31/01/2022 ಸೋಮವಾರ ಬೆಳಿಗ್ಗೆ ಶಿವಮೊಗ್ಗ ನಗರದ, ಮಹಾನಗರ ಪಾಲಿಕೆಯ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರಿಗೆ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು ಮನವಿ ಸಲ್ಲಿಸಿದರು.

25/10/2021 ರಿಂದ ಸ್ಮಾರ್ಟ್ ಸಿಟಿ ಅಭಿವೃದ್ಧಿ ನೆಪದಲ್ಲಿ ನಗರದಲ್ಲಿ ಇರುವ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೇಬಿಸುವ ಕಾರ್ಯ ನೆಡೆಯುತ್ತಿದ್ದು, ಏಕಾಏಕಿ ಒಕ್ಕಲೆಸುವಿಕೆ ವಿರುದ್ಧ ಬೃಹತ್ ಪ್ರತಿಭಟನೆಯ ಮೂಲಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸ್ಥಳೀಯ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ರವರಿಗೆ, ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೇಬಿಸಬಾರದು, ಪಟ್ಟಣ ಮಾರಾಟ ಸಮಿತಿಯ ಸಭೆ ಕರೆದು ಸೂಕ್ತವಾದ ವ್ಯಾಪಾರದ ಸ್ಥಳ ಗುರುತಿಸಿ, ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿದ ನಂತರ ನಾನ್ ವೆಂಡಿಂಗ್ ಝೂನ್ ಎಂದು ಘೋಷಣೆ ಮಾಡಿ ಎಂದು 28/10/2021 ರಂದು ಮನವಿ ಮಾಡಲಾಯಿತು. ತದ ನಂತರದಲ್ಲಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ, ಮಹಾ ಪೌರರಿಗೆ, ಉಪಪೌರರಿಗೆ, ಆಡಳಿತ ಪಕ್ಷದ ನಾಯಕರಿಗೆ, ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಲಾಯಿತು. ನಂತರ ನಿಂತ ತೆರವು ಕಾರ್ಯಾಚರಣೆ. ಸದ್ದಿಲ್ಲದೆ ಒಂದು ತಿಂಗಳಿಂದ ಬೀದಿ ಬದಿ ವ್ಯಾಪಾರಸ್ಥರನ್ನು ಪಾಲಿಕೆಯ ಪಟ್ಟಣ ಮಾರಾಟ ಸಮಿತಿಯ ಗಮನಕ್ಕೂ ಬರದೆ ವಿವಿಧ ಇಲಾಖೆ ಅಧಿಕಾರಿಗಳಿಂದ ನಗರವು
ಸ್ಮಾರ್ಟ್ ಕಾಣುವ ನೆಪದಿಂದ ಸ್ಮಾರ್ಟ್ ಸಿಟಿ ಅಭಿವೃದ್ಧಿಯ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಒಕ್ಕಲೇಬಿಸುವ ಕಾರ್ಯ ನೆಡೆಯುತ್ತಿದೆ.

ಐದು ದಿನಗಳ ಹಿಂದೆ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಮತ್ತು ಟಿವಿಸಿ ಸದಸ್ಯರು ಅಧಿಕಾರಿಗಳೊಂದಿಗೆ ವಿವಿಧ ಕನ್ಸುರೇನ್ಸಿಯ ಸ್ಥಳ ಪರಿಶೀಲನೆ ನಡೆಸಿದರು, ಎರಡು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕರ ಭೇಟಿ ಮಾಡಿ ಬೀದಿ ಬದಿ ವ್ಯಾಪಾರಸ್ಥರ ವಾಸ್ತವ ಸ್ಥಿತಿಯ ಬಗ್ಗೆ ಒಂದು ವಾರದಿಂದ ರಾಯಲ್ ಆರ್ಕೇಡ್ ಎದುರು ಇರುವ ಬೀದಿ ಬದಿ ವ್ಯಾಪಾರಸ್ಥರ ಕಾಮಗಾರಿಯ ನೆಪದಲ್ಲಿ ತೆರವು ಮಾಡಿರುವ ವಿಷಯ ಗಮನಕ್ಕೆ ತರಲಾಯಿತು. ಇಂದು ಆಯುಕ್ತರಿಗೆ ಮನವಿ ಸಲ್ಲಿಸುವ ವೇಳೆ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾದ ಶ್ರೀ ಮತಿ ಯಮುನಾ ರಂಗೇಗೌಡ, ಹಾಗೂ ಮಾಜಿ ವಿರೋಧ ಪಕ್ಷದ ನಾಯಕರು ಹಾಲಿ ಸದಸ್ಯರಾದ ಶ್ರೀ ರಮೇಶ್ ಹೆಗ್ಡೆ ರವರಿಗೂ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಪಾಲಿಕೆಯ ಕೃಪಾಕಟಾಕ್ಷ ವಿರಲಿ ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಹೆಗ್ಡೆ ರವರು, ಒಕ್ಕಲೇಬಿಸುವಲ್ಲಿ ನಮ್ಮ ಪಾಲಿಕೆ ಸದಸ್ಯರ ಪಾತ್ರವಿಲ್ಲ, ಬೀದಿ ಬದಿ ವ್ಯಾಪಾರಸ್ಥರ 2014ರ ಆಯ್ಕೆ ಅನ್ವಯ town vending cameeti ಸದಸ್ಯರ ನಿರ್ಣಯವೇ ಅಂತಿಮ, ಇದಕ್ಕೆ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ, ಬೀದಿ ಬದಿ ವ್ಯಾಪಾರಸ್ಥರನ್ನು ಸೂಕ್ತವಾದ ವ್ಯಾಪಾರದ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವರೆಗೂ ಅವರನ್ನು ಒಕ್ಕಲೆಬ್ಬಿಸಬೇಡಿ ಎಂದು ಆಯುಕ್ತರಿಗೆ ತಿಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ಪಟ್ಟಣ ಮಾರಾಟ ಸಮಿತಿಯ ಸಭೆ ಕರೆಯದೆ ಸಭೆಯಲ್ಲಿ ವಿಷಯ ತಿಳಿಸದೆ ಏಕಾಏಕಿ ಒಕ್ಕಲೆಬಿಸಿದರೆ, ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಂದ ಬೃಹತ್ ಪ್ರತಿಭಟನೆಯ ಮೂಲಕ ಮಹಾನಗರ ಪಾಲಿಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು, ಹದಿನೈದು ದಿನಗಳಿಂದ ರಾಯಲ್ ಆರ್ಕೇಡ್ ಎದುರು ಬೀದಿ ಬದಿ ವ್ಯಾಪಾರಸ್ಥರು ಅಂಗಡಿಗಳನು ಹಾಕಿರುದಿಲ್ಲ ಅಲ್ಲಿ ನೆಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿ ಬೇಗನೆ ಮುಗಿಸಿ ಕೊಡಿ ಎಂದು ವಿನಂತಿಸಲಾಯಿತು.

