪ್ರಭು, ಡಾ.ರವೀಂದ್ರ ಗೌಡ, ಸೇರಿದಂತೆ ವಿವಿಯ ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.