ನಂತರ ಮಾಧ್ಯಮದ ಮೂಲಕ ಈಗ ನಡೆಯುವ ಕೇಂದ್ರ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಹಾಗೂ ಮಿತ್ತ ಸಚಿವರಿಗೆ ಆತ್ಮ ನಿರ್ಭರ ಯೋಜನೆ ಅಡಿ 10, ಸಮೃದ್ಧಿ ಯಡಿ 20 ಹಾಗೂ 50 ಸಾವಿರ ರೂಪಾಯಿ ಸಾಲ ನೀಡುತ್ತಿದ್ದು ಅದನ್ನು 1ನಂತರ 2 ಲಕ್ಷಕ್ಕೆ ಹೆಚ್ಚಿಸಿ, ಬಹಳಷ್ಟು ಬೀದಿ ಬದಿಯ ವ್ಯಾಪಾರಿಗಳಿಗೆ ‌ಸೂರಿಲ್ಲಿ, ಬಾಡಿಗೆ ಮನೆಗಳಲ್ಲಿ ಇರುವರು, ಪ್ರತ್ಯೇಕ ಇವರಿಗೆ ಸೂರಿನ ಘೋಷಣೆ ಅಗಲಿ, ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೂ ವಿದ್ಯಾಬ್ಯಾಸಕ್ಕೆ ಪ್ರತ್ಯೇಕ ಪ್ರೋತ್ಸಾಹ ಧನ ಘೋಷಣೆ ಅಗಲಿ, ಅಸಂಘಟಿತ ಕಾರ್ಮಿಕರಿಗೂ ಕಟ್ಟಡ ಕಾರ್ಮಿಕರ ಇತರೆ ಸೌಲಭ್ಯಗಳ ದೊರೆಯುವಂತೆ ಬಜೆಟ್ ನಲ್ಲಿ ಘೋಷಣೆ ಅಗಲಿ, ಬೀದಿ ಬದಿ ವ್ಯಾಪಾರಿಗಳನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿಯ ನೆಪದಲ್ಲಿ ಒಕ್ಕಲೇಬಿಸದೇ ಸಾರ್ವಜನಿಕ ತಂಗುದಾಣ, ಜನ ನಿಲ್ಲುವ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಡಿ, ನಿರುದ್ಯೋಗ ನಿವಾರಣೆ ಆಗುವುದು, ಇವರಿಗೆ ಸಾಲದ ಜೋತೆ ಇತರೆ ಸೌಲಭ್ಯಗಳನ್ನು ಕಲ್ಲಿಸಿದರೆ ಅಭಿವೃದ್ಧಿ ಜೋತೆಗೆ ದೇಶದ ಜಿಡಿಪಿ ಯು ಬೆಳೆಯುವುದು ಬೀದಿ ಬದಿ ವ್ಯಾಪಾರಿಗಳಿಗೆ ನಿಗಮ ಮಂಡಳಿ ರಚನೆ ಮಾಡಿ, ಒಟ್ಟಾರೆ ಸಮಸ್ತ ರಾಷ್ಟದ ರಾಜ್ಯದ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ಯಾಕೇಜ್ ಘೋಷಣೆ ಮಾಡಿ ಎಂದು ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶ್ರೀ ಬಾಬು, ಶ್ರೀಮಣಿಗೌಂಡರ್, ಶ್ರೀ ಗೋಪಾಲ್, ಚಂದ್ರು ಹಾಗೂ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…